ಪುತ್ತೂರು: 2025ನೇ ಜುಲೈ ನಾಲ್ಕರಂದು ವ್ಯಕ್ತಿಯೊಬ್ಬ ತಲ್ವಾರ್ ಹಿಡಿದುಕೊಂಡು ಮಸೀದಿಗೆ ನುಗ್ಗಲು ಯತ್ನಿಸಿದ ಆಘಾತಕಾರಿ ಘಟನೆಯು ವ್ಯಾಪಕವಾಗಿ ವರದಿಯಾಗಿತ್ತು ಮತ್ತು ವೈರಲಾಗಿತ್ತು. ಈ ಹಿಂದೆ ಪುತ್ತೂರು ಸೇರಿದಂತೆ ಜಿಲ್ಲೆಯ ಹಲವು ಭಾಗದಲ್ಲಿ ಸಂಘಪರಿವಾರ ನಾಯಕರು ದ್ವೇಷ ಭಾಷಣವನ್ನು ಮಾಡಿದ್ದರು. ಅದರ ಜೊತೆ ಜೊತೆಗೆ ಪುತ್ತೂರಿನ ಬೊಳ್ವಾರಿನಲ್ಲಿ ಒಬ್ಬ ವ್ಯಕ್ತಿ ತಲ್ವಾರ್ ಹಿಡಿದುಕೊಂಡು ಮಸೀದಿಗೆ ನುಗ್ಗಲು ಯತ್ನಿಸಿದ ಘಟನೆಯು ನಡೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು X ನಲ್ಲಿ ಟ್ವೀಟ್ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಆದರೆ ಇದೀಗ ಒಂದು ತಿಂಗಳು ಕಳೆದ ಬಳಿಕ ಯಾವುದೋ ಸಂಬಂಧವೇ ಇಲ್ಲದ FB ಪೋಸ್ಟನ್ನು ಆರೋಪಿಸಿ ಅಶ್ರಫ್ ಮೇಲೆ ಪ್ರಕರಣ ದಾಖಲಿಸಿದ್ದು ಖಂಡನೀಯ’ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ ಬಂಟ್ವಾಳ ಪತ್ರಿಕಾ ಪ್ರಟಕನೆಯಲ್ಲಿ ತಿಳಿಸಿದ್ದಾರೆ.
‘ನಾವು ಭಾರತೀಯ ಸೇನೆ’ ಎಂಬ ಫೇಸ್ ಬುಕ್ ಪುಟದ ಎಡ್ಮಿನ್ ಅವರು ಅವರದ್ದೇ ಕಂಟೆಂಟ್ ನೊಂದಿಗೆ ತಲ್ವಾರ್ ಹಿಡಿದುಕೊಂಡು ಹೋಗುವ ವೀಡಿಯೋವನ್ನು ಅಪ್‌ಲೋಡ್ ಮಾಡಿ ಅದಕ್ಕೆ ‘ಪುತ್ತೂರು: ಹಾಡಹಗಲೇ ತಲ್ವಾರ್ ಹಿಡಿದುಕೊಂಡು ಮಸೀದಿಗೆ ನುಗ್ಗಲು ಯತ್ನಿಸಿದ RSS ನ ಭಯೋತ್ಪಾದಕ’ ಎಂದು ವೀಡಿಯೋದಲ್ಲೆ ಎಡಿಟ್ ಮಾಡಿ ಅವರೇ ಖುದ್ದು ಅವರ ಇಚ್ಛಾ ಶಕ್ತಿಯ ಕಂಟೆಂಟ್ ನಲ್ಲಿ ಹಾಕಿದರೆ ಅಶ್ರಫ್ ಬಾವು ರವರು ಹೇಗೆ ಜವಾಬ್ದಾರರಾಗುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಅದೇ ರೀತಿ ‘ಆ FB ಪೋಸ್ಟ್ ನಲ್ಲೂ ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತುವ ಪೋಸ್ಟ್ ಮಾಡಿರುವುದು ಕಂಡು ಬಂದಿಲ್ಲ, ಬದಲಾಗಿ RSS ನ್ನು ವಿರೋಧಿಸಿಕೊಂಡು ಪೋಸ್ಟ್ ಮಾಡಿರುವುದಾಗಿದೆ. RSS ಎಂಬುವುದು ಧರ್ಮವಲ್ಲ, ಅದೊಂದು ಭಾರತೀಯ ಕಾನೂನಿನಡಿಯಲ್ಲಿ ನೋಂದಣಿ ಆಗದ ಸಂಘಟನೆಯಷ್ಟೇ. ಹಾಗಾಗಿ ಇದು ಧರ್ಮ-ಧರ್ಮಗಳ ನಡುವೆ ದ್ವೇಷ ಬಿತ್ತಲು ಹೇಗೆ ಕಾರಣವಾಗುತ್ತದೆ ಎಂದು ಪೊಲೀಸ್ ಇಲಾಖೆ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಆ FB ಪೋಸ್ಟ್ ಗೂ, ಅಶ್ರಫ್ ಬಾವು ರವರಿಗೂ ಯಾವುದೇ ಸಂಬಂಧವಿಲ್ಲ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಟ್ಯಾಗ್ ಮಾಡಿ ತಲ್ವಾರ್ ಪ್ರದರ್ಶನ ಕುರಿತು X ನಲ್ಲಿ ಟ್ವೀಟ್ ಮಾಡಿ ಒಂದು ತಿಂಗಳ ಬಳಿಕ ಅದರ ಕಾವು ಕಡಿಮೆಯಾದ ನಂತರ ಕೇಸ್ ದಾಖಲಿಸಿ ಪೊಲೀಸರು ಯಾರನ್ನು ಮೆಚ್ಚಿಸಲು ಅಶ್ರಫ್ ಬಾವು ರವರನ್ನು ಗುರಿಪಡಿಸಿದ್ದೀರಿ? ಇದರ ಹಿಂದಿನ ಉದ್ದೇಶವೇನು?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ ಆ ಪೇಜ್ ನ ಅಡ್ಮಿನ್ ಅಶ್ರಫ್ ಬಾವು ರವರು ಎಂಬುದಕ್ಕೆ ಪೋಲಿಸರ ಬಳಿ ಯಾವ ದಾಖಲೆ ಇದೆ ? ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ ಬಂಟ್ವಾಳ ಪ್ರಶ್ನಿಸಿದ್ದಾರೆ. ಇದರ ವಿರುದ್ಧ ಪಕ್ಷ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.