ಬಂಟ್ವಾಳ: ಭೀಕರ ರಸ್ತೆ ಅಪಘಾತ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಳಗಿನ ತುಂಬೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಪಾವೂರು ನಿವಾಸಿ ನೌಫಲ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನೌಫಲ್ ಶನಿವಾರ ಬೆಳಿಗ್ಗೆ ಬಿ.ಸಿ.ರೋಡ್ ಕೈಕಂಬ ನಿವಾಸಿ ಉಸ್ಮಾನ್ ಎಂಬವರಿಗೆ ಸೇರಿದ ಸ್ವಿಫ್ಟ್ ಕಾರು ಖರೀದಿಸಿ ಅದನ್ನು ತೆಗೆದುಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿಯಾಗಿ, ಮೇಲಿಂದ ಹಾರಿ ವಿರುದ್ದ ರಸ್ತೆ ಮೇಲೆ ಬಿದ್ದಿದ್ದು, ಆ ಸಂದರ್ಭ ಲಾರಿ ಡಿಕ್ಕಿಯಾಗಿದೆ.
ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಡಿವೈಡರ್ ಮೇಲೆ ಹತ್ತಿ ಬಳಿಕ ಮಂಗಳೂರು ಕಡೆಯಿಂದ ಬರುವ ರಸ್ತೆ ಮೇಲೆ ಬಿದ್ದಿದೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
