
ಮಂಗಳೂರು: ನಿರಂತರ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ದೊಡ್ಡ ಅವಾಂತರ ಸೃಷ್ಟಿಸಿದೆ. ನಿರಂತರ ಮಳೆಯಿಂದ ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆ ಮೇಲೆ ಗುಡ್ಡ ಕುಸಿದು 4 ಸಿಲುಕಿಕೊಂಡಿದ್ದಾರೆ.

ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಬಿದ್ದಿದೆ. ದುರ್ಘಟನೆಯಲ್ಲಿ ಕಾಂತಪ್ಪ ಪೂಜಾರಿ ಕುಟುಂಬಸ್ಥರು ಮನೆಯಡಿ ಸಿಲುಕಿಕೊಂಡಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಇದೇ ವಿಚಾರವಾಗಿ ಮಾದ್ಯಮ ದೊಂದಿಗೆ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಸದ್ಯ ನಾವು ರಕ್ಷಣಾಕಾರ್ಯದಲ್ಲಿ ಇದ್ದೇವೆ. ಸ್ಥಳದಲ್ಲಿ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. NDRF ಎಲ್ಲ ರೀತಿಯ ಮಿಷನ್ ತೆಗೆದುಕೊಂಡು ಬಂದಿದ್ದಾರೆ. ಆ ಮನೆ ಒಳಗಡೆ ಪ್ರೇಮಾ, ಅಶ್ವಿನಿ, ಆರ್ಯನ್, ಅನುಶ್ 4 ಜನ ಇದ್ದಾರೆ. ಸದ್ಯಕ್ಕೆ ನಮ್ಮ ಕಣ್ಣಿಗೆ ತಾಯಿ ಮಗು ಕಾಣಿಸುತ್ತಿದ್ದಾರೆ. ನಮ್ಮ ಟೀಮ್ ಅವರ ಜೊತೆಗೆ ಮಾತಾಡುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಪ್ರತಿಯೊಂದು ಮನೆಗಳಿಗೂ ನಾವು ಗುಡ್ಡ ಕುಸಿತದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೇವೆ. ಈ ಘಟನೆಯಲ್ಲಿ ಏನನ್ನೂ ಹೇಳೋದಕ್ಕೆ ಆಗೋದಿಲ್ಲ. ಇನ್ನೂ 1-2 ಗಂಟೆಗಳ ತನಕ ಈ ಕಾರ್ಯಚರಣೆ ನಡೆಯಲಿದೆ.