
ಇಸ್ರೇಲ್ ಮೇಲೆಇರಾನ್ ಕ್ಷಿಪಣಿ ದಾಳಿ ಮುಂದುವರಿದಿದೆ.ಇಸ್ರೇಲ್ ನ ಹಲವು ಭಾಗಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಂಡಿದೆ. ಜೊತೆಗೆ ಮಧ್ಯಪ್ರಾಚ್ಯಕ್ಕೆ ಅಮೆರಿಕ ಹೆಚ್ಚಿನ ಯುದ್ಧ ವಿಮಾನಗಳನ್ನು ರವಾನೆ ಮಾಡಿದೆ. ಅಲ್ಲದೇ ಇರಾನ್ನ ಸುಪ್ರೀಂ ಲೀಡರ್ಗೆ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
5ನೇ ದಿನಕ್ಕೆ ಕಾಲಿಟ್ಟ ಇರಾನ್-ಇಸ್ರೇಲ್ನ ಸಂಘರ್ಷ
ಇಸ್ರೇಲ್ ಮತ್ತು ಇರಾನ್ ಅಣ್ವಸ್ತ್ರದ ವಿಷಯಕ್ಕೆ ನಾನಾ, ನೀನಾ ಎಂದು ಸಂಘರ್ಷಕ್ಕಿಳಿದಿವೆ. ಎರಡೂ ದೇಶಗಳು ಜಿದ್ದಿಗೆ ಬಿದ್ದವರಂತೆ ಮಿಸೈಲ್ಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಸದ್ಯ ತಾರಕಕ್ಕೇರಿರುವ ಉಭಯ ದೇಶಗಳ ಕದನ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ. 6ನೇ ದಿನಕ್ಕೆ ಕದನ ಕಾಲಿಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ವಾತಾವರಣ ಸೃಷ್ಟಿಯಾಗಿದೆ..

ಇರಾನ್ನ ನ್ಯೂಕ್ಲಿಯರ್ ತಾಣಗಳನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ಮಿಸೈಲ್ ದಾಳಿ ನಡೆಸುತ್ತಿದೆ. ಇಸ್ರೇಲ್ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ ಮಾಡಿದೆ ಎಂದು ಇರಾನ್ ಆರೋಪ ಮಾಡಿದೆ. ಆದ್ರೆ ಇದನ್ನು ಇಸ್ರೇಲ್ ನಿರಾಕರಿಸಿದೆ. ಟೆಹ್ರಾನ್ನ ಅತ್ಯಂತ ಭದ್ರವಾದ ಸ್ಥಳದಲ್ಲಿರುವ ಪರಮಾಣು ತಾಣವನ್ನು ನಾಶ ಮಾಡಲು ಇಸ್ರೇಲ್ ಬಂಕರ್ ಬಸ್ಟರ್ ಪ್ರಯೋಗಕ್ಕೆ ಮುಂದಾಗಿದೆ.
ಇರಾನ್ನಿಂದಲೂ ಇಸ್ರೇಲ್ ಮೇಲೆ ಪ್ರತೀಕಾರದ ಕ್ಷಿಪಣಿ ದಾಳಿ
ಇರಾನ್ ಕೂಡ ಸುಮ್ಮನೆ ಕುಳಿತಿಲ್ಲ. ಇಸ್ರೇಲ್ ಮೇಲೆ ಮಿಸೈಲ್ಗಳನ್ನು ತೂರಿ ಬಿಡ್ತಿದೆ. ಇರಾನ್ ಕ್ಷಿಪಣಿಗಳನ್ನು ಹಾರಿಸುತ್ತಿದ್ದಂತೆ ಇಸ್ರೇಲ್ನಲ್ಲಿ ಸೈರನ್ ಮೊಳಗಿದ್ದು ಜನ ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ಇನ್ನು ಪರಮಾಣು ಕೇಂದ್ರವಿರುವ ಇಸ್ರೇಲ್ ಪಟ್ಟಣದಲ್ಲೂ ಸೈರಲ್ ಮೊಳಗಿದೆ. ಆದ್ರೆ ಇಸ್ರೇಲ್ ಅಧ್ಯಕ್ಷ ನಮ್ಮ ಪರಮಾಣು ಕೇಂದ್ರಕ್ಕೆ ಏನೂ ಆಗಿಲ್ಲ ಎಂದಿದ್ದಾರೆ.
ಮಧ್ಯಪ್ರಾಚ್ಯದತ್ತ ಹೆಚ್ಚಿನ ಯುದ್ಧ ವಿಮಾನ ಕಳಿಸಿದ ಟ್ರಂಪ್
ಇಸ್ರೇಲ್-ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇದರಿಂದ ಮಧ್ಯಪ್ರಚ್ಯದಲ್ಲಿ 3ನೇ ಮಹಾಯುದ್ಧ ಆತಂಕ ಮನೆ ಮಾಡಿದೆ. ಜಿ7 ದೇಶಗಳ ಶೃಂಗಸಭೆಯಿಂದ ಅರ್ಧದಲ್ಲೇ ಹೊರಬಂದ ಟ್ರಂಪ್.. ಇರಾನ್-ಇಸ್ರೇಲ್ ಕದನಕ್ಕೆ ಸಂಪೂರ್ಣ ಮುಕ್ತಿ ಆಡುವ ಮಾತುಗಳನ್ನಾಡಿದ್ದಾರೆ. ಮಧ್ಯಪ್ರಾಚ್ಯಕ್ಕೆ ತನ್ನ ಹೆಚ್ಚಿನ ಯುದ್ಧ ವಿಮಾನಗಳ ರವಾನೆ ಮಾಡಿರೋದು, 3ನೇ ಮಹಾಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ ಖಮೇನಿಗೆ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇರಾನ್ನ ಸುಪ್ರೀಂ ನಾಯಕ ಎಲ್ಲಿ ಅಡಗಿದ್ದಾನೆ ಅನ್ನೋದು ಗೊತ್ತಿದೆ. ಆತ ಬೇಷರತ್ ಶರಣಾಗಬೇಕೆಂದು ಟ್ರಂಪ್ ಬೆದರಿಕೆ ನೀಡಿದ್ದಾರೆ.
ಒಟ್ಟಾರೆ.. ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷಕ್ಕೆ ಅಮೆರಿಕ ಅಧಿಕೃತ ಎಂಟ್ರಿಕೊಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ವಾತಾವರಣವನ್ನೇ ಬದಲಿಸಿದೆ. ಇರಾನ್-ಇಸ್ರೇಲ್ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯದಲ್ಲಿ ಏರ್ಪೋರ್ಟ್ಗಳನ್ನು ಕ್ಲೋಸ್ ಮಾಡಲಾಗಿದೆ.