ಮಂಗಳೂರು, ಜೂ. 1: ಇತ್ತೀಚೆಗೆ ಕೊಳತ್ತಮಜಲ್ ನಲ್ಲಿ ವ್ಯವಸ್ಥಿತವಾಗಿ ಸಂಘ ಪರಿವಾರದ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹಿಮಾನ್ ಹಾಗೂ ಕೊಲೆಯತ್ನಕ್ಕೊಳಗಾದ ಕಲಂದರ್ ಶಾಫಿ, ಮತ್ತು ಕುಡುಪು ಎಂಬಲ್ಲಿ ಗುಂಪು ಹಿಂಸೆಗಳಿಂದ ಹತ್ಯೆಯಾದ ಅಶ್ರಫ್ ಎಂಬವರ ಹತ್ಯೆಯನ್ನು ಖಂಡಿಸಿ ಹಾಗೂ ಜಿಲ್ಲೆಯ ಸೌಹಾರ್ದಕ್ಕೆ ಮಾರಕವಾದ ಘಟನೆಗಳಿಗೆ ಕಾರಣವಾದ ಗೃಹ ಇಲಾಖೆಯ ವೈಫಲ್ಯದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2 ಜೂನ್ 2025 ಸೋಮವಾರ ಸಮಯ ಮಧ್ಯಾಹ್ನ 3 ಗಂಟೆಗೆ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.