ಕಡಬ; ಆ 04 : ಆಗಸ್ಟ್ 17 ರಂದು ಕಡಬ ಪಟ್ಟಣ ಪಂಚಾಯತ್ ಗೆ ನಡೆಯಲಿರುವ ಮೊದಲ ಸಾರ್ವತ್ರಿಕ ಚುನಾವಣೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ
1 ನೇ ಕಳಾರ ವಾರ್ಡಿನಿಂದ ಹಿಂದುಳಿದ ವರ್ಗ ಎ ಮಹಿಳಾ ಕ್ಷೇತ್ರದಿಂದ ಸಮೀರ ಕೆ ಯು
3ನೇ ಪಣ್ಯ ವಾರ್ಡಿನಿಂದ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಮುಹಮ್ಮದ್ ಹಾರಿಸ್ ಕಳಾರ
6 ನೇ ಕಡಬ ವಾರ್ಡಿನಿಂದ ಸಾಮಾನ್ಯ ಮಹಿಳೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವಾಲಿಯತ್ ಜಸೀರಾ ರವರು ಇಂದು ಮಧ್ಯಾಹ್ನ ಚುನಾವಣಾಧಿಕಾರಿಗೆ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ SDPI ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಮೇರಾಝ್ ಸುಳ್ಯ, ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್,SDPI ಮಹಿಳಾ ಘಟಕವಾದ ವಿಮನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಉಪಾಧ್ಯಕ್ಷೆ ಝಹನಾ ಬಂಟ್ವಾಳ, ಸ್ಥಳೀಯ ಮುಖಂಡರಾದ ರಮ್ಲಾನ್ ಸನ್ರೈಸ್ ಉಪಸ್ಥಿತರಿದ್ದರು

