ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನ್ನಾಡಲಿದ್ದಾರೆ. ಭಾಷಣದಲ್ಲಿ ಯಾವ ವಿಚಾರವನ್ನು ಪ್ರಸ್ತಾಪ ಮಾಡಲಿದ್ದಾರೆ ಅನ್ನೋದ್ರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ದೇಶದ ಜನ ಗುಡ್ನ್ಯೂಸ್ ನಿರೀಕ್ಷೆಯಲ್ಲಿದ್ದಾರೆ
21 Sep 2025 12:30
/newsfirstlive-kannada/media/media_files/2025/09/13/pm-modi-4-2025-09-13-09-57-55.jpg)
ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನ್ನಾಡಲಿದ್ದಾರೆ. ಇಂದು ಮಧ್ಯರಾತ್ರಿಯಿಂದ ದೇಶದಲ್ಲಿ ಪರಿಷ್ಕೃತ ಜಿಎಸ್ಟಿ ಜಾರಿಯಾಗಲಿದೆ. ಜಿಎಸ್ಟಿ ಕಡಿತಗೊಳಿಸಿ ಜಾರಿ ಹಿಂದಿನ ದಿನ ಮೋದಿ ದೇಶವನ್ನು ಉದ್ದೇಶಿಸಿ ಮಾತನ್ನಾಡುತ್ತಿರೋದು ಭಾರೀ ಕುತೂಹಲ ಮೂಡಿಸಿದೆ.
ಆದರೆ ಮೋದಿ ಅವರು ತಮ್ಮ ಭಾಷಣದಲ್ಲಿ ಯಾವ ವಿಚಾರವನ್ನು ಪ್ರಸ್ತಾಪ ಮಾಡಲಿದ್ದಾರೆ ಅನ್ನೋದ್ರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಯಾಕೆಂದರೆ ನಾಳೆಯಿಂದ ನಾಡ ಹಬ್ಬ ದಸರಾ ಕೂಡ ಆರಂಭವಾಗ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ದೀಪಾವಳಿ ಕೂಡ ಬರಲಿದೆ. ಸಾಲು ಸಾಲು ಹಬ್ಬ ಹಿನ್ನೆಲೆಯಲ್ಲಿ ಮೋದಿ ಅವರ ಭಾಷಣೆ ಮೇಲೆ ದೇಶದ ಜನ ಗುಡ್ನ್ಯೂಸ್ ನಿರೀಕ್ಷೆಯಲ್ಲಿದ್ದಾರೆ.

ಪ್ರಧಾನಿಗಳು ನಾಳೆ ಅರುಣಾಚಲ ಪ್ರದೇಶ ಮತ್ತು ತ್ರಿಪುರಾಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಮಾಹಿತಿಗಳ ಪ್ರಕಾರ ಬರೋಬ್ಬರಿ 5100 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.