
ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಉಲ್ಬಣಗೊಂಡಿದೆ. ವಾಕಿಂಗ್ ಹೋಗಿದ್ದ ವೇಳೆ ವೃದ್ಧನ ಮೇಲೆ ಸುಮಾರು 8 ರಿಂದ 9 ನಾಯಿಗಳು ಏಕಾಏಕಿ ಅಟ್ಯಾಕ್ ಮಾಡಿ ಜೀವ ತೆಗೆದಿವೆ.
71 ವರ್ಷದ ಸೀತಪ್ಪ ನಾಯಿ ದಾಳಿಗೆ ಬಲಿಯಾಗಿದ್ದಾರೆ. ಕೈ, ಕಾಲು, ಮುಖಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿ ನೆಲಕ್ಕೆ ಬೀಳಿಸಿವೆ. ನಂತರ ಕೈ, ಕಾಲಿನ ಅರ್ಧ ಮಾಂಸವನ್ನ ತಿಂದಿವೆ. ಇನ್ನು ನಾಯಿ ದಾಳಿಯ ನಂತರದ ದೃಶ್ಯಗಳು ನಿಜಕ್ಕೂ ಭಯಾನಕವಾಗಿದೆ. ಬೀದಿ ನಾಯಿಗಳ ಹಾವಳಿಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

ಮನೆಯಲ್ಲಿ ತಂದೆಯವರು ಇರಲಿಲ್ಲ. ಅವರನ್ನು ಹುಡುಕಿಕುತ್ತ ಬರುತ್ತಿದ್ದೇವು. ನಂತರ ಪೊಲೀಸರು ಇಲ್ಲಿ ಬಂದು ನಿಂತಿದ್ದರು. ನಾವು ಕೇಳಿ ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ನಂತರ ಆ್ಯಂಬುಲೆನ್ಸ್ ಮೂಲಕ ಕಳುಹಿಸಿಕೊಟ್ಟರು. ಕಳೆದ 6 ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಈ ಬಗ್ಗೆ ದೂರು ನೀಡಿದ್ದರೂ ಕೂಡ ಬಿಬಿಎಂಪಿ ಕ್ರಮ ತೆಗೆದುಕೊಂಡಿಲ್ಲ ಎಂದು ಮೃತ ಸೀತಪ್ಪನ ಹಿರಿಯ ಪುತ್ರ ಹೇಳಿದ್ದಾರೆ.
