ಶ್ರಿ ರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡೀಸಿದ್ದೇಗೌಡ ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ, . ಈ ಹಿಂದೆ ಭಡ್ಕಳದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಗೋಸಾಗಾಟ ಮಾಡುವ ಮುಸ್ಲಿಮರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹೊಡೆಯಬೇಕು ಎಂದು ಬಹಿರಂಗ ಹೇಳಿಕೆ ನೀಡಿ ತನ್ನೊಳಗಿನ ಮುಸ್ಲಿಂ ದ್ವೇಷವನ್ನು ಹೊರಹಾಕಿದ್ದರು, ಮುಸ್ಲಿಮರ ಮತ ಪಡೆದು ಆಯ್ಕೆಯಾದ ರಾಜ್ಯದ ಕಾಂಗ್ರೆಸ್ ನಾಯಕರ. ಮುಸ್ಲಿಂ ದ್ವೇಷದ ಮನಸ್ತಿತಿಯು ಸಂಘ ಪರಿವಾರದ ನಾಯಕರ ಮುಸ್ಲಿಂ ದ್ವೇಷವನ್ನು ಓವರ್ ಟೇಕ್ ಮಾಡಲು ಪೈಪೋಟಿ ನಡೆಸುವಂತಿದೆ
ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್‌ನೊಳಗಿನ ಆರೆಸ್ಸೆಸ್ ಮನಸ್ಥಿತಿಯವರನ್ನು ಹೊರಗಟ್ಟಬೇಕು ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದೊಳಗೆ ಆರೆಸ್ಸೆಸ್‌ನವರು ಇದ್ದಾರೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು.
ಇದೀಗ ಮಂಕಾಳು ವೈದ್ಯ, ರಮೇಶ್ ಬಂಡಿಸಿದ್ದೇಗೌಡ ರಂತಹವರು ತಮ್ಮಲ್ಲಿನ ಆರೆಸ್ಸೆಸ್ ಸಿದ್ದಾಂತವನ್ನು ಸಾಬೀತುಪಡಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ತಲೆತಲಾಂತರದಿಂದ ಉಳುಮೆ ಮಾಡಿ ಕೃಷಿ ಮಾಡುತ್ತಿರುವ ರೈತರು ತಮಗೆ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಕೇಳಿ ಬಗರ್‌ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ವಿಚಾರವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಗರಂ ಆದ ಶ್ರೀರಂಗಪಟ್ಟಣ ಶಾಸಕರಾದ ಬಂಡಿಸಿದ್ದೇಗೌಡ ಹೇಳಿಕೆಯು ಒಂದು ಸಮುದಾಯವನ್ನು ಗುರಿಯಾಗಿಸಿ ಥೇಟ್ ಬಜರಂಗದಳದ ಗೂಂಡಾಗಳನ್ನು ಅನುಕರಿಸುವಂತಿದೆ.
ಕಳೆದ ಚುನಾವಣೆಯಲ್ಲಿ 90%ಕ್ಕಿಂತಲೂ ಹೆಚ್ಚಿನ ಮತ ನೀಡಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೇರಲು ಕಾರಣವಾದ ಮುಸ್ಲಿಂ ಸಮುದಾಯದ ಮೇಲೆ ಕಾಂಗ್ರೆಸ್ ನಾಯಕರು ತೋರುತ್ತಿರುವ ತಾರತಮ್ಯ ಮತ್ತು ದ್ವೇಷದ ನಿಲುವು ಬಟಾಬಯಲಾಗುತ್ತಿದೆ. ಆದರೂ ಇದರ ಬಗ್ಗೆ ಜಾತ್ಯತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯದ ಪ್ರಶ್ನೆಯಾಗಿದೆ. ಕೆಲವು ಸಮಯದ ಹಿಂದೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಸಂದರ್ಭದಲ್ಲಿ ಇಡೀ ಸರಕಾರಕ್ಕೆ ಸರಕಾರವೇ ಬ್ರಾಹ್ಮಣ ಸಮುದಾಯದ ಪರವಾಗಿ ನಿಂತು ಸಂತ್ರಸ್ತನಿಗೆ ನ್ಯಾಯ ಕೊಡಲು ಸಾದ್ಯವಾದರೆ ಕಳೆದ ಚುನಾವಣೆಯಲ್ಲಿ ಬೇಷರತ್ತಾಗಿ ಕಾಂಗ್ರೆಸ್ ಸರಕಾರಕ್ಕೆ ಮತ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಪ್ರಮುಖ ಪಾತ್ರ ವಹಿಸಿದ ಮುಸ್ಲಿಂ ಸಮುದಾಯಕ್ಕೆ ತನ್ನ ಶಾಸಕರೇ ಅವಮಾನ ಮಾಡುವಾಗ ಸರಕಾರದ ಮುಖ್ಯಮಂತ್ರಿ, ಸಚಿವರು ಬಾಯಿಗೆ ಬೀಗ ಜಡಿದು ಕೂತಿದ್ದಾರೆ ಇಂತಹ ಸಂಘಪರಿವಾರದ ಸಿದ್ದಾಂತದಲ್ಲಿರುವ ಕಾಂಗ್ರೆಸ್ ನಾಯಕರಿಂದ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
✍🏽 ಅನ್ವರ್ ಸಾದತ್ ಎಸ್
ಜಿಲ್ಲಾಧ್ಯಕ್ಷರು
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲೆ