ಮಗನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು ಎಂದ ಶಾಸಕ
ವಿಜಯಪುರ: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ (Vijayendra) ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ
ಯಡಿಯೂರಪ್ಪ (Yadiyurappa) ತನ್ನ ಮಗನ ಭವಿಷ್ಯಕ್ಕಾಗಿ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ. ಮಗನನ್ನ ಅಧ್ಯಕ್ಷ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೇಲೆ ಹಲವು ಕೇಸ್ ಇವೆ. ಇ.ಡಿ ವಿಚಾರಣೆಗೂ ಹಾಜರಾಗಿದ್ದಾರೆ. ಇಂದಿಲ್ಲ ನಾಳೆ ಜೈಲಿಗೆ ಹೋಗ್ತಾರೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸಲೀಂ, ಮುಶ್ರಫ್‌ರಂತಹವರನ್ನ ತಂದ್ರೆ ನಮ್ಮ ಮೇಲೆ ಕೇಸ್ ಆಗ್ತಾವೆ. ಮೊನ್ನೆ ವಿಜಯಪುರದಲ್ಲಿ ನನ್ನ ಮೇಲೆ ಕೇಸ್ ಹಾಕಿಸಿದ್ರು. ಸಲೀಂ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಯತ್ನಾಳ್ ಮೇಲೆ ಎಷ್ಟು ಕೇಸ್ ಆಗಿವೆ ಎಂದು ಮಾಹಿತಿ ಪಡೆದಿದ್ದಾರೆ. ರಾಜ್ಯದಲ್ಲಿ ಸೂಲಿಬೆಲೆ, ಪ್ರತಾಪ್ ಸಿಂಹ, ಮುತಾಲಿಕ್ ಟಾರ್ಗೆಟ್ ಆಗಿದ್ದಾರೆ ಎಂದು ದೂರಿದರು.
ಮತ್ತೆ ಬಿಜೆಪಿ ಭಿನ್ನಮತೀಯರ ಸಭೆ ಆಗಲಿದೆ. ನಮ್ಮ ಟೀಂ ದೊಡ್ಡದಿದೆ. ತಟಸ್ಥ ಟೀಂ ಸಹ ವಿಜಯೇಂದ್ರ ವಿರುದ್ಧ ಇದೆ. ವಾರದಲ್ಲಿ ಬೆಳಗಾವಿಯಲ್ಲಿ ಸೇರ್ತಿದ್ದೇವೆ. ಅತೃಪ್ತ ಬಣದಿಂದ ಮತ್ತೊಂದು ಸಭೆ ಎಂದು ತಿಳಿಸಿದರು.
ದತ್ತಾತ್ರೇಯ ಹೊಸಬಾಳೆ ಹೇಳಿದ್ದು ಸತ್ಯ. ನಾವು ಅವರ ಬೆಂಬಲಕ್ಕೆ ಇದ್ದೇವೆ. ಡಾ. ಅಂಬೇಡ್ಕರ್ ಬರೆದದ್ದನ್ನ ನೂರಾರು ಸಲ ಕಾಂಗ್ರೆಸ್ ತಿದ್ದಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನಿಸಿದೆ. ಹೆಚ್ಚು ಅಪಮಾನ ಮಾಡಿದ್ದೆ ಕಾಂಗ್ರೆಸ್. ಮೂಲ ಸಂವಿಧಾನದಲ್ಲಿ ಅಂಬೇಡ್ಕರ್ ಬರೆದ ಮೂಲ ಬರಹಗಳೇ ಇರಬೇಕು ಎಂದು RSSನ ದತ್ತಾತ್ರೇಯ ಹೊಸಬಾಳೆ ಹೇಳಿಕೆಯನ್ನ ಸಮರ್ಥಿಸಿಕೊಂಡರು.