ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಎಸ್.ಐ.ಟಿ ತಂಡವು ಪ್ರಮುಖ ಸಾಕ್ಷಿದಾರರಾದ ವಿಠಲ್ ಗೌಡ, ಪ್ರದೀಪ್, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ಯೂಟ್ಯೂಬರ್ ಅಭಿಷೇಕ್, ಮನಾಫ್ ಅವರನ್ನು ವಿಚಾರಣೆ ನಡೆಸಿದೆ. ಸ್ಥಳ ಮಹಜರು ಮತ್ತು CrPC ಸೆಕ್ಷನ್ 161 ಅಡಿ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಎಸ್.ಐ.ಟಿ ತಂಡವು (Special Investigation Team) ಪ್ರಮುಖ ಸಾಕ್ಷಿದಾರರು ಹಾಗೂ ಸಂಬಂಧಿತರನ್ನು ವಿಚಾರಣೆಗೊಳಪಡಿಸುತ್ತಿದೆ. ಈ ಹಿನ್ನಲೆಯಲ್ಲಿ ವಿಠಲ್ ಗೌಡ ಮತ್ತು ಪ್ರದೀಪ್ ಅವರನ್ನು ಹಿಂಭಾಗದ ರಸ್ತೆಯ ಮೂಲಕ ಎಸ್ಐಟಿ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಯಿತು. ಎಸ್ಪಿ ಸೈಮನ್ ಅವರ ನೇತೃತ್ವದ ತಂಡವು ಬಂಗ್ಲೆಗುಡ್ಡೆ ಕಾಡಿಗೆ ವಿಠಲ್ ಗೌಡನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿತು. ವಿಠಲ್ ಗೌಡ ಬುರುಡೆ ತಂದ ಸ್ಥಳಕ್ಕೆ ತಂಡ ತೆರಳಿ ಪಾಯಿಂಟ್ ನಂಬರ್ 11ಎ ಭಾಗದಲ್ಲಿ ಪರಿಶೀಲನೆ ನಡೆಸಿತು. ನಂತರ ಪಂಚನಾಮೆ ಪ್ರಕ್ರಿಯೆ ಕೈಗೊಳ್ಳಲಾಯಿತು.
27
Image Credit : stockPhoto
CrPC ಸೆಕ್ಷನ್ 161 ಅಡಿ ಹೇಳಿಕೆ ದಾಖಲು
ಈ ಪ್ರಕರಣದಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ಯೂಟ್ಯೂಬರ್ ಅಭಿಷೇಕ್, ಮನಾಫ್ ಹಾಗೂ ವಿಠಲ್ ಗೌಡ ಸೇರಿದಂತೆ ಐದು ಜನರ CrPC ಸೆಕ್ಷನ್ 161 ಅಡಿ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ. 161 ಅಡಿ ಹೇಳಿಕೆ ಎಂದರೆ, ತನಿಖಾಧಿಕಾರಿಗಳು ಸಂಬಂಧಿತ ವ್ಯಕ್ತಿ ಅಥವಾ ಸಾಕ್ಷಿದಾರರಿಂದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ. ಹೇಳಿಕೆಗಳನ್ನು ನೇರವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಲು ಸಾಧ್ಯವಿಲ್ಲ. ಆದರೆ ಪ್ರಮುಖ ಆರೋಪಿಗಳ ಹೇಳಿಕೆ ಹಾಗೂ ಸಾಕ್ಷಿದಾರರ ಹೇಳಿಕೆಗಳಲ್ಲಿ ವಿರೋಧಾಭಾಸ (Contradiction) ಪತ್ತೆಯಾದರೆ, ಅದರ ಆಧಾರದ ಮೇಲೆ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಬಹುದಾಗಿದೆ.
ಜಯಂತ್ ಹೇಳಿಕೆ
ಎಸ್ಐಟಿ ಕಚೇರಿ ಮುಂದೆ ವಿಶ್ವಾಸದ ಮಾತುಗಳನ್ನಾಡಿರುವ ಜಯಂತ್ ಟಿ ಸತ್ಯ ಅತೀ ಶೀಘ್ರದಲ್ಲಿ ಹೊರಗಡೆ ಬರುತ್ತೆ. 161 ಹೇಳಿಕೆ ಪಡೆಯುತ್ತಿದ್ದಾರೆ. ಎಸ್ಐಟಿ ತನಿಖೆ ಮುಗಿಸಿ ಮಾತನಾಡುತ್ತೇನೆ. ನಾನು ಏನಾದ್ರೂ ಹೇಳಿದ್ರೆ ಎಸ್ಐಟಿ ಅವರು ನನ್ನ ಕೇಳ್ತಾರೆ. ಎಲ್ಲವನ್ನೂ ಎಸ್ಐಟಿಗೆ ಹೇಳುತ್ತೇನೆ. ಎಸ್ಐಟಿಯಿಂದ ಸತ್ಯ ಹೊರಬರುತ್ತೆ. ನನ್ನ ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ನನ್ನನ್ನ ಕೆಲವರು ಫಾಲೋ ಮಾಡ್ತಿದ್ದರು, ನನ್ನ ರಕ್ಷಣೆಗೆಗೆ ಓಡಿದ್ದೇನೆ. ಅದು ಹತ್ತಿರ ಅಂತ ಹಾಗೇ ಹೋದೆ, ಈಗ ಇಲ್ಲಿ ಬಂದಿದ್ದೇನೆ. ನನ್ನ 161 ಹೇಳಿಕೆಯನ್ನು ದಾಖಲಿಸುತ್ತಿದ್ದಾರೆ. ವಿಚಾರಣೆ ಬಗ್ಗೆ ನಾನು ಏನು ಹೇಳುವ ಹಾಗಿಲ್ಲ. ಊಟ ಚೆನ್ನಾಗಿ ಕೊಡ್ತಾರೆ, ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಒಂದು ಸತ್ಯ ಗೆಲ್ಲಬೇಕಾದರೆ ಸತ್ಯ ಮಾರ್ಗದಲ್ಲೇ ಹೋಗಿದ್ದರೆ ಗೆಲ್ಲುತ್ತದೆ. ಸತ್ಯ ಗೆಲ್ಲಲು ಸುಳ್ಳು ದಾರಿ ತೆಗೆದುಕೊಂಡಿದ್ದರೆ ಅದು ಗೆಲ್ಲಲ್ಲ. ಬೆಳ್ತಂಗಡಿ ಎಸ್ಐಟಿ ಕಚೇರಿ ಮುಂಭಾಗ ಕೇರಳ ಯೂ ಟ್ಯೂಬರ್ ಮನಾಫ್ ಹೇಳಿಕೆ ನೀಡಿದ್ದಾನೆ. ನಾನು ಸತ್ಯದ ಪರವಾಗಿ ಇದ್ದೇನೆ, ಹೋರಾಟ ಇದೆ. ನಾನು ಯಾರನ್ನೂ ರಕ್ಷಣೆ ಮಾಡೋಕೆ ಈ ಹೋರಾಟಕ್ಕೆ ಬಂದಿಲ್ಲ. ಯಾರು ಸುಳ್ಳು ಅಪಪ್ರಚಾರ ಮಾಡಿದ್ದಾರೆ, ಯಾರಿಗೆ ಗಿಲ್ಟಿ ಇದೆಯೋ ಅವರಿಗೆ ವಿರೋಧವಾಗಿ ನಾನು ನಿಲ್ತೇನೆ. ಯಾವುದೇ ಸೈಡ್ ಅಂತ ಅಲ್ಲ, ನನಗಿರೋ ಮಾಹಿತಿ ಪರ ನಿಲ್ತೇನೆ. ನಾನು ಸತ್ಯದ ಪರ ಹೋರಾಟ ಮಾಡ್ತಾ ಇದೀನಿ, ಅದರಲ್ಲಿ ನಮ್ಮವರೇ ತಪ್ಪು ಮಾಡಿದ್ದರೂ ಹೊರಗಡೆ ಬರಲಿ. ನಮ್ಮಲ್ಲೇ ಯಾರಾದ್ರೂ ಸುಳ್ಳು ಅಥವಾ ಕಿತಾಪತಿ ಮಾಡಿದ್ರೂ ಹೊರಗೆ ಬರುತ್ತೆ. ಸೌಜನ್ಯ ಹೋರಾಟದಲ್ಲಿ ಯಾರಾದ್ರೂ ತಿರುಚಿದ್ರೂ ಹೊರಗೆ ಬರಲಿ. ಬುರುಡೆ ವಿಷಯದಲ್ಲಿ ಏನು ನಿಜ ಇದೆ ಅದರ ಸಾಕ್ಷಿ ಕೊಟ್ಟಿದ್ದೇವೆ. ಒಂದು ಸತ್ಯ ಗೆಲ್ಲಬೇಕಾದರೆ ಸತ್ಯ ಮಾರ್ಗದಲ್ಲೇ ಹೋಗಿದ್ದರೆ ಗೆಲ್ಲುತ್ತದೆ. ಸತ್ಯ ಗೆಲ್ಲಲು ಸುಳ್ಳು ದಾರಿ ತೆಗೆದುಕೊಂಡಿದ್ದರೆ ಅದು ಗೆಲ್ಲಲ್ಲ. ಸತ್ಯ ಗೆಲ್ಲಬೇಕಾದರೆ ಸತ್ಯದ ದಾರಿಯಲ್ಲೇ ಹೋಗಬೇಕು ಅಷ್ಟೇ.
ಈ ಹೋರಾಟದಲ್ಲಿ ಎಲ್ಲರೂ ಸತ್ಯದಲ್ಲೇ ಇದ್ದಾರೆ, ನನ್ನ ಹೇಳಿಕೆ ತಿರುಚಬೇಡಿ. ನಮ್ಮ ಕಡೆಯಿಂದ ಕೊಡಬೇಕಾದ ಎಲ್ಲಾ ಮಾಹಿತಿ ಎಸ್ಐಟಿಗೆ ಕೊಡ್ತಾ ಇದೀವಿ. ಎಸ್ಐಟಿ ಒಳ್ಳೆಯ ಕೆಲಸ ಮಾಡ್ತಾ ಇದಾರೆ, ನನ್ನ ಮೊಬೈಲ್ ತೆಗೊಂಡಿಲ್ಲ. ಎಲ್ಲಾ ವಿಷಯ ಕೇಳ್ತಾರೆ, ಈ ಹೋರಾಟದಲ್ಲಿ ಯಾಕೆ ಮತ್ತು ಹೇಗೆ ಬಂದೆ ಅಂತ ಕೇಳಿದ್ರು. ನಾನು ಕೇರಳದಲ್ಲಿ ಮಾಡ್ತಾ ಇದ್ದೆ, ನನ್ನ ಲೈವ್ ಲಕ್ಷಗಟ್ಟಲೆ ಹೋಗ್ತಾ ಇತ್ತು. ಅದು ಯಾರಿಗೋ ತೊಂದರೆ ಆಗ್ತಾ ಇರಬಹುದು, ಯಾರಿಗೆ ಅಂತ ಗೊತ್ತಿಲ್ಲ. ಸಮೀರ್ ನನ್ನ ಎಸ್ಐಟಿ ಕರೆದಿಲ್ಲ, ಹಾಗಾದರೆ ಅಷ್ಟು ದೊಡ್ಡವನಾ ನಾನು. ಇವತ್ತು ಮೂರನೇ ದಿನದ ವಿಚಾರಣೆ. ವಿಡಿಯೋ ಅಪ್ ಲೋಡ್ ಮಾಡಿದ ಬಗ್ಗೆ ಕೇಳಿದ್ದಾರೆ. ನನ್ನ 42 ವರ್ಷದ ಹಿಸ್ಟರಿ ನನ್ನತ್ರ ಅವರು ಕೇಳಿದ್ದಾರೆ, ಹೇಳಿದ್ದೇನೆ. ಆ ವಿಡಿಯೋ ಯಾವಾಗ ಎಲ್ಲಿ ಸಿಕ್ಕಿತು ಅಂತ ನಾನು ಹೇಳಿದ್ದೇನೆ. ನನ್ನನ್ನ ಎಷ್ಟು ದಿನ ವಿಚಾರಣೆ ಮಾಡ್ತಾರೆ ಅನ್ನೋದು ಎಸ್ಐಟಿಗೆ ಬಿಟ್ಟಿದ್ದು. ನನ್ನನ್ನ ಇಡೀ ದಿನ ವಿಚಾರಣೆ ಮಾಡಲ್ಲ, ಅಸ್ಥಿಪಂಜರ ಬಗ್ಗೆಯೂ ತನಿಖೆ ಆಗ್ತಾ ಇದೆ. ನಾನು ಯೂ ಟ್ಯೂಬ್ ಆರಂಭಿಸಿದ ಎರಡು ದಿನಗಳಲ್ಲಿ ಐದು ಲಕ್ಷ ಸಬ್ ಸ್ಕ್ರೈಬರ್ ಮಾಡಿದ್ದೇನೆ. ನಾನು ಲೇಟೆಸ್ಟ್ ಯೂ ಟ್ಯೂಬರ್, ನನಗೆ ಶಿರೂರಲ್ಲಿ ಸಬ್ ಸ್ಕ್ರೈಬರ್ ಆಗಿದ್ದು. ನಾನು ನಿಜ ಹೋರಾಟ ಮಾಡ್ತಾ ಇದೀನಿ, ಅದೇ ಇಲ್ಲಿ ಗೆಲ್ಲೋದು, ಎಸ್ಐಟಿಗೆ ಕೆಲಸ ಮಾಡಲು ನಾವು ಬೇಡಬೇಕು
67
Image Credit : our own
ಆನೆ ಮಾವುತ ಡಬಲ್ ಮರ್ಡರ್ ಪ್ರಕರಣ ಮರುತನಿಖೆ ಬೇಡಿಕೆ
ಇದೇ ಸಂದರ್ಭದಲ್ಲಿ 2012ರಲ್ಲಿ ನಡೆದಿದ್ದ ಆನೆ ಮಾವುತ ನಾರಾಯಣ ಮತ್ತು ಪತ್ನಿ ಯಮುನಾಳ ಜೋಡಿ ಕೊಲೆ ಪ್ರಕರಣಕ್ಕೂ ಹೊಸ ತಿರುವು ದೊರೆತಿದೆ. ಈ ಪ್ರಕರಣದಲ್ಲಿ ಪೊಲೀಸರು ಮೊದಲೇ ಸಿ-ರಿಪೋರ್ಟ್ ಸಲ್ಲಿಸಿದ್ದ ಕಾರಣ, ಕುಟುಂಬಸ್ಥರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈಗ ಆ ಅರ್ಜಿಯನ್ನು ವಾಪಸ್ ಪಡೆದು, ಎಸ್ಐಟಿ ಕಚೇರಿಗೆ ಬಂದು ಪ್ರತ್ಯೇಕ ದೂರು ಸಲ್ಲಿಸಿ ಮರು ತನಿಖೆ ನಡೆಸಲು ಮನವಿ ಮಾಡಿದ್ದಾರೆ. ನಾರಾಯಣನ ಮಗ ಗಣೇಶ್ ಹಾಗೂ ಕುಟುಂಬಸ್ಥರು, “ತಂದೆಯ ಕೊಲೆಗೆ ನ್ಯಾಯ ದೊರೆಯಬೇಕು. ಸತ್ಯವನ್ನು ಹೊರತೆಗೆದು ಆರೋಪಿಗಳನ್ನು ಪತ್ತೆಹಚ್ಚಬೇಕು” ಎಂದು ಬೇಡಿಕೆ ಇಟ್ಟಿದ್ದಾರೆ.
77
Image Credit :hayath tv
ಹೋರಾಟಗಾರರ ಪ್ರತಿಕ್ರಿಯೆ
ಎಸ್ಐಟಿ ಕಚೇರಿ ಮುಂದೆ ಮಾತನಾಡಿದ ಹೋರಾಟಗಾರ ದಿನೇಶ್ ಗಾಣಿಗ ಅವರು, “2012ರ ಕೊಲೆ ಪ್ರಕರಣದಲ್ಲಿ ಸಿ-ರಿಪೋರ್ಟ್ ನೀಡಲಾಗಿತ್ತು. ಇದೀಗ ಎಸ್ಐಟಿ ತನಿಖೆಗೆ ದೂರು ನೀಡಿರುವುದರಿಂದ ಸತ್ಯ ಹೊರಬರಲಿದೆ ಎಂಬ ನಂಬಿಕೆ ನಮಗಿದೆ. ನಮ್ಮ ಹೋರಾಟ ಸತ್ಯಕ್ಕಾಗಿ” ಎಂದು ಹೇಳಿದರು.