
ಬೌದ್ಧ ಬಿಕ್ಕುಗಳನ್ನ ಹಾಸಿಗೆಗೆ ಎಳೆದ ಆಧುನಿಕ ಮೇನಕೆಯ ಕತೆ ಇದು. ಬ್ಯಾಂಕಾಕ್‌ನಲ್ಲಿ ಈ ಸುಂದರಿ ಸೃಷ್ಟಿಸಿರೋ ಅವಾಂತರ ಅಷ್ಟಿಷ್ಟಲ್ಲ. ಆಕೆ ಮಾಡಿರೋ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹುಟ್ಟು ಹಾಕಿದೆ. 80 ಸಾವಿರ ಪೋಟೋಗಳು.. ಹಲವು ವಿಡಿಯೋ.. ಬೌದ್ಧ ಭಿಕ್ಕುಗಳಿಗೆ ಬ್ಲ್ಯಾಕ್‌ಮೇಲ್.. ಕೆಟ್ಟ ದಾರಿಯಿಂದ ಈ ಬ್ಯೂಟಿ ಸಂಪಾದಿಸಿದ್ದು 102 ಕೋಟಿ.. ವಿಶ್ವಾಮಿತ್ರನ ತಪೋಭಂಗ ಮಾಡಿದಂತೆ ಬೌದ್ಧ ಬಿಕ್ಕುಗಳನ್ನ ಹಾಸಿಗೆಗೆ ಎಳೆದ ಆಧುನಿಕ ಮೇನಕೆಯೀಕೆ. ಈಕೆ ರಾಸ ಲೀಲೆಗೆ ಥೈಲ್ಯಾಂಡ್ನ ಜನತೆ ಬೆಚ್ಚಿಬಿದ್ದಿದ್ದಾರೆ.

ಈಕೆ ಅಂತಿಂಥ ಸುಂದರಿಯಲ್ಲ. ಬರೋಬರಿ 102 ಕೋಟಿ ರೂಪಾಯಿ ವಸೂಲಿ ಮಾಡಿದ್ಲು ಈ ಬ್ಯೂಟಿ. ಹೆಸರು ವಿಲಾವನ್ ಎಮ್ಸಾವಟ್. ಅನೇಕ ಪ್ರಭಾವಿಗಳನ್ನ ಪಟಾಯಿಸೋದು. ಅವರ ಜೊತೆಗೆ ಹಾಸಿಗೆ ಹಂಚಿಕೊಳ್ಳೋದು. ಆ ಪ್ರಣಯದ ದೃಶ್ಯಗಳನ್ನ ಗುಟ್ಟಾಗಿ ಫೋಟೋ ತಗೆದಿಟ್ಟುಕೊಳ್ಳೋದು. ಆನಂತರ ಆ ಪೋಟೋಗಳನ್ನಿಟ್ಕೊಂಡು.. ಆ ವ್ಯಕ್ತಿಗಳಿಂದ ಹನಿ ಹಣ ಸುಲಿಗೆಗಿಳಿಯೋದು ಈಕೆಯ ಕೆಲಸ. ಇದೇ ರೀತಿ ಬೌದ್ಧ ಬಿಕ್ಕುಗಳನ್ನು ಟ್ರ್ಯಾಪ್ ಮಾಡಿದ್ದ ಈಕೆಯನ್ನು ಪೊಲೀಸರು ಲಾಕ್ ಮಾಡಿದ್ದಾರೆ.

ಹನಿ ಲೇಡಿ ವಿಲಾವನ್ ಜಾಲಕ್ಕೆ ಸಿಕ್ಕಿ ಅನೇಕ ಬೌದ್ಧ ಬಿಕ್ಕುಗಳ ಅಂದ್ರೆ ಥೈಲ್ಯಾಂಡ್ ಸನ್ಯಾಸಿಗಳು ಕೂಡ ವಿಲವಿಲ ಒದ್ದಾಡಿದ್ರು. ಅನೇಕರಿಂದ ಸುಲಿಗೆ ಮಾಡಿದ ಹಣದಿಂದ ಉತ್ತರ ಬ್ಯಾಂಕಾಕ್‌ನಲ್ಲಿ ಐಶಾರಾಮಿ ಜೀವನವನ್ನ ನಡೆಸುತ್ತಿದ್ಳು. ಈಕೆಯ ಜಾಲವನ್ನ ಭೇದಿಸಿರೋ ಪೊಲೀಸ್ರು ನೋಂಥಬುರಿಯಲ್ಲಿರೋ ಆಕೆಯ ಮನೆಯ ಮೇಲೆ ರೈಡ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಆಕೆಯ ಮನೆಯನ್ನ ಸರ್ಚ್ ಮಾಡಿದಾಗ ಅಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ನಗ್ನ ಫೋಟೋಗಳು ಸಿಕ್ಕಿವೆ. ಜೊತೆಗೆ 100 ಕೋಟಿ ರೂಪಾಯಿ ಮೌಲ್ಯದ ಥಾಯ್ಲೆಂಡ್ ಕರೆನ್ಸಿಯೂ ಪತ್ತೆಯಾಗಿದೆ. ಆಕೆಗಿನ್ನೂ 30ರ ಪ್ರಾಯವಾಗಿದ್ರೂ ಅಷ್ಟು ದೊಡ್ಡ ಬಂಗಲೆ.. ಐಶಾರಾಮಿ ಜೀವನದ ಜೊತೆಗೆ 100 ಕೋಟಿ ರೂಪಾಯಿಯಷ್ಟು ಹಣ ಇಟ್ಟುಕೊಂಡಿದ್ದಾಳೆ. ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ಉಪದೇಶವನ್ನ ಅಕ್ಷರಶಃ ಪಾಲಿಸುವಂಥ ಬೌದ್ಧ ಬಿಕ್ಕುಗಳನ್ನೂ ಬಿಟ್ಟಿಲ್ಲವಂತೆ ಇವಳು ಅಂತ ಪೊಲೀಸರೇ ಹೇಳಿದ್ದಾರೆ.

ಆಕೆ, ಏನಿಲ್ಲ ಅಂದ್ರೂ ಒಂಬತ್ತು ಬೌದ್ಧ ಬಿಕ್ಕುಗಳೊಂದಿಗೆ ಹಾಸಿಗೆ ಹಂಚಿಕೊಂಡಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ವಿಲಾವನ್ ಎಮ್ಸಾವಟ್ ಒಂಬತ್ತು ಬೌದ್ಧ ಬಿಕ್ಕುಗಳೊಂದಿಗೆ ಇದ್ದ ಫೋಟೋಗಳು ಕೂಡ ಸಿಕ್ಕಿದ್ದು, ಆ ಒಂಬತ್ತು ಸನ್ಯಾಸಿಗಳನ್ನ ವಜಾಗೊಳಿಸಲಾಗಿದೆ. ಮೊದಲು ಹಿರಿಯ ಬೌದ್ಧಬಿಕ್ಕುಗಳನ್ನ ತನ್ನ ಬಲೆಗೆ ಬೀಳಿಸಿಕೊಳ್ತಿದ್ದ ವಿಲಾವನ್ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದಳು. ನಂತರ ವಿಷಯ ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿತ್ತಿದ್ದಳು. ಬೆದರಿಕೆಗೆ ಅಂಜಿ ಬಿಕ್ಕುಗಳು ದೇಗುಲಗಳ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣವನ್ನ ಈಕೆಯ ಖಾತೆಗೆ ವರ್ಗಾಯಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಹಿರಿಯ ಸನ್ಯಾಸಿಯೊಬ್ಬರು ಬ್ಲ್ಯಾಕ್ ಮೇಲ್‌ಗೆ ಒಳಗಾಗಿ ಇದ್ದಕ್ಕಿದ್ದಂತೆ ಸನ್ಯಾಸತ್ವ ತೊರೆದಿದ್ರು. ಇದಾದ ಕೆಲವೇ ದಿನಗಳಲ್ಲಿ ಅವರು ನಾಪತ್ತೆಯಾಗಿದ್ರು. ಈ ಬೆಳವಣಿಗೆ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅದ್ಹೇನೆ ಇರಲಿ, ಥೈಲ್ಯಾಂಡ್‌ನಲ್ಲಿ 2,00,000 ಸನ್ಯಾಸಿಗಳಿದ್ದು, 85 ಸಾವಿರ ಬೌದ್ಧ ಬಿಕ್ಕುಗಳ ಶಿಷ್ಯರಿದ್ದಾರೆ. ಬ್ರಹ್ಮಚರ್ಯ – ಅಹಿಂಸೆಗಳೇ ಬೌದ್ಧ ಬಿಕ್ಕುಗಳ ಜೀವನದ ಮಹದೋದ್ದೇಶ. ಆದರೂ, ಅಂಥ ಬ್ರಹ್ಮಚಾರಿಗಳನ್ನ ಗೃಹಸ್ಥರನ್ನಾಗಿಸಿದ ಆಕೆಯ ಮೇಲಿನ ಕೋಪಕ್ಕಿಂತ ಹೆಣ್ಣಿನಾಸೆಗೆ ತಮ್ಮ ಸ್ಥಾನಮಾನವನ್ನೂ ತ್ಯಾಗ ಮಾಡಿದ ಬೌದ್ಧ ಬಿಕ್ಕುಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.