
ಬೆಂಗಳೂರು: ರಾಜ್ಯ ಸರ್ಕಾರ ನಾಳೆಯಿಂದ (ಸೋಮವಾರ) ಇಡೀ ರಾಜ್ಯದಲ್ಲಿ ಹೊಸದೊಂದು ಸಮೀಕ್ಷೆಗೆ (Caste Census) ಚಾಲನೆ ನೀಡಲಿದೆ. ಹಿಂದುಳಿದ ಆಯೋಗದ (Backward Commission) ಮೂಲಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಗೆ ಸಿದ್ಧತೆ ಆಗಿದ್ದು, ನಾಳೆಯಿಂದ ಮನೆಮನೆ ಬಾಗಿಲಿಗೆ ಸಮೀಕ್ಷೆ ಸಿಬ್ಬಂದಿ ಬರಲಿದ್ದಾರೆ.
ಹೌದು, ರಾಜ್ಯ ಸರ್ಕಾರ ಅನೇಕ ವಿರೋಧಗಳ ನಡುವೆ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಮುಂದಾಗಿದೆ. ನಾಳೆಯಿಂದಲೇ ಅಧಿಕೃತವಾಗಿ ಹಿಂದುಳಿದ ಆಯೋಗದಿಂದ ಸಮೀಕ್ಷೆ ನಡೆಸಲಿದೆ. ಈ ಬಗ್ಗೆ ಹಿಂದುಳಿದ ಆಯೋಗ ಕೂಡ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯನ್ನ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗಿದೆ.
ಇನ್ನೂ ಸಾರ್ವಜನಿಕರು ಕೂಡ ಸಮೀಕ್ಷೆ ವೇಳೆಯಲ್ಲಿ ಕೆಲ ದಾಖಲೆಗಳನ್ನ ಸಿದ್ಧ ಮಾಡಿಟ್ಟುಕೊಂಡರೇ ಸಮೀಕ್ಷೆಯ ವೇಳೆಯಲ್ಲಿ ಯಾವುದೇ ಗೊಂದಲವಾಗಲಿ, ಸಮಸ್ಯೆಗಳಾಲಿ ಆಗೋದಿಲ್ಲ.
ಯಾವ್ಯಾವ ದಾಖಲೆಗಳು ಇರಬೇಕು?
* ಆಧಾರ್ ಕಾರ್ಡ್
* ರೇಷನ್‌ಕಾರ್ಡ್
* ವೋಟರ್ ಐಡಿ ಕಾರ್ಡ್
* ವಿದ್ಯಾಭ್ಯಾಸದ ಅಂಕ ಪಟ್ಟಿ
ಕುಟುಂಬದ ಎಲ್ಲ ಸದಸ್ಯರು ಈ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಂಡು ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಗುರುತಿನ ಚೀಟಿಯ ನಂಬರ್‌ಗಳನ್ನು ಹೇಳಿದರೆ ಸಾಕು, ಇದರ ಜೊತೆಗೆ ನೀವು ನೀಡಬೇಕಾದ ಮಾಹಿತಿಗಳ ಬಗ್ಗೆಯೂ ಸಹ ಗಮನವಿರಲಿ. ಮುಖ್ಯವಾಗಿ ಧರ್ಮ, ಜಾತಿ, ಉಪಜಾತಿ, ಜಾತಿಗೆ ಇರೋ ಸಮನಾರ್ಥಕ ಹೆಸರಿದ್ದಲ್ಲಿ ಅದು, ಕುಟುಂಬದ ಎಲ್ಲ ಸದಸ್ಯರ ಶೈಕ್ಷಣಿಕ ಮಟ್ಟ, ಕುಟುಂಬದವರ ಆಸ್ತಿಯ ವಿವರಗಳು, ಆಧಾರ್ ಕಾರ್ಡ್ ನೊಂದಾಯಿತ ನಂಬರ್‌ಗೆ ಕೆವೈಸಿ ಕೂಡ ಬರಲಿದೆ.
ಒಟ್ಟಿನಲ್ಲಿ ಅನೇಕ ಗೊಂದಲಗಳ ನಡುವೆಯೂ ನಾಳೆಯಿಂದ ಸಮೀಕ್ಷೆ ಶುರುವಾಗಲಿದೆ. ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದೆ. ಇನ್ನು ಮನೆಗೆ ಬರುವ ಸಮೀಕ್ಷೆ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿ ಸಮೀಕ್ಷೆಗೆ ಸಹಕರಿಸಿ ಎಂದು ಸರ್ಕಾರ ಕೇಳಿಕೊಂಡಿದೆ.