
ಮಂಗಳೂರು: ನಗರದ ಕಂಕನಾಡಿಯ ಬೈಪಾಸ್ ರಸ್ತೆಯ ಬಳಿಯ ಸಿಟಿ ಗೋಲ್ಡ್ ಸಂಸ್ಥೆಯ ವತಿಯಿಂದ ಮೇ 20ರಿಂದ ಜೂನ್ 5ರವರೆಗೆ ‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ ನಡೆಯಲಿದೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪ್ರೈಡ್ ಉದ್ಘಾಟಿಸಲಿದ್ದು, ‘ವೆಡ್ಡಿಂಗ್ ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನ್’ನ್ನು ಬಿ ಹ್ಯೂಮನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಸೀಫ್ ಡೀಲ್ಸ್ ಉದ್ಘಾಟಿಸಲಿದ್ದಾರೆ. ಹಾಗೂ ಫೆಸ್ಟಿವಲ್ ಪ್ರಯುಕ್ತ ‘ಆರ್ ಯು ದಿ ಡೈಮಂಡ್ ಸ್ಟಾರ್’ ಸ್ಪರ್ಧೆ ನಡೆಯಲಿದ್ದು, ಅದರ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
