
ಎಲಾನ್ ಮಸ್ಕ್ ( Elon Musk r) ಅವರ ಕಂಪನಿ ಟೆಸ್ಲಾ (Tesla) ಆಟೋಮೊಬೈಲ್ ಉದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಯಾವುದೇ ಚಾಲಕ ಅಥವಾ ರಿಮೋಟ್ ಆಪರೇಟರ್ ಸಹಾಯವಿಲ್ಲದೆ, ಟೆಸ್ಲಾ ಅಭಿವೃದ್ಧಿಪಡಿಸಿದ ಕಾರು ನೇರವಾಗಿ ತನ್ನ ಗ್ರಾಹಕನ ಮನೆಗೆ ಹೋಗಿದೆ. ಕಾರ್ಖಾನೆಯಿಂದ ತನ್ನನ್ನು ಖರೀದಿಸಿದ ವ್ಯಕ್ತಿಯ ಮನೆಗೆ ಹೋಗಿದೆ.
ಟಾಸ್ಲಾದ ಹೊಸ ಕಾರಿನ ಹೆಸರು ಸೆಲ್ಫ್ ಡ್ರೈವಿಂಗ್ ಟೆಸ್ಲಾ ಮಾಡೆಲ್ ವೈ (Model Y). ಮಾರಾಟವಾದ ಬಳಿಕ ಟೆಸ್ಲಾ ಕಂಪನಿಯು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡು ವಿಡಿಯೋ ಶೇರ್ ಮಾಡಿದೆ. ವಿಡಿಯೋದಲ್ಲಿ ಕಾಣುವಂತೆ.. ಕಾರು ಯಾರ ಸಹಾಯವಿಲ್ಲದೇ ಡ್ರೈವಿಂಗ್ನಲ್ಲಿ ಸ್ವಾಯತ್ತತೆಯನ್ನು ಸಾಧಿಸಿದೆ.
ಟ್ರಾಫಿಕ್ ಸಿಗ್ನಲ್ ಸಿಕ್ಕಾಗ ನಿಂತಿದೆ. ರಸ್ತೆ ಪಾದಚಾರಿಗಳು ಅಡ್ಡಬಂದಾಗ ನಿಂತಿದೆ. ಬೇರೆ ವಾಹನಗಳು ಎದುರು ಬಂದಾಗ ಸೈಡ್ ಕೊಟ್ಟು ಯಾವುದೇ ತಪ್ಪುಗಳನ್ನು ಮಾಡದೇ, ಸಾರಿಗೆಗೆ ಸಂಬಂಧಿಸಿದ ಯಾವುದೇ ನಿಯಮಗಳ ಉಲ್ಲಂಘಿಸಿದೇ ರಸ್ತೆಯಲ್ಲಿ ಸರಾಗವಾಗಿ ಪ್ರಯಾಣಿಸಿದೆ.
ಕಂಪನಿ ನೀಡಿದ ಮಾಹಿತಿ ಪ್ರಕಾರ.. ಅಮೆರಿಕದ ಟೆಕ್ಸಾಸ್ ನಗರದಲ್ಲಿ ಈ ಕಾರನ್ನು ಪರಿಚಯ ಮಾಡಲಾಗಿದೆ. ಕಾರು ಹೆದ್ದಾರಿ, ನಗರದ ರಸ್ತೆಗಳು ಮತ್ತು ಪಾರ್ಕಿಂಗ್ ಪ್ರದೇಶವನ್ನು ಗಂಟೆಗೆ 116 ಕಿ.ಮೀ ಗರಿಷ್ಠ ವೇಗದಲ್ಲಿ ಸಾಗಿದೆ. ಅದರ ಜರ್ನಿಯು ಸಂಪೂರ್ಣ ಸುರಕ್ಷಿತವಾಗಿದೆ. ಬರೋಬ್ಬರಿ 30 ನಿಮಿಷಗಳ ಕಾಲ ಪ್ರಯಾಣ ಮಾಡಿ ಗ್ರಾಹಕನ ಮನೆ ತಲುಪಿದೆ ಎಂದು ಹೇಳಿಕೊಂಡಿದೆ.
ಬೆಲೆ ಎಷ್ಟು?
2019ರಲ್ಲಿ ಮೊದಲ ಬಾರಿಗೆ ಟೆಸ್ಲಾ ತನ್ನ ವೈ ಮಾಡೆಲ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಅದು ಸಂಪೂರ್ಣ ಅಪ್ಡೇಟ್ ವರ್ಷನ್ನೊಂದಿಗೆ ರಸ್ತೆಗೆ ಇಳಿಯುತ್ತಿದೆ. ಇದರ ಆರಂಭಿಕ ಬೆಲೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 34 ಲಕ್ಷ ರೂಪಾಯಿ. ಇದು ಮೂರು ವರ್ಷನ್ಗಳಲ್ಲಿ ಲಭ್ಯವಿದೆ. ಇದರ ಉನ್ನತ ದರ್ಜೆಯ ಕಾರಿನ ಬೆಲೆ 51 ಲಕ್ಷ ರೂಪಾಯಿ ಆಗಿದೆ.
ಕೆಲವು ದಿನಗಳ ಹಿಂದಷ್ಟೇ ಟೆಸ್ಲಾ ಅಮೆರಿಕ ಆಸ್ಟಿನ್ ನಗರದಲ್ಲಿ ರೊಬೊಟಿಕ್ ಟ್ಯಾಕ್ಸಿ ಸೇವೆಯನ್ನು ಪರಿಚಯ ಮಾಡಿದೆ. ಸುರಕ್ಷತಾ ಕಾರಣಗಳಿಗಾಗಿ ಪರಿಣಿತ ವ್ಯಕ್ತಿಯೊಬ್ಬರು ಕಾರಿನಲ್ಲಿ ಕುಳಿತಿದ್ದರು. ಇದರಲ್ಲಿ ಒಂದು ಸವಾರಿಯ ವೆಚ್ಚ 364 ರೂಪಾಯಿ. ಈ ಸೇವೆಯು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಸೀಮಿತ ಪ್ರದೇಶದಲ್ಲಿ ಲಭ್ಯವಿದೆ.