ಕರ್ನಾಟಕ ಸಿಇಟಿ ಫಲಿತಾಂಶ 2025: ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಅದನ್ನು ತಿಳಿಯುವ ಸಮಯ ಬಂದಿದೆ. ಕಳೆದ ಕೆಲವು ದಿನಗಳಿಂದ ಸಿಇಟಿ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಕಾತರದಿಂದ ಇದ್ದರು. ಇದೀಗ ಉನ್ನತ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟಿಸಿದ್ದಾರೆ. ಆನ್ಲೈನ್ನಲ್ಲಿಯೂ ಫಲಿತಾಂಶ ತಿಳಿಯಬಹುದಾಗಿದೆ.
ಬೆಂಗಳೂರು, ಮೇ 24: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ ಫಲಿತಾಂಶ ಕೊನೆಗೂ ಪ್ರಕಟವಾಗಿದೆ. ಫಲಿತಾಂಶ ಪ್ರಕಟವಾಗಬಹುದು ಎಂದು ಈ ವಾರ ಆರಂಭದಿಂದಲೂ ವಿದ್ಯಾರ್ಥಿಗಳು ಕಾಯುತ್ತಿದ್ದರು. ಇದೀಗ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ (MC Sudhakar) ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದರು. ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವ ಸುಧಾಕರ್ ಹೇಳಿದರು.
ಸಿಇಟಿ ಇಂಜಿನಿಯರಿಂಗ್ ರ್ಯಾಂಕ್ ಲಿಸ್ಟ್
1.ಭವೇಶ್ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್ 98.37 ಪರ್ಸೆಂಟ್
2.ಸಾತ್ವಿಕ್ ಬಿ ಬಿರಾದರ್ – ಚೈತನ್ಯ ಟೆಕ್ನೋ ಸ್ಕೂಲ್ ಉತ್ತರಹಳ್ಳಿ 99.33
3.ದಿನೇಶ್ ಗೋಮತಿ ಶಂಕರ್ – ಚೈತನ್ಯ ಟೆಕ್ನೋ ಸ್ಕೂಲ್ ಮಾರಾತ್ ಹಳ್ಳಿ
ವೆಟರ್ನರಿ ರ್ಯಾಂಕ್ ಲಿಸ್ಟ್
1. ಹರೀಶ್ ರಾಜ್ 98.33 ಪರ್ಸೆಂಟ್ ನಾರಾಯಣ E ಟೆಕ್ನೋ ಯಲಹಂಕ, ದೊಡ್ಡ ಬೆಟ್ಟ ಹಳ್ಳಿ
2. ಆತ್ರೇಯ ವೆಂಕಟಾಚಲ – 97.67 ಪರ್ಸೆಂಟ್. ನ್ಯಾಶನಲ್ ಪಬ್ಲಿಕ್ ಸ್ಕೂಲ್ HSR ಲೇ ಔಟ್ ಸೆಕ್ಟರ್ 4
3. ಸಫಲ್ ಎಸ್ ಶೆಟ್ಟಿ – 99.33 ಪರ್ಸೆಂಟ್ ಎಕ್ಸ್ಪ್ಪರ್ಟ್ ಪಿಯು ಕಾಲೇಜು ಮಂಗಳೂರು
ಅಗ್ರಿಕಲ್ಚರ್ ರ್ಯಾಂಕ್ ಲಿಸ್ಟ್
1. ಅಕ್ಷಯ್ ಎಂ ಹೆಗ್ಡೆ – 99.33 ಪರ್ಸೆಂಟ್ ಆಳ್ವಾಸ್ ಪಿಯು ಕಾಲೇಜು ಮೂಡು ಬಿದಿರೆ
2. ಸೈಶ್ ಶ್ರವಣ್ ಪಂಡಿತ್ – 99.67 ಪರ್ಸೆಂಟ್ ಎಕ್ಸಪರ್ಟ್ ಪಿಯು ಕಾಲೇಜು ಮಂಗಳೂರು
3. ಸುಚಿತ್ ಪ್ರಸಾದ್ 98.33 – expert ಪಿಯು ಕಾಲೇಜು ಮಂಗಳೂರು