ಪುತ್ತೂರು : ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯ ವತಿಯಿಂದ “ಫ್ಯೂಚರ್ ಪಸ್ಟ್ 2025” ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು ಎಂಬ ಧ್ಯೇಯದಡಿ ಅಕ್ಟೋಬರ್ ಒಂದರಂದು ಕಟ್ಟತ್ತಾರ್ ನಲ್ಲಿ ಜರುಗಳಲಿದೆ.
ಕಳೆದ ಆರು ವರ್ಷಗಳಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಹಲವಾರು ಜನರ ಜೀವನದಲ್ಲಿ ಬೆಳಕು ತಂದಿದೆ. ಈಗ ಹೊಸ ಶೈಕ್ಷಣಿಕ ಯಾತ್ರೆಗೆ ಕಾಲಿಟ್ಟಿದ್ದಾರೆ—Future First 2025, ಒಂದು ದೀರ್ಘಕಾಲಿಕ ಯೋಜನೆ, ಪ್ರತಿಯೊಂದು ಮನೆಯಲ್ಲೂ ವೃತ್ತಿಪರರನ್ನು ರೂಪಿಸುವ ಮಹತ್ವಾಕಾಂಕ್ಷೆಮನ್ನು ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯು ಇಂದಿನ ಪರಿಸ್ಥಿತಿಯಲ್ಲಿ ಹಲವರು 8ನೇ, 9ನೇ, 10ನೇ ತರಗತಿಯಲ್ಲಿ ಶಿಕ್ಷಣವನ್ನು ನಿಲ್ಲಿಸುತ್ತಿದ್ದಾರೆ. ಮುಂದುವರಿದ ವಿದ್ಯಾರ್ಥಿಗಳಲ್ಲಿ 75% ಜನರಿಗೆ ತಮ್ಮ ಮುಂದಿನ ಶಿಕ್ಷಣದ ದಿಕ್ಕು ಸ್ಪಷ್ಟವಿಲ್ಲ. ಶಿಕ್ಷಣ ಪಡೆದವರಲ್ಲಿ ಬಹುಪಾಲು ಜನರು ತಮ್ಮ ಗುರಿಯನ್ನು ತಲುಪಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಅಂಕಿಅಂಶಗಳು ನಮ್ಮ ಸಮಾಜದಲ್ಲಿ ಮಾರ್ಗದರ್ಶನದ ಕೊರತೆಯ ತೀವ್ರತೆಯನ್ನು ತೋರಿಸುತ್ತವೆ. ಇದನ್ನು ಹೋಗಲಾಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಫೀಕ್ ಮಾಸ್ಟರ್ ಹಾಗೂ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಭಾಗವಹಿಸಲಿದ್ದಾರೆ.