ತ್ರಿವಳಿ ಕೊಲೆಗೆ ಕಲಬುರಗಿ ಬೆಚ್ಚಿಬಿದ್ದಿದೆ. ಮಂಗಳವಾರ ತಡರಾತ್ರಿ ಕಲಬುರಗಿ ಹೊರವಲಯದ ಪಟ್ನಾ ಗ್ರಾಮದ ಬಳಿ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು, ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸದ್ಯ, ಕಲಬುರಗಿ ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಲಬುರಗಿ, ಜೂನ್ 25: ಕಲಬುರಗಿ ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಮೂವರನ್ನು ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಕೊಲೆಯಾದವರನ್ನು ಸಿದ್ಧಾರೂಢ (32), ಜಗದೀಶ್ (25), ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಹತ್ಯೆಯಾದವರು ಸಂಬಂಧಿಕರಾಗಿದ್ದಾರೆ. ತಡರಾತ್ರಿ 1.30 ರ ಸುಮಾರಿಗೆ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷದ ಕಾರಣ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)