
ಬ್ರಹ್ಮಾವರ: ಕುಂಜಾಲಿನ ಜಂಕ್ಷನ್ ನಲ್ಲಿ ಪತ್ತೆಯಾದ ದನದ ಕಳೇಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕೇಶವ, ರಾಮಣ್ಣ, ಪ್ರಸಾದ್, ನವೀನ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ಆರೋಪಿ ಕೇಶವ ತನ್ನ ಮನೆಯಲ್ಲಿದ್ದ ದನವನ್ನು ರಾಮಣ್ಣನವರಿಗೆ ಮಾಂಸ ಮಾಡಲು ನೀಡಿದ್ದು ಅದರಂತೆ ಆರೋಪಿಗಳು ಮಾಂಸ ಮಾಡಿ ಅದರ ತ್ಯಾಜ್ಯವನ್ನು ಎಸೆಯಲು ಸ್ಕೂಟರ್ ನಲ್ಲಿ ರಾತ್ರಿ ತೆರಳುತ್ತಿದ್ದಾಗ ರಸ್ತೆಗೆ ಬಿದ್ದಿದೆ ಎಂದು ವಿವರಿಸಿದ್ದಾರೆ. ಈಗಾಗಲೇ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಒರ್ವ ಆರೋಪಿ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ.