ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಗುರುತಿಸಿದ ಸಮಾಧಿ ಸ್ಥಳ ಅಗೆಯುವ ಕೆಲಸ ನಡೆಯುತ್ತಿದೆ. ಆದರೆ ಮೊದಲ ಜಾಗದಲ್ಲಿ 8 ಅಡಿ ಆಳ ಆಗದೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಧರ್ಮಸ್ಥಳ (ಜು.29) ಧರ್ಮಸ್ಥಳದಲ್ಲಿ ನೂರೂರ ಶವಗಳನ್ನು ಹೂತಿಟ್ಟಿರುವುದಾಗಿ ಆರೋಪ ಮಾಡಿದ್ದ ದೂರುದಾರ ಮಹಜರು ವೇಳೆ ಹಲವು ಸಮಾಧಿ ಸ್ಥಳಗಳನ್ನು ಗುರುತಿಸಿದ್ದ. ಇಂದು ಎಸ್ಐಟಿ ಅಧಿಕಾರಿಗಳು ಎಲ್ಲಾ ಕಾನೂನು ಪ್ರಕ್ರಿಯೆ ಮೂಲಕ ಸಮಾಧಿ ಅಗೆದಿದ್ದಾರೆ. ದೂರುದಾರ ಗುರುತಿಸಿದ ಸಮಾಧಿ ಪೈಕಿ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಗುರುತಿಸಿದ್ದ ಸಮಾಧಿ ಸ್ಥಳ ಅಗೆದಿದ್ದಾರೆ. ಕಾರ್ಮಿಕರ ಮೂಲಕ 4 ಅಡಿ ಅಗೆದ ಬಳಿಕ ಜೆಸಿಬಿ ಮೂಲಕ 8 ಅಡಿ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.
ಮೊದಲ ಸಮಾಧಿ ಸ್ಥಳದಲ್ಲಿ 8 ಅಡಿ ಆಳ 15 ಅಡಿ ಅಗಲದಲ್ಲಿ ಅಗೆತ
ಮುಸುಕುದಾರಿ ದೂರುದಾರ ಸೂಚಿಸಿದ ಮೊದಲ ಸಮಾಧಿ ಸ್ಥಳದಲ್ಲಿ ಬರೋಬ್ಬರಿ 8ಅಡಿ ಆಳ, 15 ಅಡಿ ಅಗಲದಲ್ಲಿ ಸಮಾಧಿ ಅಗೆಯಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆರಂಭದಲ್ಲಿ ಕಾರ್ಮಿಕರು 4 ಅಡಿ ಆಳ ಅಗೆದಿದ್ದರು. ಕಳೇಬರ ಪತ್ತೆಯಾಗದ ಹಿನ್ನಲೆಯಲ್ಲಿ ಮತ್ತಷ್ಟು ಅಡಿ ಆಳ ಅಗೆಯಲು ದೂರುದಾರ ಸೂಚಿಸಿದ್ದ. ಹೀಗಾಗಿ ಜೆಸಿಬಿ ಮೂಲಕ 8 ಅಡಿ ಆಳ ಸಮಾಧಿ ಅಗೆಯಲಾಗಿದೆ. ಆದರೆ ಕಳೇಬರ ಪತ್ತೆಯಾಗಿಲ್ಲ.
ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯ
ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. 6 ಅಡಿಯಲ್ಲಿ ಶವ ಹೂತಿಟ್ಟಿರುವುದಾಗಿ ದೂರುದಾರ ಹೇಳಿದ್ದ. ಆದರೆ 6 ಅಡಿಯಲ್ಲೂ ಸಿಗದ ಕಾರಣ 8 ಅಡಿ ಅಗೆಯಲಾಗಿದೆ. ಕಳೇಬರ ಸಿಗದ ಕಾರಣ ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ಇದೀಗ ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯುವ ಕಾರ್ಯ ನಾಳೆ ಆರಂಭಗೊಳ್ಳಲಿದೆ.
ಕಾರ್ಯಾಚರಣೆೆ ಪೊಲೀಸ್ ಡಾಗ್ ಬಳಕೆ
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಾಡಿನಲ್ಲಿ ದೂರುದಾರ ಗುರುತಿಸಿದ ಸಮಾಧಿ ಸ್ಥಳಗಳಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ನಡುವೆ ಕಾರ್ಯಾಚರಣೆಯಲ್ಲಿ ಪೊಲೀಸ್ ನಾಯಿ ಬಳಕೆ ಮಾಡಲಾಗಿದೆ. ಪೊಲೀಸ್ ಡಾಗ್ ಮೂಲಕ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸಮಾಧಿ ಅಗೆದು ಕಳೇಬರಹ ಹೊರತೆಗೆಯುವ ಕಾರ್ಯಾಚರಣೆಗೆ ಪೊಲೀಸ್ ಡಾಗ್ ಬಳಕೆ ಕುತೂಹಲ ಕೆರಳಿಸಿದೆ.
ಮುಂದುವರಿದ ಸ್ಥಳ ಮಹಜರು ಪ್ರಕ್ರಿಯೆ
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟಿರುವುದಾಗಿ ದೂರು ನೀಡಿದ್ದ ಮುಸುಕುದಾರಿ ಮೊದಲ ದಿನದ ಸ್ಥಳ ಮಹಜರು ವೇಳೆ 13 ಸ್ಥಳಗಳನ್ನು ಗುರುತಿಸಿದ್ದ. 13 ಸ್ಥಳಗಳಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಎರಡನೇ ದಿನವಾದ ಇಂದು ಕೂಡ ಸ್ಥಳ ಮಹಜರು ಪ್ರಕ್ರಿಯೆ ಮುಂದುವರಿದಿದೆ. ಎಸ್ಐಟಿ ಅಧಿಕಾರಿಗಳ ಒಂದು ತಂಡ ದೂರುದಾರನ ಜೊತೆ ಸ್ಥಳ ಮಹಜರು ಪ್ರಕ್ರಿಯೆ ಮಾಡಿದೆ. ಮತ್ತಷ್ಟು ಸಮಾಧಿ ಇರುವ ಸ್ಥಳ ಗುರುತಿಸಿರುವುದಾಗಿ ವರದಿಯಾಗಿದೆ.