ಮಂಗಳೂರು, ಜೂನ್ 9: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದ ಪಕ್ಷದ ನಿಯೋಗವೊಂದು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲಿನ್ ಎಂಪಿ (Mullai Muhilin MP) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾಸೌಧದಲ್ಲಿ ಬಿಜೆಪಿ ಧುರೀಣರು ಮತ್ತು ಅಧಿಕಾರಿಗಳ ನಡುವೆ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳ ಮೇಲೆ ಚರ್ಚೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿರುವ ಅಪರಾಧಿಕ ವಿದ್ಯಮಾನಗಳು, ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಆಗಿರುವ ಎಫ್ಐಅರ್ ಮತ್ತು ಗಡೀಪಾರಿನ ಆದೇಶ ಮೊದಲಾದ ಸಂಗತಿಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.