ಧರ್ಮಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಯೂಟ್ಯೂಬರ್ ವರದಿಗಾರಿಕೆ ತೆರಳಿದಾಗ ದುಸ್ಕರ್ಮಿಗಳು ಬೆನ್ನಲ್ಲೇ ನೂಕಾಟ ತಳ್ಳಾಟ ನಡೆದಿದ್ದು, ಹಲ್ಲೆಯೂ ನಡೆದಿದೆ.. ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಓರ್ವ ಆರೋಪಿ ಬಂಧನವಾಗಿದೆ.
ಧರ್ಮಸ್ಥಳ (ಆ.07) ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಮುಸುಕುದಾರಿ ದೂರುದಾರನ ಆರೋಪದಡಿ ಎಸ್ಐಟಿ ತನಿಖೆ ನಡೆಯುತ್ತಿದೆ. ಗುರುತಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯಗಳು ನಡೆಯುತ್ತಿದೆ. ಇದನ್ನು ಬಹುತೇಕ ಎಲ್ಲಾ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವರದಿ ಮಾಡುತ್ತಿದೆ. ಆದರೆ ಯೂಟ್ಯೂಬರ್ ವರದಿ, ನಡೆಸುತ್ತಿದ್ದಾರೆ ಈ ಸಂದರ್ಭದಲ್ಲಿ ಕೆಲವು ಗೂಂಡಾಗಳಿಂದ ನೂಕಾಟ, ತಳ್ಳಾಟ ನಡೆದು ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ವೇಳೆ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣ ಸಂಬಂಧ ಹಲವು ದೂರುಗಳು ದಾಖಲಾಗಿದೆ. ಇದೀಗ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬೆಳ್ತಗಂಡಿ ನ್ಯಾಯಾಲಕ್ಕೆ ಆರೋಪಿ ಹಾಜರುಪಡಿಸಿದ ಪೊಲೀಸ್
ಧರ್ಮಸ್ಥಳದಲ್ಲಿ ನಡೆದ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿ ಸೋಮನಾಥ್ ಸಫಲ್ಯನನ್ನು ಬಂಧಿಸಲಾಗಿದೆ. ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿಯಾಗಿರುವ 48 ವರ್ಷದ ಸೋಮನಾಥ ಸಫಲ್ಯರನ್ನು ಪೊಲೀಸರು ಬಂಧಿಸಿ ಬೆಳ್ತಂಗಡಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣ ಸಂಬಂಧ ಹಲವು ವಿಡಿಯೋಗಳನ್ನು ಪರಿಶೀಲಿಸುತ್ತಿರುವ ಪೊಲೀಸರ್ ಆರೋಪಿಗಳ ಪತ್ತೆ ಮಾಡಲು ಮುಂದಾಗಿದ್ದಾರೆ. ಹಲ್ಲೆ ಪ್ರಕರಣದಿಂದ ಧರ್ಮಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.