ಬಂಟ್ವಾಳ : ದುಷ್ಕರ್ಮಿಗಳಿಂದ ಹತ್ಯೆ ಗೀಡಾದ ಅಬ್ದುಲ್ ರಹ್ಮಾನ್ ಅವರ ಮನೆಗೆ ಮಿತ್ತಬೈಲ್ ಜಮಾಅತ್ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಅದ್ದೆಡಿ, ಖತೀಬ ರಾದ ಎಂ. ಕೆ ಅಬ್ಬಾಸ್ ಫೈಝಿ ಪುತ್ತಿಗೆ, ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ಪೈವಳಿಕೆ, ನೇತ್ರತ್ವದ ನಿಯೋಗ ಮೃತರಾದ ರಹೀಮ್ಅವರ ಮಗ್ಫಿರತ್ ಗಾಗಿ ದುವಾ ಮಾಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.ಈ ಸಂದರ್ಭದಲ್ಲಿ ಖ್ಯಾತ ವಿದ್ವಾಂಸರಾದ ಅಶ್ ಫಾಕ್ ಫೈಝಿ ನಂದಾವರ ನಿಯೋಗದೊಂದಿಗೆ ಉಪಸ್ಥಿತರಿದ್ದರು
ನಿಮ್ಮ ಸಂಕಷ್ಟದ ಸಮಯದಲ್ಲಿ ಮಿತ್ತಬೈಲ್ ಜಮಾತ್ ನಿಮ್ಮೊಂದಿಗೆ ಸದಾ ಇದೆ ಎಂದು ಮಿತ್ತ ಬೈಲ್ ಕೇಂದ್ರ ಜಮಾತ್ ನಿಯೋಗ ತಿಳಿಸಿತು
ಮಿತ್ತಬೈಲ್ ಜಮಾಅತಿನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ, ಕೋಶಧಿಕಾರಿ ಅಬ್ದುಲ್ ರಹ್ಮಾನ್, ಉಪಾಧ್ಯಕ್ಷರಾದ ಸೈಯ್ಯದ್ ಫಳುಲ್ ತಂಗಳ್, ಕಾರ್ಯದರ್ಶಿ ಗಳಾದ ಅಶ್ರಫ್ ಶಾಂತಿಅಂಗಡಿ, ಇಕ್ಬಾಲ್ ನಂದರಬೆಟ್ಟು,ಕಮಿಟಿ ಸದಸ್ಯರುಗಳಾದ ಶಾಹುಲ್ ಹಮೀದ್ ಪರ್ಲಿಯ ಅಜೀಜ್ ತಾಳಿಪಡ್ಪು, ಇಬ್ರಾಹಿಂ ಕೊಡಂಗೆ,ಬಷೀರ್ ಮಜಲ್ ಹನೀಫ್ ಶಾಂತಿ ಅಂಗಡಿ, ಹಾಮದ್ ಬಾವ ನಂದರಬೆಟ್ಟು ಉಪಸ್ಥಿತರಿದ್ದರು