Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಬೆಂಗಳೂರು ಸೂಪರ್ ಕಾಪ್ಸ್: ಅಡಿಕೆ ವ್ಯಾಪಾರಿಯ ₹1 ಕೋಟಿ ದರೋಡೆ ಮಾಡಿದ ಗ್ಯಾಂಗ್ 15 ನಿಮಿಷದಲ್ಲೇ ಅರೆಸ್ಟ್!

    ಮಂಗಳೂರು: ಕಾರಿನಲ್ಲಿ ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ

ಮಳೆ ನಡುವೆ ಮುಂದುವರೆದ ರಕ್ಷಣಾ ಕಾರ್ಯಾಚರಣೆ.. ಯೋಧರು ಸೇರಿ 100ಕ್ಕೂ ಹೆಚ್ಚು ಮಂದಿ ನಾಪತ್ತೆ!

editor tv by editor tv
August 7, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ಮೇಘಸ್ಫೋಟ ಕೆಸರಿನ ಹೊಳೆ, ಭೂಕುಸಿತದಿಂದ ಮುಚ್ಚಿ ಹೋದ ಮನೆಗಳು, ರಸ್ತೆಗಳು. ಸದ್ಯ ಧರಾಲಿ ಗ್ರಾಮ ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿದೆ. ಧರಾಲಿ ಗ್ರಾಮದ 200ಕ್ಕೂ ಹೆಚ್ಚು ಮಂದಿ ನೆರೆಪೀಡಿತ ಪ್ರದೇಶದಲ್ಲಿ ಸಿಲುಕಿದ್ದಾರೆ.

Uttarakhand_Water

ದೇವಭೂಮಿಯ ಪುಟ್ಟ ಹಳ್ಳಿ ಹಿಮಚ್ಛಾಧಿತ ಭೂಮಿ ಧರಾಲಿ ಮೇಘಸ್ಫೋಟದಿಂದ ನರಕವಾಗಿ ಬದಲಾಗಿದೆ. ಗ್ರಾಮದಲ್ಲೀಗ ಸ್ಮಶಾನಮೌನ ಆವರಿಸಿದೆ. ಜೀವಕಳೆದುಕೊಂಡವರ ಸಂಖ್ಯೆ ಏರಿಕೆ ಆಗುತ್ತಿದೆ. ನೂರಾರು ಮಂದಿ ನಾಪತ್ತೆಯಾಗಿದ್ದು ಹುಡುಕಾಟ ಮುಂದುವರಿದಿದೆ.

ದೇವಭೂಮಿ ಸ್ವರ್ಗವೇ ಧರೆಯ ರೂಪದಲ್ಲಿ ಮೈದಳೆದಿರುವ ನೆಲೆ. ರೌದ್ರರೂಪ ತಾಳಿ ಉಕ್ಕಿ ಬಂದ ಜಲಪಾಶ ನರಕವನ್ನೇ ಸೃಷ್ಟಿಸಿದೆ. ಕ್ಷಣಾರ್ಧದಲ್ಲಿ ಮಧುರ ತಾಣ ಮಣ್ಣಿನಡಿ ಸಮಾಧಿಯಾಗಿದೆ. ಫಲಿತಾಂಶ ಸಾವು-ನೋವಿನ ದುರಂತಗಳು ನಡೆದಿವೆ. ಬದುಕು ಛಿದ್ರವಾಗಿದ್ದು ಅಳಿದುಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.

Uttarakhand_1

ಉತ್ತರಕಾಶಿಯ ಧರಾಲಿ ಮೇಘಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಿನ್ನೆ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಜಲಪ್ರಳಯಕ್ಕೆ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ರಕ್ಷಣೆಗೆ ಬಂದಿದ್ದ 11 ಮಂದಿ ಸೈನಿಕರೂ ಸೇರಿದ್ದಾರೆ. ಸುಮಾರು 413 ಮಂದಿಯನ್ನು ರಕ್ಷಿಸಲಾಗಿದೆ. ರಜಪೂತ್ ರೈಫಲ್ಸ್​​ನ 150 ಸಿಬ್ಬಂದಿ, ಐಟಿಬಿಪಿಯ 100 ಸಿಬ್ಬಂದಿ, ಎನ್​ಡಿಆರ್​ಎಫ್, ಎಸ್​​ಡಿಆರ್​ಎಫ್​ ಸೇರಿ 225 ಜನರ ರಕ್ಷಣಾ ತಂಡ ಕಾರ್ಯೋನ್ಮುಖ ಆಗಿದ್ದು ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಪ್ರತಿಕೂಲ ಹವಾಮಾನ ಸುಗಮ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

200ಕ್ಕೂ ಹೆಚ್ಚು ಮಂದಿ ನೆರೆಪೀಡಿತ

ಮೇಘಸ್ಫೋಟ ಕೆಸರಿನ ಹೊಳೆ, ಭೂಕುಸಿತದಿಂದ ಮುಚ್ಚಿಹೋದ ಮನೆಗಳು, ರಸ್ತೆಗಳು. ಸದ್ಯ ಧರಾಲಿ ಗ್ರಾಮ ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿದೆ. ಧರಾಲಿ ಗ್ರಾಮದ 200ಕ್ಕೂ ಹೆಚ್ಚು ಮಂದಿ ನೆರೆಪೀಡಿತ ಪ್ರದೇಶದಲ್ಲಿ ಸಿಲುಕಿದ್ದು ನಿರಂತರ ಮಳೆ, ಭೂಕುಸಿತದಿಂದ ಪ್ರವಾಹಪೀಡಿತ ಭಾಗಕ್ಕೆ ರಕ್ಷಣಾ ತಂಡಗಳು ಹೋಗುವುದು ಭಾರೀ ಸವಾಲಾಗಿದೆ.

ಇನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳ ಜೊತೆ ವಿಪತ್ತು ನಿರ್ವಹಣಾ ಸಭೆ ನಡೆಸಿ ತುರ್ತು ಕ್ರಮಗಳ ಜೊತೆಗೆ ನಾಪತ್ತೆಯಾಗಿರುವವ ರಕ್ಷಣೆ ಕುರಿತು ಚರ್ಚಿಸಿದ್ದಾರೆ. ಧರಾಲಿ ಹಾಗೂ ಹಾರ್ಸಿಲ್ ಸೇರಿ ಪ್ರವಾಹಪೀಡಿತ ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. 

ಈ ಬೆನ್ನಲ್ಲೇ ಭಾರತೀಯ ವಾಯುಪಡೆಯ ಚಿನೋಕ್, MI-17, V5, ಚೀತಾ ವಿಮಾನಗಳು ಪರಿಹಾರ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಹೊತ್ತು ಆಗ್ರಾ ಹಾಗೂ ಚಂಡೀಗಢದಿಂದ ಹೊರಟು ಡೆಹ್ರಾಡೂನ್ ತಲುಪಿವೆ.

Uttarakhand (1)

ಕಿನ್ನೌರ್‌ನಲ್ಲಿ ಮೇಘಸ್ಫೋಟ..1,196 ಯಾತ್ರಿಕರ ರಕ್ಷಣೆ

ಪಕ್ಕದ ಹಿಮದ ನಾಡು ಹಿಮಾಚಲ ಪ್ರದೇಶದಲ್ಲೂ ಧಾರಾಕಾರ ಮಳೆ, ಭೂಕುಸಿತ ಮುಂದುವರಿದಿದೆ. ಕಿನ್ನೌರ್ ಜಿಲ್ಲೆಯಲ್ಲಿ ಮೇಘಸ್ಫೋಟ ಹಾಗೂ ಭಾರಿ ಮಳೆಯಲ್ಲಿ ಸಿಲುಕಿದ್ದ ಕೈಲಾಸ ಚಾರಣಕ್ಕೆ ತೆರಳುತ್ತಿದ್ದ 1,196 ಮಂದಿ ಯಾತ್ರಿಕರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. 

ಚಾರಣ ಮಾರ್ಗದಲ್ಲಿದ್ದ ಎರಡು ತಾತ್ಕಾಲಿಕ ಸೇತುವೆಗಳು ಕೊಚ್ಚಿ ಹೋಗಿದ್ದರಿಂದ ಹಲವು ಪ್ರವಾಸಿಗರು ಸಿಲುಕಿಕೊಂಡಿದ್ದರು. ಎನ್​ಡಿಆರ್​ಎಫ್​, ಐಟಿಬಿಪಿ ಜಂಟಿ ಕಾರ್ಯಾಚರಣೆ ಮೂಲಕ ಯಾತ್ರಿಕರನ್ನು ರಕ್ಷಿಸಿದ್ದಾರೆ. ಉತ್ತರಾಖಂಡ್ ಹಾಗೂ ಹಿಮಾಚಲಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು ಮತ್ತಷ್ಟು ಅನಾಹುತಗಳು ಆಗುವ ಆತಂಕ ಅಂತೂ ಇದ್ದೇ ಇದೆ.

Previous Post

ಧರ್ಮಸ್ಥಳ ಬುರುಡೆ ರಹಸ್ಯ| ಕಗ್ಗಂಟಾಗಿದೆ 13ನೇ ಪಾಯಿಂಟ್ – ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

Next Post

ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

Next Post
ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.