ಎಳನೀರು ಅಮೃತಕ್ಕೆ ಸಮಾನ, ಇದರಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ದುಡ್ಡು ಎಷ್ಟೇ ಇರಲಿ ಎಲ್ಲರೂ ಖರೀದಿಸಿ ಕುಡಿಯುತ್ತಾರೆ. ಆದರೆ ಇದೀಗ ಎಳನೀರಿನ ಬೆಲೆ ಗಗನಕ್ಕೆ ಏರಿದ್ದು ಐವತ್ತು ರೂಪಾಯಿಗೆ ಸಿಗುತ್ತಿದ್ದ ಎಳನೀರಿಗೆ ಈಗ ಎಪ್ಪತ್ತು ರೂಪಾಯಿ ದಾಟಿದೆ. ಆದರೆ ಇದೀಗ ಮಂಗಳೂರಿಗೆ ಗುಲಾಬಿ ಬಣ್ಣದ ಎಳನೀರು ಬಂದಿದ್ದು,ನೋಡಿದರೇನೆ ಒಮ್ಮೆ ಇದರ ರುಚಿ ಸವಿಯುವ ಎಂದೆನಿಸುತ್ತದೆ. ಈ ಕುರಿತಾದ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇದು ನಿಜನಾ ಎಂದು ಕಾಮೆಂತ್ ಮಾಡಿ ಕೇಳಿದ್ದಾರೆ.
ಮಂಗಳೂರು, ಜೂನ್ 09: ಬಹುತೇಕರ ನೆಚ್ಚಿನ ಪಾನೀಯಗಳಲ್ಲಿ ಎಳನೀರು (Coconut water) ಕೂಡ ಒಂದು. ಯಾವುದೇ ಋತುಮಾನವಿರಲಿ, ಎಳನೀರನ್ನು ತಪ್ಪದೇ ಸೇವಿಸುತ್ತಾರೆ. ಆದರೆ ಈ ತೆಂಗಿನಕಾಯಿ ಇಳುವರಿಯೂ ಕುಸಿದಿದ್ದು ಇದರ ಬೆಲೆ ಗಗನಕ್ಕೆ ಏರಲು ಕಾರಣವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಖರೀದಿಸುವಂತಾಗಿದೆ. ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಂಗಳೂರಿ (mangalore) ಗೆ ನೋಡಲು ಆಕರ್ಷಕವಾಗಿರುವ ಗುಲಾಬಿ ಬಣ್ಣದ ಇಂಡೋನೇಷ್ಯಾದ ಎಳನೀರು (Indonesia coconut water) ಬಂದಿದೆ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದು ನಿಜವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Manglore information ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಈ ಎಳನೀರಿನ ಫೋಟೋ ಶೇರ್ ಮಾಡಲಾಗಿದ್ದು, ಸೀಯಾಳದ ರೇಟ್ ಜಾಸ್ತಿಯಾದಂತೆ ಮಂಗಳೂರಿಗೆ ಬಂತು ಕೆಂಬಣ್ಣದ ಇಂಡೋನೇಷ್ಯಾದ ಬೊಂಡ….! ಸೀಯಾಳಕ್ಕೆ ಬಣ್ಣ ಹಾಕಿದ್ದಲ್ಲ ಇದು. ಬೊಂಡ ಇರುವುದೇ ಹೀಗೆ. ಕೆಂಬಣ್ಣವೋ, ಕೆಂದಾಳೆಯೋ ಇದು ಇಂಡೋನೇಷಿಯಾದ ಸೀಯಾಳ. ಈಗ ಭಾರತಕ್ಕೆ ಅದೂ ಮಂಗಳೂರಿಗೆ ಬಂದಿದೆ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಈ ಸಿಯಾಳ ಕಣ್ಣಿಗೆ ಬಿದ್ದಿದೆ ಈ ಸೀಯಾಳ, ಫೋಟೋ ತೆಗೆಯಲು ಹೊರಟಾಗ ನಾಚಿ ಕೆಂಪಾಯಿತೋ ಹೇಗೆ ಎಂತ ಅವರ ಹತ್ತಿರನೆ ಕೇಳಬೇಕು. ಆದರೆ ಮೇಲ್ನೋಟಕ್ಕೆ ಇದು ಡ್ರೈ ಪೆಯಿಂಟ್ ರೂಪದಲ್ಲಿದೆ ಎಂದು ಬರೆಯಲಾಗಿದೆ. ಪೋಸ್ಟ್‌ನಲ್ಲಿ ಇಂಡೋನೇಷ್ಯಾದ ಕೆಂಬಣ್ಣದ ಆಕರ್ಷಕವಾದ ಎಳನೀರನ್ನು ನೀವು ಕಾಣಬಹುದು.

ಈ ಪೋಸ್ಟ್‌ವೊಂದು ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಮೊನ್ನೆ ಹೀಗೆ ಬಿಳಿ ಬಣ್ಣದ ಪೈಂಟ್ ಕೊಟ್ಟಿದ್ದು ಇತ್ತು, ಇವತ್ತು ಕೆಂಪು ಇನ್ನು ನೀಲಿ ಬರ್ಬಹುದು ಎಂದಿದ್ದಾರೆ. ಮತ್ತೊಬ್ಬರು, ಮಂಗಳೂರು ಅವರಿಗೂ ಇಂತಹ ಗಾಳಿ ತಾಕೀತು ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ಇದರ ಒಳಗೆ ಇರುವ ನೀರು ಹಾಗೂ ಕೊಬ್ಬರಿ ಕೂಡ ಗುಲಾಬಿ ಬಣ್ಣದ್ದಾ ಎಂದು ಕೇಳಿದ್ದಾರೆ.