
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಮಳಿಗೆಯಲ್ಲಿ ಅರಣ್ಯ ಅಧಿಕಾರಿ ಅಕ್ಷಿತ ಕೆ ಶೆಟ್ಟಿ ಗ್ರಾಹಕರದ ಅಕ್ಷಿತ ಪೂಜಾರಿಗೆ ನೀಡುವ ಮೂಲಕ ಆಚರಿಸಲಾಯಿತು.
ಬಳಿಕ ಮಾತನಾಡಿದ ಅವರು
ಭೂಮಿಯಲ್ಲಿನ ಹಸುರು ಪದರವನ್ನು ಹೆಚ್ಚಿಸುವ ಕಾರ್ಯವು ವ್ಯಾಪಕವಾಗಿ ನಡೆದರೆ ಹವಾಮಾನ ವೈಪರೀತ್ಯಗಳು ಮತ್ತು ವಿಕೋಪಗಳು ಕ್ರಮೇಣವಾಗಿ ಕಡಿಮೆಯಾಗಿ ಭೂಮಿಯಲ್ಲಿ ಸಮತೋಲನ ಹೆಚ್ಚುತ್ತದೆ. ಗಿಡಮರಗಳನ್ನು ನಮ್ಮ ಮಕ್ಕಳಂತೆ ಕಾಳಜಿ ವಹಿಸಿ ಸಂರಕ್ಷಿಸಬೇಕಾದ ಅಗತ್ಯತೆ ಇದೆ. ಮುಂದಿನ ಪೀಳಿಗೆಗೆ ಸಸ್ಯ ಶಾಮಲೆ ಎಂಬ ನೈಜ ಅರ್ಥವಿರುವ ಭೂಮಿಯನ್ನು ಹಸ್ತಾಂತರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್,ಪುರಂದರ ತಿಂಗಲಾಯ,ರಾಘವೇಂದ್ರ ನಾಯಕ್ ಹಾಗೂ ಸಿಬ್ಬಂದಿ ವರ್ಗದವರು,ಗ್ರಾಹಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಂಝೀಮ್ ಶಿರ್ವ
ಸ್ವಾಗತಿಸಿ ವಂದಿಸಿದರು.
