Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಟ್ರೋಫಿ ಸ್ವೀಕರಿಸಲ್ಲ ಎಂದಿರಲಿಲ್ಲ, ಅವರು ಕಪ್ ಎತ್ಕೊಂಡು ಓಡಿದರು -ಸೂರ್ಯ ಮತ್ತೆ ಆಕ್ರೋಶ

    ಕ್ರಿಕೆಟ್‌ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ, ಕ್ರಿಕೆಟ್ ಗೆದ್ರೆ ಯುದ್ಧವೇ ಗೆದ್ದಂತಾಯ್ತಾ? – ಬಿ.ಕೆ ಹರಿಪ್ರಸಾದ್‌ ಪ್ರಶ್ನೆ

    ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ, ಬಿಜೆಪಿಗರದ್ದು ಇದೇ ಮನಸ್ಥಿತಿ: ಸಿಎಂ ಸಿದ್ದರಾಮಯ್ಯ

    ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ

    ಸಹಾಯ ಕೇಳಿ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ನಗ್ನ ಫೋಟೊ ಮುಂದಿಟ್ಟು ಬ್ಲಾಕ್ಮೇಲ್, ಹಿಂದೂ ಜಾಗರಣ ವೇದಿಕೆ‌ಯ ಮುಖಂಡ ಸಮಿತ್ ರಾಜ್ ವಿರುದ್ಧ ಪ್ರಕರಣ ದಾಖಲು

    ಬೆಂಗಳೂರು ಸೂಪರ್ ಕಾಪ್ಸ್: ಅಡಿಕೆ ವ್ಯಾಪಾರಿಯ ₹1 ಕೋಟಿ ದರೋಡೆ ಮಾಡಿದ ಗ್ಯಾಂಗ್ 15 ನಿಮಿಷದಲ್ಲೇ ಅರೆಸ್ಟ್!

    ಮಂಗಳೂರು: ಕಾರಿನಲ್ಲಿ ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಟ್ರೋಫಿ ಸ್ವೀಕರಿಸಲ್ಲ ಎಂದಿರಲಿಲ್ಲ, ಅವರು ಕಪ್ ಎತ್ಕೊಂಡು ಓಡಿದರು -ಸೂರ್ಯ ಮತ್ತೆ ಆಕ್ರೋಶ

    ಕ್ರಿಕೆಟ್‌ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ, ಕ್ರಿಕೆಟ್ ಗೆದ್ರೆ ಯುದ್ಧವೇ ಗೆದ್ದಂತಾಯ್ತಾ? – ಬಿ.ಕೆ ಹರಿಪ್ರಸಾದ್‌ ಪ್ರಶ್ನೆ

    ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ, ಬಿಜೆಪಿಗರದ್ದು ಇದೇ ಮನಸ್ಥಿತಿ: ಸಿಎಂ ಸಿದ್ದರಾಮಯ್ಯ

    ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ

    ಸಹಾಯ ಕೇಳಿ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ನಗ್ನ ಫೋಟೊ ಮುಂದಿಟ್ಟು ಬ್ಲಾಕ್ಮೇಲ್, ಹಿಂದೂ ಜಾಗರಣ ವೇದಿಕೆ‌ಯ ಮುಖಂಡ ಸಮಿತ್ ರಾಜ್ ವಿರುದ್ಧ ಪ್ರಕರಣ ದಾಖಲು

    ಬೆಂಗಳೂರು ಸೂಪರ್ ಕಾಪ್ಸ್: ಅಡಿಕೆ ವ್ಯಾಪಾರಿಯ ₹1 ಕೋಟಿ ದರೋಡೆ ಮಾಡಿದ ಗ್ಯಾಂಗ್ 15 ನಿಮಿಷದಲ್ಲೇ ಅರೆಸ್ಟ್!

    ಮಂಗಳೂರು: ಕಾರಿನಲ್ಲಿ ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

ಮಸೀದಿ ಎದುರಲ್ಲೇ ಯುವಕನ ಭೀಕರ ಕೊಲೆ: ಬೆಚ್ಚಿಬಿದ್ದ ಕೊಪ್ಪಳ ಜನ, ಹತ್ಯೆಗೆ ಮುಳುವಾಯ್ತು ಪ್ರೀತಿ!

editor tv by editor tv
August 4, 2025
in ರಾಜ್ಯ
0
ಮಸೀದಿ ಎದುರಲ್ಲೇ ಯುವಕನ ಭೀಕರ ಕೊಲೆ: ಬೆಚ್ಚಿಬಿದ್ದ ಕೊಪ್ಪಳ ಜನ, ಹತ್ಯೆಗೆ ಮುಳುವಾಯ್ತು ಪ್ರೀತಿ!
1.9k
VIEWS
Share on FacebookShare on TwitterShare on Whatsapp

ಭಾನುವಾರ ರಾತ್ರಿ ಮಸೀದಿ ಎದುರಲ್ಲೇ ನಡೆದ ಭೀಕರ ಕೊಲೆಗೆ ಇಡೀ ಕೊಪ್ಪಳದ ಜನರು ಬೆಚ್ಚಿ ಬಿದ್ದಿದ್ದಾರೆ. ಅಪ್ರಾಪ್ತ ಮುಸ್ಲಿಂ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ ಆಗಿದೆ. ಸದ್ಯ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪ ಕೂಡ ಕೇಳಿಬಂದಿದೆ.

ಕೊಪ್ಪಳ, ಆಗಸ್ಟ್​ 04: ಮುಸ್ಲಿಂ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ (kill) ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್​ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್​ ಎಂಬುವನಿಂದ ಗವಿಸಿದ್ದಪ್ಪ ನಾಯಕ್​​ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

ಕೊಲೆ ಮಾಡಿ ಶರಣಾದ ಆರೋಪಿ

ಗವಿಸಿದ್ದಪ್ಪನನ್ನ ಕೊಲೆ ಮಾಡಿದ ಸಾದಿಕ್​ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್​​ 103(1) ಬಿಎನ್​ಎಸ್​ 2023 ಕಲಂ 3(2)ವಿ, ಎಸ್​ಸಿ-ಎಸ್​ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.

ಈ ಕೊಲೆಗೆ ಕಾರಣವಾಗಿದ್ದು ಗವಿಸಿದ್ದಪ್ಪ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು. ಕಳೆದ ಎರಡು ವರ್ಷಗಳಿಂದ ಗವಿಸಿದ್ದಪ್ಪ, ಗೌರಿ ಅಂಗಳ ಏರಿಯಾದ ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಜೊತೆಗೆ ಮನೆ ಬಿಟ್ಟು ಓಡಿ ಸಹ ಹೋಗಿದ್ದರು.‌ ಈ ಕುರಿತಂತೆ ನಾಲ್ಕೈದು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು. ಆದರೂ ಸಹ ಗವಿಸಿದ್ದಪ್ಪ ಹಾಗೂ ಮುಸ್ಲಿಂ ಯುವತಿಯ ನಡುವೆ ಪ್ರೀತಿ ಮುಂದುವರೆದಿತ್ತು. ಹೀಗಾಗಿ ಗವಿಸಿದ್ದಪ್ಪನನ್ನು ಸಾದಿಕ್ ಮಚ್ಚಿನಿಂದ ಕೊಲೆ ಮಾಡಿದ್ದಾನೆ.

ಸದ್ಯ ಇದೊಂದು ಪಕ್ಕಾ ಪ್ರೀ ಪ್ಲ್ಯಾನ್ಡ್ ಮರ್ಡರ್ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಹದ್ದೂರ ಬಂಡಿ ರಸ್ತೆಯಿಂದ ಬರುತ್ತಿದ್ದ ಗವಿ ಸಿದ್ದಪ್ಪನನ್ನ ಅಡ್ಡ ಹಾಕಿ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಪ್ಪಳ ನಗರದಲ್ಲಿ ಇಷ್ಟೊಂದು ಭೀಕರ ಕೊಲೆ ನಡೆದಿರಲಿಲ್ಲ. ಯಾವಾಗ ಇಂತಹದ್ದೊಂದು ಕೊಲೆ ಸುದ್ದಿ ಕೇಳಿದ ಬಳಿಕ ಇಡೀ ನಗರದ ಜನ ಬೆಚ್ಚಿ ಬಿದ್ದಿದ್ದಾರೆ. ಇನ್ನು ಕೊಲೆಯಾದ ಯುವಕ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತ್​ ಸದಸ್ಯ ಯಮನೂರಪ್ಪ ನಾಯಕ್​​ ಸಂಬಂಧಿ.

ಇನ್ನು ಮೂಲಗಳ ಪ್ರಕಾರ ಈ ಮೊದಲು ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಮುಸ್ಲಿಂ ಅಪ್ರಾಪ್ತ ಯುವತಿಯನ್ನು ಸಾದಿಕ್ ಪ್ರೀತಿಸುತ್ತಿದ್ದನಂತೆ.‌ ಸಾದಿಕ್​ನೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡ ಯುವತಿ ಗವಿಸಿದ್ದಪ್ಪನನ್ನು ಪ್ರೀತಿಸಲು ಶುರು ಮಾಡಿದ್ದಳು. ಈ ವಿಷಯ ತಿಳಿದ ಸಾದಿಕ್ ಅನೇಕ ಬಾರಿ ಗವಿಸಿದ್ದಪ್ಪನೊಂದಿಗೆ ಜಗಳ ಸಹ ಮಾಡಿದ್ದನಂತೆ.‌ ಈ ವಿಷಯ ಅತಿರೇಕಕ್ಕೆ ಹೋಗಿ ರವಿವಾರ ರಾತ್ರಿ 8 ಗಂಟೆಗೆ ಮಸೀದಿ ಬಳಿ ಬೈಕ್​ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಪ್ರೀತಿ ವಿಚಾರವಾಗಿ ಕೊಲೆ

ಘಟನೆಯ ಸುದ್ದಿ ತಿಳಿಯುತ್ತಲೇ ಎಸ್​ಪಿ ಡಾ. ರಾಮ್ ಅರಸಿದ್ದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಸಹ ಕೊಪ್ಪಳಕ್ಕೆ ಭೇಟಿ ನೀಡಿ ಸಿಟಿ ರೌಂಡ್ಸ್ ಹಾಕಿದರು. ಸದ್ಯ ಸಾದಿಕ್​ ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಆತನಿಗೆ ಸಹಾಯ ಮಾಡಿದ ಇಬ್ಬರು ಮೂವರು ನಾಪತ್ತೆಯಾಗಿದ್ದಾರೆ. ಕೊಲೆ ಮಾಡಿ ಶರಣಾದ ಸಾದಿಕ್​ ಪ್ರೀತಿ ವಿಚಾರವಾಗಿ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದಾನೆ.

ಘಟನಾ ಸ್ಥಳದಲ್ಲಿ ಎರಡು ಮಚ್ಚುಗಳು ಪತ್ತೆಯಾಗಿವೆ‌, ಆದರೆ ಪೊಲೀಸರು ಮಾತ್ರ ಸಾದಿಕ್ ಒಬ್ಬನೇ ಕೊಲೆ ಮಾಡಿದ್ದಾನೆ ಎನ್ನುವುದು ಹಲವು ಅನುಮಾನಗಳನ್ನು ಉಂಟುಮಾಡಿದೆ. ಇನ್ನು ಮೂಲಗಳ ಪ್ರಕಾರ ಮೂರು ಜನ ಮುಸ್ಲಿಂ ಯುವಕರು ಸೇರಿ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನುಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಪೊಲೀಸರ ನಿರ್ಲಕ್ಷ್ಯದಿಂದ ಕೊಲೆ ಆಯ್ತಾ?

ಪೊಲೀಸರ ನಿರ್ಲಕ್ಷ್ಯದಿಂದ ಗವಿಸಿದ್ದಪ್ಪ ನಾಯಕ್ ಕೊಲೆ ಆಯ್ತಾ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಏಕೆಂದರೆ ಭಾನುವಾರ ಕೊಲೆಗೂ‌ ಮುನ್ನ ಸಾದಿಕ್​ ಮಚ್ಚು ಹಿಡಿದು ರೀಲ್ಸ್ ಮಾಡಿ ಬಿಲ್ಡಪ್ ಕೊಟ್ಟಿದ್ದ. ತನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಬಳಿಕ ರಾತ್ರಿ 7.30 ಕ್ಕೆ ಗವಿಸಿದ್ದಪ್ಪನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದ. ಒಟ್ಟಿನಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆಯಾಗಿರುವ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

Previous Post

KRS ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್- ಸಚಿವ ಹೆಚ್.ಸಿ. ಮಹದೇವಪ್ಪ

Next Post

ಧರ್ಮಸ್ಥಳ ಬುರುಡೆ ರಹಸ್ಯ.. ಇಂದು 3 ಪಾಯಿಂಟ್​​ಗಳಲ್ಲಿ ಆಪರೇಷನ್, ಇಲ್ಲಿವರೆಗೆ ಸಿಕ್ಕಿದ್ದು ಏನೇನು?

Next Post

ಧರ್ಮಸ್ಥಳ ಬುರುಡೆ ರಹಸ್ಯ.. ಇಂದು 3 ಪಾಯಿಂಟ್​​ಗಳಲ್ಲಿ ಆಪರೇಷನ್, ಇಲ್ಲಿವರೆಗೆ ಸಿಕ್ಕಿದ್ದು ಏನೇನು?

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.