Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

    ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್‌ – ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ಗಾಝಾ ಕದನ ವಿರಾಮಕ್ಕೆ ಇಸ್ರೇಲ್- ಹಮಾಸ್ ಒಪ್ಪಿಗೆ

    ಮೈಸೂರು ದಸರೆಗೆ ಬಲೂನ್‌ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ – ರೇಪ್‌ & ಮರ್ಡರ್‌ ಶಂಕೆ

    ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಸಿಜೆಐ ಮೇಲೆ ದಾಳಿ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿ ಕೋರಿ ಪತ್ರ

    ಬಿಜೆಪಿ ಶಾಸಕ, ಮುಖ್ಯಾಧಿಕಾರಿ ಕಿರುಕುಳ: ಪತ್ರ ಬರೆದಿಟ್ಟು ಕಂದಾಯ ನಿರೀಕ್ಷಕ ನಾಪತ್ತೆ!

    ಕೊಪ್ಪಳ:ಬಿಜೆಪಿ ಮುಖಂಡನ ಬರ್ಬರ  ಕೊಲೆ:ನಾಲ್ವರ ಬಂಧನ

    ವೈದ್ಯಕೀಯ ಕಾಲೇಜಿನ ನೀರಿನ ಟ್ಯಾಂಕ್​ನಲ್ಲಿತ್ತು ಶವ, ಅದೇ ನೀರು ಕುಡೀತಿದ್ರು ವಿದ್ಯಾರ್ಥಿಗಳು, ಗೊತ್ತಾಗಿದ್ಹೇಗೆ?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

    ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್‌ – ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ಗಾಝಾ ಕದನ ವಿರಾಮಕ್ಕೆ ಇಸ್ರೇಲ್- ಹಮಾಸ್ ಒಪ್ಪಿಗೆ

    ಮೈಸೂರು ದಸರೆಗೆ ಬಲೂನ್‌ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ – ರೇಪ್‌ & ಮರ್ಡರ್‌ ಶಂಕೆ

    ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಸಿಜೆಐ ಮೇಲೆ ದಾಳಿ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿ ಕೋರಿ ಪತ್ರ

    ಬಿಜೆಪಿ ಶಾಸಕ, ಮುಖ್ಯಾಧಿಕಾರಿ ಕಿರುಕುಳ: ಪತ್ರ ಬರೆದಿಟ್ಟು ಕಂದಾಯ ನಿರೀಕ್ಷಕ ನಾಪತ್ತೆ!

    ಕೊಪ್ಪಳ:ಬಿಜೆಪಿ ಮುಖಂಡನ ಬರ್ಬರ  ಕೊಲೆ:ನಾಲ್ವರ ಬಂಧನ

    ವೈದ್ಯಕೀಯ ಕಾಲೇಜಿನ ನೀರಿನ ಟ್ಯಾಂಕ್​ನಲ್ಲಿತ್ತು ಶವ, ಅದೇ ನೀರು ಕುಡೀತಿದ್ರು ವಿದ್ಯಾರ್ಥಿಗಳು, ಗೊತ್ತಾಗಿದ್ಹೇಗೆ?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ

ಪಶ್ಚಾತ್ತಾಪ ಖಂಡಿತಾ ಇಲ್ಲ, ಶೂ ಎಸೆದು ಸರಿಯಾದ ಕೆಲಸ ಮಾಡಿದ್ದೇನೆ ಎಂದ ಹಿರಿಯ ವಕೀಲ ರಾಕೇಶ್‌ ಕಿಶೋರ್‌!

editor tv by editor tv
October 7, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

Advocate Rakesh Kishore CJI Shoe

Advocate Rakesh Kishore Has No Regret ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ. 

ನವದೆಹಲಿ (ಅ.7): ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಮಾನತಾಗಿರುವ ಹಿರಿಯ ವಕೀಲ ರಾಕೇಶ್ ಕಿಶೋರ್, ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಮತ್ತು ಈ ಘಟನೆ ಗವಾಯಿ ಅವರು ಸನಾತನ ಧರ್ಮದ ವಿರುದ್ಧ ನಿರಂತರ ನಿಲುವು ತಾಳಿದ್ದಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ಕಲಾಪದ ವೇಳೆ ನಡೆದ ಅತ್ಯಂತ ಕೆಟ್ಟ ಘಟನೆಯ ಸಂದರ್ಭದಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗದ ಸಿಜೆಐ, ನ್ಯಾಯಾಲಯದ ಅಧಿಕಾರಿಗಳು ಮತ್ತು ನ್ಯಾಯಾಲಯದ ಒಳಗೆ ಇದ್ದ ಭದ್ರತಾ ಸಿಬ್ಬಂದಿಗೆ ಇದನ್ನು “ನಿರ್ಲಕ್ಷಿಸಿ” ಮತ್ತು ತಪ್ಪಿತಸ್ಥ ವಕೀಲರನ್ನು ಎಚ್ಚರಿಕೆ ನೀಡಿ ಬಿಡುಗಡೆ ಮಾಡುವಂತೆ ಕೇಳಿಕೊಂಡರು.

ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ.

“ಸೆಪ್ಟೆಂಬರ್ 16 ರಂದು ಸಿಜೆಐ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಸಿಜೆಐ ಅದನ್ನು ಅಪಹಾಸ್ಯ ಮಾಡಿ, ‘ಹೋಗಿ ವಿಗ್ರಹವನ್ನು ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಅದರ ಸ್ವಂತ ತಲೆಯನ್ನು ಪುನಃಸ್ಥಾಪಿಸಲು ಹೇಳಿ’ ಎಂದಿದ್ದರು. ನಮ್ಮ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯ ಬಂದಾಗ, ಸುಪ್ರೀಂ ಕೋರ್ಟ್ ಅಂತಹ ಆದೇಶಗಳನ್ನು ನೀಡುತ್ತದೆ. ಅರ್ಜಿದಾರರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಅವರನ್ನು ಅಪಹಾಸ್ಯ ಮಾಡಬೇಡಿ. ನನಗೆ ಇದರಿಂದ ನೋವಾಗಿತ್ತು. ನಾನು ಕುಡಿದಿರಲಿಲ್ಲ. ಇದು ಅವರ ಕ್ರಿಯೆಗೆ ನನ್ನ ಪ್ರತಿಕ್ರಿಯೆಯಾಗಿತ್ತು. ನನಗೆ ಭಯವಿಲ್ಲ. ಏನಾಯಿತು ಎನ್ನುವುದಕ್ಕೆ ನನಗೆ ವಿಷಾದವಿಲ್ಲ” ಎಂದು ಹೇಳಿದ್ದಾರೆ.

ಘಟನೆಯನ್ನು ವಿವರಿಸಿದ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದು, ಸಿಜೆಐ ನೇತೃತ್ವದ ಪೀಠವು ವಕೀಲರ ಪ್ರಕರಣಗಳ ಪ್ರಸ್ತಾಪವನ್ನು ಆಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದರು. ಕಿಶೋರ್ ಎತ್ತರದ ವೇದಿಕೆಯ ಬಳಿಗೆ ಬಂದು ತನ್ನ ಶೂ ತೆಗೆದು ನ್ಯಾಯಾಧೀಶರ ಕಡೆಗೆ ಎಸೆಯಲು ಪ್ರಯತ್ನಿಸಿದರು.

ಕಿಶೋರ್ ಅವರನ್ನು ನ್ಯಾಯಾಲಯದ ಆವರಣದಿಂದ ಬೇಗನೆ ಹೊರಗೆ ಕರೆದೊಯ್ಯಲಾಯಿತು. ಕರೆದೊಯ್ಯುವಾಗ, ವಕೀಲ ರಾಕೇಶ್‌ ಕಿಶೋರ್‌ “ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ” (ಸನಾತನ ಧರ್ಮಕ್ಕೆ ಮಾಡುವ ಅವಮಾನಗಳನ್ನು ಸಹಿಸುವುದಿಲ್ಲ) ಎಂದು ಕೂಗುತ್ತಿರುವುದು ಕೇಳಿಸಿತು.

ಘಟನೆಯ ನಂತರ ರಾಕೇಶ್‌ ಕಿಶೋರ್‌ ಭೇಟಿಯಾದ SCBA ಜಂಟಿ ಕಾರ್ಯದರ್ಶಿ ಮೀನೇಶ್ ದುಬೆ, ವಕೀಲರ ಕೃತ್ಯ ಸಮರ್ಥನೀಯವಲ್ಲ ಎಂದಾಗಿದ್ದರೂ, ಅವರಿಗೆ ಯಾವುದೇ ತಪ್ಪಿತಸ್ಥ ಭಾವನೆ ಇದ್ದಿರಲಿಲ್ಲ. ತಾವು ಮಾಡಿದ್ದು ಸರಿ ಎಂದಿದ್ದಲ್ಲದೆ, ಕ್ಷಮೆ ಯಾಚಿಸಲು ನಿರಾಕರಿಸಿದ್ದರು.

 

ಯಾವುದೇ ರಾಜಕೀಯ ಪಕ್ಷದ ಲಿಂಕ್‌ ಇಲ್ಲ

ನನ್ನ ಈ ಕೃತ್ಯಕ್ಕೆ ಜೈಲು ಎದುರಿಸಲು ಕೂಡ ಸಿದ್ದ ಎಂದ ರಾಕೇಶ್‌ ಕಿಶೋರ್‌, ಯಾವುದೇ ರಾಜಕೀಯ ಪಕ್ಷದ ಜೊತೆಗೂ ನಾನಿಲ್ಲ ಎಂದರು. ನಾನು ಜೈಲಲ್ಲಿದ್ದರೆ ಉತ್ತಮ ಎನಿಸುತ್ತಿತ್ತು. ನಾನು ಮಾಡಿದ ಕೃತ್ಯಕ್ಕೆ ನನ್ನ ಕುಟುಂಬ ಸಂತೋಷವಾಗಿಲ್ಲ. ಆದರೆ, ಅವರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತಿದೆ ಎಂದಿದ್ದಾರೆ.

ಈ ಘಟನೆಯಿಂದ ಮುಜುಗರಕ್ಕೊಳಗಾದ ಅವರ ಕುಟುಂಬವು ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ನಿರಾಕರಿಸಿತು. ಕಿಶೋರ್ ತನ್ನ ಸಂಬಂಧಿಕರು “ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ” ಎಂದು ಒಪ್ಪಿಕೊಂಡರು, ಆದರೆ ಅವರು ಪ್ರಚೋದನೆಯಿಂದಲ್ಲ, ದೃಢನಿಶ್ಚಯದಿಂದ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ

Previous Post

ಸಿಜೆಐ ಮೇಲೆ ಶೂ ಎಸೆಯುವ ಪ್ರಯತ್ನ ಮನುವಾದಿಗಳ ಜಾತಿ ಅಸಮಾನತೆಗೆ ಸಾಕ್ಷಿ: ಸಿಎಂ ಸಿದ್ದರಾಮಯ್ಯ

Next Post

ಕರ್ನಾಟಕದಲ್ಲಿ ಜಾತಿಗಣತಿ ಸಮೀಕ್ಷೆ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ವಿಸ್ತರಣೆ, ಎಲ್ಲಿಯವರೆಗೆ?

Next Post
ಕರ್ನಾಟಕದಲ್ಲಿ ಜಾತಿಗಣತಿ ಸಮೀಕ್ಷೆ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ವಿಸ್ತರಣೆ, ಎಲ್ಲಿಯವರೆಗೆ?

ಕರ್ನಾಟಕದಲ್ಲಿ ಜಾತಿಗಣತಿ ಸಮೀಕ್ಷೆ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ವಿಸ್ತರಣೆ, ಎಲ್ಲಿಯವರೆಗೆ?

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.