ಕದನ ವಿರಾಮ ನನ್ನಿಂದಲೇ ಆಗಿದ್ದು: ಅಮೆರಿಕ ಅಧ್ಯಕ್ಷ ಪುನರುಚ್ಚಾರ
ವಾಷಿಂಗ್ಟನ್: ವ್ಯಾಪಾರ ಬೆದರಿಕೆ ಹಾಕಿ ಭಾರತ ಮತ್ತು ಪಾಕಿಸ್ತಾನ (India Pakistan Conflict) ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪುನರುಚ್ಚಾರ ಮಾಡಿದ್ದಾರೆ.
ಶ್ವೇತಭವನದಲ್ಲಿ ಕೆಲವು ರಿಪಬ್ಲಿಕನ್ ಶಾಸಕರೊಂದಿಗೆ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್, ಕದನ ವಿರಾಮ ನನ್ನಿಂದಲೇ ಆಗಿದ್ದು. ವ್ಯಾಪಾರ ಬೆದರಿಕೆಯನ್ನು ಬಳಸಿಕೊಂಡು ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತು. ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಸುಮಾರು 4-5 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಜೆಟ್‌ಗಳು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.
ಆದರೆ ಟ್ರಂಪ್, ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಕದನ ವಿರಾಮಕ್ಕೆ ವ್ಯಾಪಾರ ಬೋಗಿಯನ್ನು ಬಳಸಿಕೊಂಡು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಮತ್ತೊಮ್ಮೆ ಪುನರುಚ್ಚಾರಿಸಿದ್ದಾರೆ.
ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ಕೆಲವು ದಿನಗಳ ನಂತರ, ಏರ್ ಮಾರ್ಷಲ್ ಎ.ಕೆ.ಭಾರ್ತಿ, ಅನೇಕ ‘ಹೈಟೆಕ್’ ಪಾಕಿಸ್ತಾನಿ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದರು.