ಮಂಗಳೂರು, ಜೂ.4: ಗಡಿಪಾರು ಭೀತಿಯಲ್ಲಿರುವ ಬಂಟ್ವಾಳ ನಿವಾಸಿ, ಅಶ್ರಫ್ ಕಲಾಯಿ ಹತ್ಯೆಯ A1 ಆರೋಪಿ ಭರತ್ ಕುಮ್ಡೇಲ್ ಮನೆಗೆ ಪೊಲೀಸರು ಬುಧವಾರ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಮೇ 27ರಂದು ಕೊಳತ್ತಮಜಲಿನಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಖಲಂದರ್ ಶಾಫಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ (ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ. ಕ್ರ 54/2025 ಕಲಂ: 191(1), 191(2), 191(3), 118(1)(2), 109, 103 ಜೊತೆಗೆ 190 ಬಿಎನ್‌ಎಸ್ 2023) ತನಿಖೆಗೆ ಸಂಬಂಧಿಸಿ ತನಿಖಾ ತಂಡವು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಭರತ್ ಕುಮ್ಡೇಲ್ ಮನೆಯನ್ನು ಶೋಧ ನಡೆಸಿದೆ ಎಂದು ತಿಳಿದು ಬಂದಿದೆ