
ಕಲಬುರಗಿ: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಪ್ರಕರಣ ಇಡೀ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಥೇಟ್ ಅದೇ ಮಾದರಿಯಲ್ಲೇ ಕಲಬುರಗಿಯಲ್ಲಿ ವ್ಯಕ್ತಿಯೋರ್ವನ ಜೀವ ತೆಗೆದಿರುವುದು ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಕೇಸ್ ಶೆಡ್ನಲ್ಲಿ ನಡೆದ್ರೆ, ಕಲಬುರಗಿಯ ರಾಘವೇಂದ್ರನನ್ನ ಸ್ಮಶಾನದಲ್ಲಿ ಮುಗಿಸಲಾಗಿದೆ. ಇದರ ಹಿಂದೆಯೂ ಓರ್ವ ಮಹಿಳೆ, ಅಶ್ಲೀಲ ಮೆಸೇಜ್ ಮತ್ತು ಟಾರ್ಚರ್ ಇದೆ.
ಇಡೀ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಕ್ರೈಂ ಪ್ರಕರಣ ಅಂದ್ರೆ ನಟ ದರ್ಶನ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೇಸ್. ರೇಣುಕಾಸ್ವಾಮಿ ಪ್ರಕರಣ ಆದ ಮಾದರಿಯಲ್ಲೇ ಕಲಬುರಗಿಯಲ್ಲಿ ವ್ಯಕ್ತಿಯ ಜೀವ ತೆಗೆದಿರುವುದು ಬೆಳಕಿಗೆ ಬಂದಿದೆ. ರಾಘವೇಂದ್ರ ನಾಯಕ್ನನ್ನ ಗುರುರಾಜ, ಅಶ್ವಿನಿ ಮತ್ತು ಲಕ್ಷ್ಮೀಕಾಂತ್ ಮುಗಿಸಿದ್ದಾರೆ. ಅಂದಹಾಗೆ ರಾಘವೇಂದ್ರ ಅವರ ಜೀವ ತೆಗೆಯಲು ಮುಖ್ಯ ಕಾರಣ ಅಶ್ಲೀಲ ಮೆಸೇಜ್ ಮತ್ತು ಟಾರ್ಚರ್ ಆಗಿದೆ.

ರಾಘವೇಂದ್ರನ ಬಿಟ್ಟು ಮತ್ತೊಬ್ಬನ ಜೊತೆ ಸ್ನೇಹ
ಕೃತ್ಯ ಎಸಗಿ ಬಂಧಿತರಾದ ಆರೋಪಿ ಅಶ್ವಿನಿ ಮತ್ತು ಮೃತ ರಾಘವೇಂದ್ರ ಇಬ್ಬರು ಮೊದಲಿಂದಲೂ ಸ್ನೇಹಿತರು. ಯಾವಾಗ ಅಶ್ವಿನಿ ಸ್ನೇಹ ಮತ್ತೊಬ್ಬನ ಜೊತೆ ಜಾಸ್ತಿಯಾಗುತ್ತೋ ಆಗ ರಾಘವೇಂದ್ರ ಸಿಟ್ಟಿಗೆದ್ದು ಇಬ್ಬರ ಮಧ್ಯೆ ಜಗಳವಾಗಿದೆ. ಅಶ್ವಿನಿಯನ್ನ ಬಿಟ್ಟುಕೊಡದ ರಾಘವೇಂದ್ರ ಪದೇ ಪದೇ ಟಾರ್ಚರ್ ನೀಡ್ತಿದ್ದನಂತೆ. ಅಲ್ಲದೆ ಅಶ್ಲೀಲ ಮೆಸೇಜ್ ಕೂಡ ಮಾಡ್ತಿದ್ದ. ಹೀಗಾಗಿ ಅಶ್ವಿನಿ ತನ್ನ ಸ್ನೇಹಿತ ಗುರುರಾಜಗೆ ಈ ಬಗ್ಗೆ ಹೇಳಿದ್ದಾಳೆ. ರಾಘವೇಂದ್ರಗೆ ಒಂದು ಗತಿ ಕಾಣಿಸಬೇಕು ಅಂತ ಕಾರ್ನಲ್ಲಿ ರಾಘವೇಂದ್ರನನ್ನ ಕಿಡ್ನಾಪ್ ಮಾಡಿ ಕೃಷ್ಣಾನಗರ ಸ್ಮಶಾನಕ್ಕೆ ಕರೆದು ತಂದು ಮರ್ಮಾಂಗಕ್ಕೆ ಹೊಡೆದು ಮಾರಕಾಸ್ತ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಮುಗಿಸಿದ್ದಾರೆ. ಸಾಕ್ಷಿ ನಾಶಪಡಿಸಲು ಕಾರ್ನಲ್ಲಿ ಮೃತದೇಹ ಸಾಗಿಸಿ ರಾಯಚೂರಿನ ಶಕ್ತಿನಗರ ಬಳಿಯ ಬ್ರೀಡ್ಜ್ನಿಂದ ಮೃತದೇಹವನ್ನ ಕೃಷ್ಣಾ ನದಿಗೆ ಎಸೇದು ಎಸ್ಕೇಪ್ ಆಗಿದ್ದರು.
ಅಂದಹಾಗೆ ರಾಘವೇಂದ್ರ ನಾಯಕ ಮೂಲತಃ ಕಾರವಾರ ಮೂಲದವರು. ತನ್ನ ಹೆಂಡತಿ ಸುರೇಖಾ ಜೊತೆ ಕಲಬುರಗಿಗೆ ಬಂದು ನೆಲೆಸಿದ್ದರು. ಕಲಬುರಗಿ ನಗರದ ಗಣೇಶ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಹೊಟೇಲ್ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಕಿಡ್ನಾಪ್, ಸ್ಮಶಾನದಲ್ಲಿ ಉಸಿರು ನಿಲ್ಲಿಸಿದರು
ನಗರದ ಸೂಪರ್ ಮಾರ್ಕೆಟ್ನ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ನಾಯಕ್, ಅಲ್ಲದೆ 15- 20 ದಿನಕ್ಕೊಮ್ಮೆ ಮನೆ ಬರುತ್ತಿದ್ದನು. ಆದರೆ ಕಳೆದ ಮಾರ್ಚ್ 12 ರಂದು ಬೆಳಗ್ಗೆ 9 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದ ರಾಘವೇಂದ್ರ ಮನೆಗೆ ಬಂದಿರಲಿಲ್ಲ. ಅಂದೆ ರಾಘವೇಂದ್ರನನ್ನ ಆರೋಪಿಗಳು ಕಿಡ್ನಾಪ್ ಮಾಡಿ ಸ್ಮಶಾನದಲ್ಲಿ ಜೀವ ತೆಗೆದಿದ್ದರು. ಮಾರ್ಚ್ 14 ರಂದು ಮೃತದೇಹ ಪತ್ತೆಯಾಗಿತ್ತು. ಇನ್ನು ಬಹಳ ದಿನಗಳು ಆದರೂ ಗಂಡ ಮನೆಗೆ ಬರಲಿಲ್ಲ, ಮೊಬೈಲ್ ಕಾಲ್ ಮಾಡಿದ್ರು ಕನೆಕ್ಟ್ ಆಗದಿದ್ದಾಗ ಸುರೇಶ್ ದಿನಾಂಕ 2025 ಮೇ 25 ರಂದು ಸ್ಟೇಷನ್ ಬಜಾರ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುತ್ತಾಳೆ.
ರಾಘವೇಂದ್ರ ಮಿಸ್ಸಿಂಗ್ ಕೇಸ್ ತನಿಖೆಗೆ ಪೊಲೀಸರು ಇಳಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೆ ಪೊಲೀಸರು ಈ ಪ್ರಕರಣ ಭೇದಿಸುವುದು ಚಾಲೆಂಜ್ ಆಗಿತ್ತು. ಯಾಕಂದ್ರೆ ಮಿಸ್ಸಿಂಗ್ ಆದ 2 ತಿಂಗಳ ಬಳಿಕ ಕೇಸ್ ದಾಖಲಾಗಿತ್ತು. ಆದರೂ ಲಾಸ್ಟ್ ಮೊಬೈಲ್ ಲೊಕೇಶನ್ ಹಾಕಿ ಟೆಕ್ನಿಕಲ್ ಆಗಿ ತನಿಖೆ ನಡೆಸಿ ತಾಂತ್ರಿಕ ಎವಿಡೆನ್ಸ್ ಕಲೆ ಹಾಕಿ ಜೀವ ತೆಗೆದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ. ಇನ್ನು ಮೃತ ರಾಘವೇಂದ್ರ, ಆರೋಪಿ ಅಶ್ವಿನಿ, ಗುರುರಾಜ ಮತ್ತು ಲಕ್ಷ್ಮೀಕಾಂತ ಎಲ್ಲರೂ ಒಬ್ಬರಿಗೊಬ್ಬರು ಪರಿಚಿಯಸ್ಥರೇ ಹಾಗೂ ಸ್ನೇಹಿತರು ಆಗಿದ್ದರು.

ಕಂಬಿ ಹಿಂದೆ ಆರೋಪಿಗಳು
ಹೆಂಡತಿ ಇದ್ದರೂ ಕೂಡ ರಾಘವೇಂದ್ರ ಅಶ್ವಿನಿ ಜೊತೆ ಸಂಬಂಧ ಬೆಳೆಸಿದ್ದ. ಯಾವಾಗ ಅಶ್ವಿನಿ, ಗುರುರಾಜ ಜೊತೆ ಸಂಬಂಧ ಬೆಳೆಸಿ ಆತ್ಮಿಯವಾಗ್ತಾಳೆ ಆಗ ರಾಘವೇಂದ್ರ ಅಶ್ಚಿನಿ ದೂರ ಆಗ್ತಿದ್ದಾಳೆ ಅಂತ ಅಶ್ಲೀಲ ಮೆಸೇಜ್ ಮತ್ತು ಟಾರ್ಚರ್ ನೀಡ್ತಿದ್ದನಂತೆ. ರಾಘವೇಂದ್ರಗೆ ಪಾಠ ಕಲಿಸಬೇಕು ಅಂತ ಅಶ್ವಿನಿ, ಗುರುರಾಜ ಪ್ಲ್ಯಾನ್ ಮಾಡಿ ಲಕ್ಷ್ಮೀಕಾಂತ್ನನ್ನ ಜೊತೆಗೆ ಸೇರಿಸಿಕೊಂಡು, ರಾಘವೇಂದ್ರ ನಾಯಕ್ನನ್ನ ಕಿಡ್ನಾಪ್ ಮಾಡಿ ಮುಗಿಸಿದ್ದಾರೆ. ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಕ್ಲಿಷ್ಟಕರ ಪ್ರಕರಣ ಭೇದಿಸಿ ಆರೋಪಿಗಳಾದ ಗುರುರಾಜ, ಅಶ್ವಿನಿ ಮತ್ತು ಲಕ್ಷ್ಮೀಕಾಂತ್ ಈ ಮೂವರನ್ನ ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ನಡೆದಿರೋದು ಒಂದು ಹೆಣ್ಣಿನ ವಿಷಯದಲ್ಲಿ ಇಲ್ಲೂ ಕೂಡ ರಾಘವೇಂದ್ರ ಜೀವ ಹೋಗಿರುವುದು ಒಂದು ಹೆಣ್ಣಿನ ವಿಚಾರದಲ್ಲೇ. ಅಶ್ಲೀಲ ಮೆಸೇಜ್, ಟಾರ್ಚರ್ ವಿಚಾರಕ್ಕೆ ರೇಣುಕಾಸ್ವಾಮಿ ಜೀವ ತೆಗೆದಿದ್ದು ಶೆಡ್ನಲ್ಲಿ. ಆದ್ರೆ ರಾಘವೇಂದ್ರ ಮರ್ಡರ್ ಆಗಿದ್ದು ಸ್ಮಶಾನದಲ್ಲಿ.