ವರ್ಗಾವಣೆಯ ಹೆಸರಲ್ಲಿ ಪಂಚಾಯತ್ ಕೆಲಸ ಕಾರ್ಯ ಅಸ್ಥವ್ಯಸ್ಥ-ಎಸ್ಡಿಪಿಐ ಆಕ್ರೋಶ
ಕಾಂಗ್ರೆಸ್ ಮುಖಂಡನ ದುರ್ವರ್ತನೆ,
ಕಡಿವಾಣ ಹಾಕಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ತಾಕೀತು
ಬಜಪೆ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿ ಪಟ್ಟಣಪಂಚಾಯತ್ ಆಗಿ ರೂಪೀಕರಣಗೊಂಡು ಮನೆ ತೆರಿಗೆಯಂಥಹ ಶುಲ್ಕಗಳು ನಾಲ್ಕು ಪಟ್ಟು ಜಾಸ್ತಿಯಾಗಿ ನಾಲ್ಕು ವರ್ಷ ಸಂದರೂ ಇಡೀ ಪಂಚಾಯತ್ ವ್ಯಾಪ್ತಿ ಅಸ್ತವ್ಯಸ್ತಗೊಂಡ ರಸ್ತೆಗಳು,ದುರಸ್ತಿ ಕಾಣದ ಚರಂಡಿಗಳು ,ರಸ್ತೆ ಇಕ್ಕೆಲಗಳಲ್ಲಿ ಗಿಡಮರಗಳ ಬೆಳೆಯುವಿಕೆ,ನಾಯಿಗಳ ರಂಪಾಟ, ನೂತನ ಯೋಜನೆಗಳಿಲ್ಲದೆ ಅಭಿವೃದ್ಧಿ ಕಾಣದ ಪಂಚಾಯತ್ ಆಗಿ ಮುಂದುವರಿಯುತಿದೆ.ಎಂದು ಎಸ್ ಡಿ ಪಿ ಐ ಬಜಪೆ ಪಟ್ಟಣಪಂಚಾಯತ್ ಸಮಿತಿ ಆರೋಪಿಸಿದೆ.
ಕಳೆದ ವರ್ಷ ಇಲ್ಲಿನ ರಸ್ತೆಗೆ ಕಾಂಕ್ರೀಟೀಕರಣವಾಗಿದ್ದರೂ ರಸ್ತೆ ಮಧ್ಯೆ ಇರುವ ಇಂಟರ್ ಲೋಕ್ ಗಳ ದುರವಸ್ಥೆಯಿಂದ ದ್ವಿಚಕ್ರ ವಾಹನ ನಡೆಸುವವರ ಅಪಘಾತ ವಿಪರೀತವಾಗಿದೆ, ಅಗಲವಿರುವ ಕಾಂಕ್ರೀಟ್ ರಸ್ತೆ ಬ್ಲೂಗೇಟ್-ಭೂಮಿ ಪ್ಲಾಟ್ ಎದುರುಗಡೆ ಬರುವಾಗ ಏಕರಸ್ತೆಯಾಗಿ ಅಪಘಾತ ವಿಪರೀತವಾಗಿದೆ.ಬಜಪೆ ಪೋಲೀಸ್ ಠಾಣೆ ರಸ್ತೆ, ಹಳೆ ವಿಮಾನನಿಲ್ದಾಣ ರಸ್ತೆ,ಚರ್ಚ್ ಸಮೀಪದ ರಸ್ತೆ, ಸ್ರಷ್ಟಿ ಹೋಟೆಲ್ ಸಮೀಪದ ರಸ್ತೆ,ಕಿನ್ನಿಪದವು ದ್ವಾರದ ರಸ್ತೆಗಳು ಹದಗೆಟ್ಟಿದೆ.ಬಜಪೆ ಜಯರಾಜ್ ಬಾರ್ ಹತ್ತಿರ ಇಕ್ಕೆಲಗಳಲ್ಲಿ ವಾಹನಗಳ ನಿಲ್ಲುಸುವಿಕೆ,ಬಜಪೆ ಪೇಟೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು,ನಾಯಿಗಳ ಹಾವಳಿಯಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ಸಾರ್ವಜನಿಕರು ತೊಂದರೆಗೆ ಒಳಗಾಗುತಿದ್ದಾರೆ ಹೀಗೆಯೇ ಮುಂತಾದ ಹತ್ತು ಹಲವಾರು ಸಮಸ್ಯೆಗಳಿದ್ದರೂ ಅದರಲ್ಲೂ ರಾಜಕೀಯ ನಡೆಸಿ ಅಭಿವೃದ್ಧಿ ನಡೆಸದಂತೆ ಮಾಡುವುದರಲ್ಲಿ ಈ ಕಾಂಗ್ರೆಸ್ ಮುಖಂಡ ಮಾಜಿ ಅಧ್ಯಕ್ಷ ನ ಕಿತಾಪತಿ ಮತ್ತು ಕಿರಿಕಿರಿ ದಿನೇದಿನೇ ಜಾಸ್ತಿಯಾಗುವುದನ್ನು ಎಸ್ಡಿಪಿಐ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸುತ್ತದೆ ಹಾಗೂ ಎಸ್ಡಿಪಿಐ ಬಜಪೆ ಪಟ್ಟಣಪಂಚಾಯತ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ
ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನಿಶ್ಚಿಂತವಾಗಿ ಕರ್ತವ್ಯ ನಿರ್ವಹಿಸಲು ತೊಡಕಾಗಿರುವುದು ಇಲ್ಲಿನ ಕಾಂಗ್ರೆಸ್ ಮುಖಂಡ-ಮಾಜಿ ಅಧ್ಯಕ್ಷನ ಬ್ಲೇಕ್ಮೇಲ್ ಗಳು. ಹೆದರಿಸುವಂತದು,ವರ್ಗಾವಣೆ ಹೆಸರಲ್ಲಿ ಬೆದರಿಸುವಂತದು ಇದು ಇಲ್ಲಿ ಸರಾಗವಾಗಿದೆ.ನಮ್ಮ ಸರ್ಕಾರ ಇದೆ ನಿಮ್ಮನ್ನು ಏನು ಬೇಕಾದರೂ ನನಗೆ ಮಾಡಬಹುದು,ನಾನು ಹೇಳಿದ ಕೆಲಸ ಮಾಡಬೇಕು,ನನ್ನ ಸರಕಾರ ಇದೆ,ಉಸ್ತುವಾರಿ ಸಚಿವರು ನನ್ನ ಮಾತು ಮೀರುವುದಿಲ್ಲ,ಸ್ಪೀಕರ್ ರವರಿಗೆ ನನ್ನ ಮಾತೇ ಕೊನೆ,ಮಿಥುನ್ ನಾನು ಹೇಳಿದ್ದನ್ನು ತಪ್ಪುವುದಿಲ್ಲ ಎಂದೆಲ್ಲಾ ಹೆದರಿಸಿ ತೊಂದರೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದು ಆರೋಪಿಸಿದೆ
ತಾನು ಹೇಳಿದಾಗೆ ಕೇಳದ ಮೂರು ಸಿಬ್ಬಂದಿಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದ್ದು ಈ ರೀತಿಯ ಕಾಂಗ್ರೆಸ್ ಮುಖಂಡ-ಮಾಜಿ ಅಧ್ಯಕ್ಷನ ವರ್ತನೆಯನ್ನು ಎಸ್ಡಿಪಿಐ ಬಜಪೆ ಪಟ್ಟಣಪಂಚಾಯತ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಇದಲ್ಲದೆ ಪಂಚಾಯತ್ ಗೆ ಒಳಪಟ್ಟ ಮಾರ್ಕೆಟ್ ಕಟ್ಟಡದ ಎರಡು ಅಂಗಡಿಗಳು ಮತ್ತು ವಾರದ ಸಂತೆಗಳ ಟೆಂಡರನ್ನು ಹಲವಾರು ವರ್ಷಗಳಿಂದ ತನ್ನ ಸ್ವಾಧೀನ ದಲ್ಲಿಟ್ಟು ಅದರ ವಸೂಲಿ ಐದು ಲಕ್ಷ ಹಣವನ್ನು ಪಂಚಾಯತ್ ಗೆ ನೀಡದೆ ಇರುವ ಆರೋಪ ಕೂಡ ಇದ್ದು,ಇತ್ತೀಚೆಗೆ ಜನರ ಒತ್ತಾಯಕ್ಕೆ ಮಣಿದ ಇಲ್ಲಿನ ಮೇಲಾಧಿಕಾರಿ ಟೆಂಡರ್ ಕರೆದು ಬೇರೆಯವರಿಗೆ ನೀಡಲಾಗಿದೆ.ಈ ನೆಲೆಯಲ್ಲಿ ಈ ಅಧಿಕಾರಿಗೆ ಕಿರುಕುಳ ನೀಡುತಿರುವುದು ಮನೆಮಾತಾಗಿದೆ.ಅದಲ್ಲದೆ ಹೊಸದಾಗಿ ಟೆಂಡರ್ ಪಡೆದಿರುವ ಗುತ್ತಿಗೆದಾರನಿಗೆ ಕಿರುಕುಳ ನೀಡುತಿರುವ ಬಗ್ಗೆ ಪೋಲೀಸ್ ಇಲಾಖೆಗೆ ದೂರು ನೀಡಲಾಗಿದೆ.
ಬಜ್ಪೆ ಪಟ್ಟಣ ಪಂಚಾಯತ್ ಅಧಿಕಾರಿಗಳು-ಸಿಬ್ಬಂದಿಗಳು ಯಾವುದೇ ರಾಜಕೀಯ ಪಕ್ಷಗಳ ನಾಯಕರ ಒತ್ತಡಕ್ಕೆ ಹೆದರಿ-ಬೆದರಿಕೆಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು ಮತ್ತು ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನಕೊಟ್ಟು ಕೆಲಸ ನಿರ್ವಹಿಸಬೇಕು,ಕಾಂಗ್ರೆಸ್ ಸ್ಥಳೀಯ ಮುಖಂಡನ ದುರ್ವರ್ತನೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕಡಿವಾಣ ಹಾಕಬೇಕು.
ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಎಸ್ಡಿಪಿಐ ಬಜ್ಪೆ ಪಟ್ಟಣಪಂಚಾಯತ್ ಸಮಿತಿ ಅಧ್ಯಕ್ಷ ಹಸೈನಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.