Mumbai train blast 2006: ಮುಂಬೈನಲ್ಲಿ 2006ರಲ್ಲಿ ಸಂಭವಿಸಿದ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಂಬೆ ಹೈಕೋರ್ಟ್ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. 2006ರ ಜುಲೈ 11ರಂದು ಮುಂಬೈ ರೈಲುಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 188ಮಂದಿ ಬಲಿಯಾಗಿದ್ದರು. ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್ (36), ಇತೇಶಂ ಸಿದ್ದಿಕಿ (30), ಮೊಹಮ್ಮದ್ ಮಾಜಿದ್ ಶಫಿ (32), ಶೇಕ್ ಅಲಾಂ ಶೇಕ್ (41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಜಾಮಿಲ್ ಶೇಕ್ (27), ಸೋಹಿಲ್ ಮೊಹಮ್ಮದ್ ಶೇಕ್ (43), ಜಮೀರ್ ಅಹ್ಮದ್ ಶೇಕ್ (36), ನಾವೆದ್ ಹುಸೇನ್ ಖಾನ್ (30) ಮತ್ತು ಆಸಿಫ್ ಖಾನ್ (38) ಆರೋಪಿಗಳು
ಮುಂಬೈ, ಜುಲೈ 21: ಮುಂಬೈನಲ್ಲಿ 2006ರಲ್ಲಿ ಸಂಭವಿಸಿದ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಂಬೆ ಹೈಕೋರ್ಟ್ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
2006ರ ಜುಲೈ 11ರಂದು ಮುಂಬೈ ರೈಲುಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 188ಮಂದಿ ಬಲಿಯಾಗಿದ್ದರು. ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್ (36), ಇತೇಶಂ ಸಿದ್ದಿಕಿ (30), ಮೊಹಮ್ಮದ್ ಮಾಜಿದ್ ಶಫಿ (32), ಶೇಕ್ ಅಲಾಂ ಶೇಕ್ (41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಜಾಮಿಲ್ ಶೇಕ್ (27), ಸೋಹಿಲ್ ಮೊಹಮ್ಮದ್ ಶೇಕ್ (43), ಜಮೀರ್ ಅಹ್ಮದ್ ಶೇಕ್ (36), ನಾವೆದ್ ಹುಸೇನ್ ಖಾನ್ (30) ಮತ್ತು ಆಸಿಫ್ ಖಾನ್ (38) ಆರೋಪಿಗಳು.
ಎಟಿಎಸ್ ಚಾರ್ಜ್‌ಶೀಟ್ ಪ್ರಕಾರ, ರೈಲುಗಳಲ್ಲಿ ಸರಣಿ ಸ್ಫೋಟಕ್ಕೆ ಬಳಸಲಾದ ಬಾಂಬ್‌ಗಳನ್ನು ಮುಂಬೈ ಹೊರವಲಯದ ಗೋವಾಂಡಿ ಪ್ರದೇಶದಲ್ಲಿರುವ ಕೊಠಡಿಯೊಂದರಲ್ಲಿ ತಯಾರಿಸಲಾಗಿತ್ತು. ಈ ವೇಳೆ ಹಲವು ಪಾಕ್ ಮೂಲದ ಪ್ರಜೆಗಳು ಹಾಜರಿದ್ದರು. ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಮಿಶ್ರಣವನ್ನು ಸ್ಫೋಟಕ್ಕೆ ಬಳಸಲಾಗಿತ್ತು.
ಈ ಮಿಶ್ರಣವನ್ನು 7 ಪ್ರತ್ಯೇಕ ಬ್ಯಾಗ್‌ಗಳಲ್ಲಿ ತುಂಬಿ, ಚರ್ಚ್‌ಗೇಟ್‌ನಿಂದ ಹೊರಟಿದ್ದ ರೈಲುಗಳಲ್ಲಿ ಇರಿಸಲಾಗಿತ್ತು. ಖಾರ್‌ರಸ್ತೆ-ಸಾಂತಾಕ್ರೂಜ್, ಬಾಂದ್ರಾ-ಖಾರ್ ರಸ್ತೆ, ಜೋಗೇಶ್ವರಿ-ಮಾಹಿಮ್ ಜಂಕ್ಷನ್, ಮೀರಾ ರಸ್ತೆ-ಭಯೇಂದರ್, ಮಾತುಂಗ-ಮಾಹಿಮ್ ಜಂಕ್ಷನ್ ಮಾರ್ಗಗಳ ಮಧ್ಯೆ ರೈಲುಗಳಲ್ಲಿ ಸ್ಫೋಟ ಸಂಭವಿಸಿತ್ತು.
ಈ ತೀರ್ಪನ್ನು ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ಎಸ್.ಜಿ. ಚಂದಕ್ ಅವರ ವಿಭಾಗೀಯ ಪೀಠ ನೀಡಿತು. ಈ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳನ್ನು ಈ ಹಿಂದೆ ಕೆಳ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತ್ತು, ಅದರಲ್ಲಿ 5 ಜನರಿಗೆ ಮರಣದಂಡನೆ ಮತ್ತು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದಾಗ್ಯೂ, ಹೈಕೋರ್ಟ್‌ನಲ್ಲಿ ವಿಚಾರಣೆಯ ಸಮಯದಲ್ಲಿ, 11 ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು, ಆದರೆ ಒಬ್ಬ ಆರೋಪಿ ಈಗಾಗಲೇ ಸಾವನ್ನಪ್ಪಿದ್ದಾನೆ.

ಮೂಲಗಳ ಪ್ರಕಾರ, ಈ ಪ್ರಕರಣದ ಅಂತಿಮ ವಿಚಾರಣೆ ಈ ವರ್ಷದ ಜನವರಿಯಲ್ಲಿ ಪೂರ್ಣಗೊಂಡಿತು, ನಂತರ ತೀರ್ಪನ್ನು ಕಾಯ್ದಿರಿಸಲಾಯಿತು. ಅಪರಾಧಿಗಳು ಯೆರವಡಾ, ನಾಸಿಕ್, ಅಮರಾವತಿ ಮತ್ತು ನಾಗ್ಪುರ ಜೈಲುಗಳಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದಲ್ಲಿ ತಮ್ಮ ಉಪಸ್ಥಿತಿಯನ್ನು ಗುರುತಿಸಿದ್ದರು.
2006 ರಲ್ಲಿ ನಡೆದ ಈ ಬೃಹತ್ ಬಾಂಬ್ ಸ್ಫೋಟದಲ್ಲಿ, ಮುಂಬೈನ ಸ್ಥಳೀಯ ರೈಲುಗಳಲ್ಲಿ ಏಳು ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿದವು, ಇದರಲ್ಲಿ 189 ಜನರು ಪ್ರಾಣ ಕಳೆದುಕೊಂಡರು ಮತ್ತು ನೂರಾರು ಜನರು ಗಾಯಗೊಂಡರು. ಈ ನಿರ್ಧಾರವನ್ನು ತನಿಖಾ ಸಂಸ್ಥೆಗಳಿಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ.
ಚರ್ಚ್‌ಗೇಟ್‌ನಿಂದ ಬೊರಿವೆಲಿಯೆಡೆಗೆ ತೆರಳುತ್ತಿದ್ದ ಸಬ್‌ಅರ್ಬನ್ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಸಂಜೆ 6.20ಕ್ಕೆ ಮೊದಲ ಸ್ಫೋಟ. ಇದಾದ ಕೆಲವೇ ಸಮಯದಲ್ಲಿ ಸ್ಫೋಟಗೊಂಡ 6 ಸ್ಫೋಟಗಳು ಸಂಭವಿಸಿದ್ದು, 189 ಜನರು ಪ್ರಾಣ ಕಳೆದುಕೊಂಡಿದ್ದರೆ, 800 ಮಂದಿ ಗಾಯಗೊಂಡಿದ್ದರು.