Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಕದನ ವಿರಾಮ| ಮನೆಗೆ ಮರಳುತ್ತಿರುವ ಗಾಝಾ ಜನತೆ; ಅವಶೇಷಗಳಡಿ ತಮ್ಮವರಿಗಾಗಿ ಹುಡುಕಾಟ

    RSS ಭಾರತದ ತಾಲಿಬಾನ್, ತಮಿಳುನಾಡಿನಂತೆ ಇಲ್ಲೂ ಮಾಡಬೇಕು ಎಂದ ಹರಿಪ್ರಸಾದ್!

    RSS ಭಾರತದ ತಾಲಿಬಾನ್, ತಮಿಳುನಾಡಿನಂತೆ ಇಲ್ಲೂ ಮಾಡಬೇಕು ಎಂದ ಹರಿಪ್ರಸಾದ್!

    ರಾಜ್ಯದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲಿದೆಯಾ ಸರ್ಕಾರ?: ಪ್ರಸ್ತಾವನೆಯಲ್ಲಿ ಏನಿದೆ?

    ರಾಜ್ಯದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲಿದೆಯಾ ಸರ್ಕಾರ?: ಪ್ರಸ್ತಾವನೆಯಲ್ಲಿ ಏನಿದೆ?

    ಬಿಹಾರ ಚುನಾವಣೆ; 240 ಸ್ಥಾನಗಳ ಹಂಚಿಕೆ ಮಾಡಿದ NDA, ಯಾರು ಯಾರಿಗೆ ಎಷ್ಟೆಷ್ಟು ಕ್ಷೇತ್ರಗಳು?

    ಮಂಗಳೂರು: ಕ್ಯಾಬ್ ಚಾಲಕನ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಬಂಧನ

    ತಾಲಿಬಾನ್ ಸಚಿವರ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗಿರಲಿಲ್ಲ ಅವಕಾಶ

    ಕೊಳತ್ತಮಜಲು ರೆಹಮಾನ್ ಕೊಲೆ ಪ್ರಕರಣ: ಭರತ್ ಕುಮ್ಡೇಲ್ ಎ 1 ಆರೋಪಿ

    ಮಂಗಳೂರು: ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಕೇಸ್ ಆರೋಪಿ ರೌಡಿ ಶೀಟರ್ ಭರತ್ ಕುಮ್ಡೇಲು ಶರಣಾಗತಿ

    ಮಂಗಳೂರು: ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಕೇಸ್ ಆರೋಪಿ ರೌಡಿ ಶೀಟರ್ ಭರತ್ ಕುಮ್ಡೇಲು ಶರಣಾಗತಿ

    SDPI ಮುಖಂಡ ರಿಯಾಝ್ ಕಡಂಬುಗೆ ನ್ಯಾಯಾಂಗ ಬಂಧನ

    SDPI ಮುಖಂಡ ರಿಯಾಝ್ ಕಡಂಬುಗೆ ನ್ಯಾಯಾಂಗ ಬಂಧನ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ

ಕದನ ವಿರಾಮ| ಮನೆಗೆ ಮರಳುತ್ತಿರುವ ಗಾಝಾ ಜನತೆ; ಅವಶೇಷಗಳಡಿ ತಮ್ಮವರಿಗಾಗಿ ಹುಡುಕಾಟ

editor tv by editor tv
October 12, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ಕದನ ವಿರಾಮದ ಹಿನ್ನೆಲೆ, ಇಸ್ರೇಲ್ ಗಾಝಾ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸಿದ್ದು, ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಲ್ಪಟ್ಟಿದ್ದ ಸಾವಿರಾರು ಪ್ಯಾಲೆಸ್ತೀನಿಯರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

ಪ್ರಮುಖವಾಗಿ ಉತ್ತರ ಗಾಝಾದತ್ತ ಜನರು ಆಗಮಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಇಸ್ರೇಲ್ ಆಕ್ರಮಣಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯ ಜನರು ವಾಸಿಸುತ್ತಿದ್ದರು. ಬಾಂಬ್ ದಾಳಿ ನಡೆಸಿ ಇಸ್ರೇಲಿ ಸೇನೆ ಅವರಲ್ಲಿ ಹಲವರನ್ನು ಸುಖಾಸುಮ್ಮನೆ ಹತ್ಯೆಗೈದಿದೆ. ಇನ್ನುಳಿದವರು ತಮ್ಮದೆಲ್ಲವನ್ನು ಬಿಟ್ಟು ಬೇರೆಡೆಗೆ ತೆರಳಿದ್ದರು.

ಕಳೆದ ತಿಂಗಳು ಇಸ್ರೇಲ್ ಸೇನೆ ಗಾಝಾ ಪಟ್ಟಿಯ ಗಾಝಾ ನಗರದಲ್ಲಿ ನೆಲದ ದಾಳಿಯನ್ನು ತೀವ್ರಗೊಳಿಸಿದಾಗ ಸಮುದ್ರ ತೀರದ ಅಲ್- ರಶೀದ್ ರಸ್ತೆಯ ಮೂಲಕ ಸಾವಿರಾರು ಅಮಾಯಕ, ಅಸಹಾಯ, ಜನರು ಪಲಾಯನ ಮಾಡಿದ್ದ ಫೋಟೋ, ವಿಡಿಯೋಗಳನ್ನು ಮಾಧ್ಯಮಗಳು ಪ್ರಕಟಿಸಿತ್ತು. ಇದೀಗ ಅದೇ ರಸ್ತೆಯ ಮೂಲಕ ಜನರು ಹಿಂದಿರುಗುವ ದೃಶ್ಯಗಳನ್ನು ತೋರಿಸುತ್ತಿವೆ.

ಗಾಝಾ ಪಟ್ಟಿಯ ನಗರಗಳಾದ ಗಾಝಾ, ರಫಾ, ಖಾನ್ ಯೂನಿಸ್, ಜಬಲಿಯಾ, ದೇರ್ ಅಲ್ ಬಲಾಹ್, ಬನೀ ಸುಹೈಲಾ, ಬೈತ್ ಹನೌನ್, ಬೈತ್ ಲಾಹಿಯಾ ಮತ್ತು ಅಬಾಸನ್ ಅಲ್-ಕಬೀರಾಗಳ ಪೈಕಿ ಗಾಝಾ, ರಫಾ, ಜಬಲಿಯಾ ಮತ್ತು ಖಾನ್ ಯೂನಿಸ್‌ಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದರು. ಗಾಝಾ ನಗರದಲ್ಲಿ ಅತೀ ಹೆಚ್ಚು, ಅಂದರೆ ಸುಮಾರು 6 ಲಕ್ಷ ಜನರಿದ್ದರು.

ಇಸ್ರೇಲ್ ಗಾಝಾ, ರಫಾ, ಖಾನ್ ಯೂನಿಸ್ ಮತ್ತು ಜಬಲಿಯಾದ ಮೇಲೆಯೇ ಹೆಚ್ಚಿನ ದಾಳಿ ನಡೆಸಿದೆ. ಪರಿಣಾಮ 70 ಸಾವಿರದಷ್ಟು ಜನರು ಸಾವನ್ನಪ್ಪಿರುವ ಲೆಕ್ಕ ಸಿಕ್ಕಿದೆ. ಈ ನಗರಗಳ ಬಹುತೇಕ ಕಟ್ಟಡಗಳನ್ನು ಇಸ್ರೇಲ್ ಧ್ವಂಸ ಮಾಡಿದೆ. ಈಗ ಎಲ್ಲಿ ನೋಡಿದರೂ ಬರೀ ಅವಶೇಷಗಳ ರಾಶಿ ಮಾತ್ರ ಕಾಣುತ್ತಿದೆ. ಈ ಅವಶೇಷಗಳ ಅಡಿಯಲ್ಲಿ ಇನ್ನೆಷ್ಟು ಸಾವಿರ ಜನರ ಮೃತ ದೇಹಗಳು ಇದೆ ಎಂದು ಗೊತ್ತಿಲ್ಲ.

ಇಸ್ರೇಲ್ ಬಾಂಬ್ ದಾಳಿ ನಿಲ್ಲಿಸಿರುವ ಹಿನ್ನೆಲೆ ಉತ್ತರ ಗಾಝಾದತ್ತ ಹಿಂದಿರುಗಿದ ಜನರು, ರಕ್ಷಣಾ ತಂಡಗಳ ಜೊತೆಗೂಡಿ ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಗಾಝಾದ ಸುದ್ದಿ ಸಂಸ್ಥೆ ವಫಾದ ವರದಿ ಪ್ರಕಾರ, ಶನಿವಾರ ಒಂದೇ ದಿನ ಸುಮಾರು 135 ಮೃತದೇಹಗಳು ಅವಶೇಷಗಳಡಿ ಸಿಕ್ಕಿವೆ.

ಗಾಝಾದಾದ್ಯಂತ ಆಸ್ಪತ್ರೆಗಳಿಂದ ಹಲವಾರು ಶವಗಳನ್ನು ಹೊರ ತೆಗೆಯಲಾಗಿದೆ. ಈ ಪೈಕಿ 43 ಶವಗಳನ್ನು ಅಲ್-ಶಿಫಾ ಆಸ್ಪತ್ರೆಗೆ ಮತ್ತು 60 ಶವಗಳನ್ನು ಗಾಝಾ ನಗರದ ಅಲ್-ಅಹ್ಲಿ ಅರಬ್ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವುಗಳನ್ನು ನುಸೈರಾತ್, ದೇರ್ ಅಲ್-ಬಲಾಹ್ ಮತ್ತು ಖಾನ್ ಯೂನಿಸ್ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ ಎಂದು ಅಲ್-ವಫಾ ವರದಿ ಹೇಳಿದೆ.

ಅಲ್-ರಶೀದ್ ರಸ್ತೆಯ ಮೂಲಕ ಮಕ್ಕಳು, ಮಹಿಳೆಯರು, ವೃದ್ಧರು, ಕಾರು, ವ್ಯಾನ್‌ ಮತ್ತು ಪೀಠೋಪಕರಣಗಳಿಂದ ತುಂಬಿದ ಕತ್ತೆ ಬಂಡಿಗಳ ಮೂಲಕ ಗಾಝಾ ನಗರದ ಕಡೆಗೆ ಸಾಗುತ್ತಿರುವ ದೃಶ್ಯಗಳನ್ನು ಅಲ್ ಜಝೀರಾ ಸುದ್ದಿ ಸಂಸ್ಥೆಯ ತಾರೀಖ್ ಅಬೂ ಅಝೂಮ್ ವಿವರಿಸಿದ್ದಾರೆ. ಜನರು ತಾತ್ಕಾಲಿಕ ಡೇರೆಗಳನ್ನು ತೆಗೆದು ತಮ್ಮ ನಾಶವಾದ ಮನೆಗಳ ಅವಶೇಷಗಳ ಮೇಲೆ ಹೊಸ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ತಿಂಗಳುಗಳ ಕಾಲ ನಿರಂತರವಾಗಿ ಇಸ್ರೇಲ್ ಬಾಂಬ್ ದಾಳಿ ನಡೆಸಿದ ಹಿನ್ನೆಲೆ, ಗಾಝಾ ನಗರದಲ್ಲಿ ಬಹುತೇಕ ಏನೂ ಉಳಿದಿಲ್ಲ. ಸಂಪೂರ್ಣ ವಿನಾಶ ಉಂಟಾಗಿದೆ. ಅಲ್ಲಿ ಕಾರ್ಯನಿರ್ವಹಿಸುವ ಯಾವುದೇ ಮೂಲಸೌಕರ್ಯವಿಲ್ಲ, ಶುದ್ಧ ನೀರಿಲ್ಲ, ವಿದ್ಯುತ್ ಇಲ್ಲ. ಒಂದು ಕಾಲದಲ್ಲಿ ಮನೆಗಳಾಗಿದ್ದ ಕಟ್ಟಡಗಳ ಅವಶೇಷಗಳ ರಾಶಿ ಮಾತ್ರ ಇವೆ ಎಂದು ಅಬೂ ಅಝೂಮ್ ತಿಳಿಸಿದ್ದಾರೆ. 

ಹಿಂದಿರುಗುವ ಕುಟುಂಬಗಳಿಗೆ ತಾತ್ಕಾಲಿಕ ಡೇರೆಗಳು ಮತ್ತು ಮೊಬೈಲ್ ಆಶ್ರಯಗಳ ತುರ್ತು ಅವಶ್ಯಕತೆಯಿದೆ ಎಂದು ದೇರ್ ಅಲ್-ಬಲಾಹ್‌ನಿಂದ ವರದಿ ಮಾಡುತ್ತಿರುವ ಅಲ್ ಜಝೀರಾದ ಮೋತ್ ಕಹ್ಲೌಟ್ ಹೇಳಿದ್ದಾರೆ. ಇಲ್ಲಿನ ಜನರಲ್ಲಿ ಏನೂ ಉಳಿದಿಲ್ಲ. ಏನಿದೆಯೋ ಅದನ್ನು ಹೊತ್ತುಕೊಂಡು ಅಜ್ಞಾತದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಅಲ್- ರಶೀದ್ ರಸ್ತೆಯ ಮೂಲಕ ಹಾದು ಹೋಗುತ್ತಿರುವ ಅನೇಕ ಜನರನ್ನು ಅಲ್‌-ಜಝೀರಾದ ವರದಿಗಾರರು ಮಾತನಾಡಿಸಿದ್ದಾರೆ. ಈ ವೇಳೆ ಕೆಲವರು ನಮ್ಮ ಊರುಗಳತ್ತ ಹೋಗುತ್ತಿದ್ದೇವೆ. ಅಲ್ಲಿ ನಮ್ಮ ಮನೆ ಇದೆಯೋ, ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ. ಇನ್ನೂ ಹಲವರು, ಮಕ್ಕಳು, ಗಂಡ, ಹೆಂಡತಿ, ಸಹೋದರರನ್ನು ಕಳೆದುಕೊಂಡ ನೋವು ತೋಡಿಕೊಂಡಿದ್ದಾರೆ. ಈ ನಡುವೆಯೂ ನಾಶಗೊಂಡ ನಗರದಲ್ಲಿ ಅವಶೇಷಗಳ ನಡುವೆ ಹೊಸ ಬದುಕು ಕಟ್ಟಿಕೊಳ್ಳುವ ಉತ್ಸಾಹವನ್ನು ಅವರು ವ್ಯಕ್ತಪಡಿಸಿದ್ದಾರೆ.

Previous Post

RSS ಭಾರತದ ತಾಲಿಬಾನ್, ತಮಿಳುನಾಡಿನಂತೆ ಇಲ್ಲೂ ಮಾಡಬೇಕು ಎಂದ ಹರಿಪ್ರಸಾದ್!

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.