ಮಹತ್ವದ ಬೆಳವಣಿಗೆಯೊಂದರಲ್ಲಿ, ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16 ರಂದು ನಿಗದಿಯಾಗಿದ್ದ ಭಾರತೀಯ ಪ್ರಜೆ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಮುಂದೂಡಿದ್ದಾರೆ. ಈ ಪ್ರಕರಣದ ವಿಚಾರಣೆ ಆರಂಭದಿಂದಲೂ ವಿದೇಶಾಂಗ ಸಚಿವಾಲಯ ಸಹಾಯ ಮಾಡುತ್ತಿದೆ. ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ(Nimisha Priya) ಪ್ರಕರಣ ಕುರಿತು ಪ್ರಸಿದ್ಧ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆದಿತ್ತು. ಸಭೆಯಲ್ಲಿ ಯೆಮೆನ್ ಸರ್ಕಾರದ ಪ್ರತಿನಿಧಿಗಳು, ನ್ಯಾಯಮೂರ್ತಿಗಳು ಮತ್ತು ಮೃತ ತಲಾಲ್ ಅವರ ಸಹೋದರ ಭಾಗವಹಿಸಿದ್ದರು. ಕೇರಳದ ಪಾಲಕ್ಕಾಡ್‌ನ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ತನ್ನ ಪಾರ್ಟ್ನರ್ ಕೊಲೆ ಆರೋಪದ ಮೇಲೆ 2017 ರಿಂದ ಯೆಮೆನ್‌ನಲ್ಲಿ ಜೈಲಿನಲ್ಲಿದ್ದಾರೆ.
ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣ ಕುರಿತು ಪ್ರಸಿದ್ಧ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆದಿತ್ತು. ಸಭೆಯಲ್ಲಿ ಯೆಮೆನ್ ಸರ್ಕಾರದ ಪ್ರತಿನಿಧಿಗಳು, ನ್ಯಾಯಮೂರ್ತಿಗಳು ಮತ್ತು ಮೃತ ತಲಾಲ್ ಅವರ ಸಹೋದರ ಭಾಗವಹಿಸಿದ್ದರು. ಕೇರಳದ ಪಾಲಕ್ಕಾಡ್‌ನ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ತನ್ನ ಪಾರ್ಟ್ನರ್ ಕೊಲೆ ಆರೋಪದ ಮೇಲೆ 2017 ರಿಂದ ಯೆಮೆನ್‌ನಲ್ಲಿ ಜೈಲಿನಲ್ಲಿದ್ದಾರೆ.
2017ರಲ್ಲಿ ತನ್ನ ಯೆಮೆನ್‌ನ ವ್ಯವಹಾರ ಬ್ಯುಸಿನೆಸ್ ಪಾರ್ಟ್ನರ್ ಅಬ್ದೋ ಮಹ್ದಿ ಕೊಲೆಗೆ ಗಲ್ಲು ಶಿಕ್ಷೆಗೊಳಗಾದ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಮಾತುಕತೆಗಳು ನಡೆಯುತ್ತಿದೆ. ಯೆಮೆನ್‌ನಲ್ಲಿ ಶರಿಯಾ ಕಾನೂನಿನಡಿಯಲ್ಲಿ, ಬ್ಲಡ್ ಮನಿ ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಕಾನೂನುಬದ್ಧವಾದ ಆರ್ಥಿಕ ಪರಿಹಾರವಾಗಿದೆ.
ಏತನ್ಮಧ್ಯೆ, ಮಾತುಕತೆಗಳನ್ನು ಸುಗಮಗೊಳಿಸಲು ಇಲ್ಲಿನ ಮುಸ್ಲಿಯಾರ್ ಅವರ ಪ್ರಧಾನ ಕಚೇರಿಯಲ್ಲಿ, ಪ್ರತ್ಯೇಕ ಕಚೇರಿಯನ್ನು ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ ಅವರಿಗೆ 2020 ರಲ್ಲಿ ಮರಣದಂಡನೆ ವಿಧಿಸಲಾಯಿತು ಮತ್ತು ಅವರ ಅಂತಿಮ ಮೇಲ್ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು. ನಿಮಿಷಾ ಕಡೆಯವರು 8.6 ಕೋಟಿ ರೂ. ನೀಡಲು ಸಿದ್ಧರಿದ್ದರು. ಆದರೆ ಮೃತ ವ್ಯಕ್ತಿಯ ಕಡೆಯವರು ಒಪ್ಪಿಕೊಂಡಿರಲಿಲ್ಲ.