Ashraf Kammaje
Published : Jul 16 2025, 04:29 PM IST
ಸೌದಿ ಅರೇಬಿಯಾ, ಯುಎಇ, ನೇಪಾಳ ಸೇರಿದಂತೆ ವಿವಿಧ ದೇಶಗಳ ಜೈಲುಗಳಲ್ಲಿ ಸಾವಿರಾರು ಭಾರತೀಯರು ಶಿಕ್ಷೆ (indians in foreign Jail) ಅನುಭವಿಸುತ್ತಿದ್ದಾರೆ. ಯಾವ ದೇಶದಲ್ಲಿ ಎಷ್ಟು ಮಂದಿ ಭಾರತೀಯರು ಜೈಲುವಾಸ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ
ಯೆಮೆನ್ (Yemen) ದೇಶ ಭಾರತೀಯ ನರ್ಸ್ ನಿಮಿಷಾ ಪ್ರಿಯಾ (nimisha priya) ಅವರ ಮರಣದಂಡನೆಯನ್ನು (death imprisonment) ಮುಂದೂಡಿದ್ದರೂ, ವಿದೇಶಿ ಜೈಲುಗಳಲ್ಲಿ ಸಾವಿರಾರು ಭಾರತೀಯರು ಇನ್ನೂ ಕೊಳೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಜೈಲಿನಲ್ಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಹಿತಿಯ ಪ್ರಕಾರ 2025ರ ಮಾರ್ಚ್ ವೇಳೆಗೆ 10,152 ಮಂದಿ ಭಾರತೀಯರು ವಿದೇಶದ ಜೈಲಿನಲ್ಲಿದ್ದಾರೆ. ಕೆಲವರು ವಿಚಾರಣಾಧೀನ ಕೈದಿಯಾಗಿದ್ದರೆ, ಇನ್ನೂ ಹಲವರು ಹಲವು ಕೇಸ್‌ಗಳಲ್ಲಿ ಅಪರಾಧಿಗಳಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಯಾವ ದೇಶದ ಜೈಲಿನಲ್ಲಿ ಗರಿಷ್ಠ ಭಾರತೀಯರು ಇದ್ದಾರೆ ಎನ್ನುವ ಟಾಪ್-10 ಲಿಸ್ಟ್.
ಸೌದಿ ಅರೇಬಿಯಾದ ಜೈಲುಗಳಲ್ಲಿ 2633 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ.
2ನೇ ಸ್ಥಾನದಲ್ಲಿ ಯುಎಇ ರಾಷ್ಟ್ರವಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಯುಎಇಯಲ್ಲಿ 2518 ಮಂದಿ ಭಾರತೀಯರು ಜೈಲಿನಲ್ಲಿದ್ದಾರೆ.
ಭಾರತದ ಪಕ್ಕದ ರಾಷ್ಟ್ರ ನೇಪಾಳದ ಜೈಲಿನಲ್ಲೂ ಭಾರತೀಯರಿದ್ದಾರೆ. 1122 ಮಂದಿ ಭಾರತೀಯರು ಅಲ್ಲಿನ ಜೈಲಿನಲ್ಲಿದ್ದಾರೆ ಎನ್ನುವ ಮಾಹಿತಿ ಇದೆ.
ಮತ್ತೊಂದು ಮಧ್ಯಪ್ರಾಚ್ಯ ರಾಷ್ಟ್ರವಾಗಿರುವ ಕತಾರ್ ದೇಶದಲ್ಲಿ 937 ಮಂದಿ ಭಾರತೀಯರು ಜೈಲಿನಲ್ಲಿದ್ದಾರೆ
ಮಲೇಷ್ಯಾದ ಜೈಲುಗಳಲ್ಲಿ 387 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ.
ಇಂಗ್ಲೆಂಡ್ ದೇಶದ ಜೈಲುಗಳಲ್ಲಿ 338 ಮಂದಿ ಭಾರತೀಯರು ಶಿಕ್ಷೆ ಎದುರಿಸುತ್ತಿದ್ದಾರೆ.
ಭಾರತದ ಪ್ರಮುಖ ಎದುರಾಳಿ ಹಾಗೂ ನೆರೆಯ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ 286 ಮಂದಿ ಭಾರತೀಯರು ಈಗಲೂ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇನ್ನು ಬಹರೇನ್‌ದೇಶದ ಜೈಲುಗಳಲ್ಲಿ 181 ಮಂದಿ ಭಾರತೀಯರು ಶಿಕ್ಷೆ ಎದುರಿಸುತ್ತಿದ್ದಾರೆ.
ಚೀನಾದಲ್ಲಿ 173 ಮಂದಿ ಭಾರತೀಯರು ಶಿಕ್ಷೆ ಎದುರಿಸುತ್ತಿದ್ದು, ಗರಿಷ್ಠ ಭಾರತೀಯರು ಇರುವ ವಿದೇಶಿ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಉಳಿದಂತೆ ಜಗತ್ತಿನ ಇತರ ದೇಶಗಳ ಜೈಲಿನಲ್ಲಿ 1440 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ.