ತಂದೆಯ ಹತ್ಯೆಗೆ ಚೈತ್ರಾ ಕುಂದಾಪುರ ಸುಪಾರಿ: ಇದೇನಿದು ಆರೋಪ
ಕುಂದಾಪುರ : ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ತಂದೆಯೇ ದೂರು ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಗೆ ತಂದೆ ಬಾಲಕೃಷ್ಣ ಅವರು ದೂರು ನೀಡಿದ್ದು, ಆಸ್ತಿಗಾಗಿ ಚೈತ್ರಾ ಕುಂದಾಪುರ ನನ್ನನ್ನು ಕೊಲೆ ಮಾಡಬಹುದು.
ಪುತ್ರಿ ಚೈತ್ರಾ ಕುಂದಾಪುರ, ಶ್ರೀಕಾಂತ್ ಮದುವೆಗೆ ನಾನು ಒಪ್ಪಿಲ್ಲ. ಮದುವೆಗೆ ಬಾರದಿದ್ದರೆ ಕೊಲೆ ಮಾಡುವುದಾಗಿ ಭೂಕತ ದೊರೆಗಳ ಮೂಲಕ ಕೊಲೆ ಮಾಡುವ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಿದ್ದಾರೆ.
ತಂದೆ ಬಾಲಕೃಷ್ಣ ನಾಯ್ಕ್ ಅವರು ನೇರವಾಗಿ ನನ್ನ ಜೀವ ತೆಗೆಯಲು ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯವನ್ನು ಮಾಡಬಹುದು ಎಂದು ಆರೋಪಿಸಿದ್ದಾರೆ.
ಮದುವೆಗೆ ನನ್ನ ಕರೆದಿರಲಿಲ್ಲ. ಹಾಗಿದ್ದರೂ ಮದುವೆಗೆ ಬರದೇ ಇದ್ದರೆ ಭೂಗತ ದೊರೆಗಳ ಮೂಲಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಈಗ ನಾನು ಸತ್ತು ಹೋಗಿದ್ದೇನೆ ಎಂದು ಊರೆಲ್ಲಾ ಹೇಳಿಕೊಂಡು ತಿರುಗಾಡುತ್ತಿದ್ದಾಳೆ ಎಂದು ದೂರು ನೀಡಿದ್ದಾರೆ. ಇದು ಯಾವ ಹಂತಕ್ಕೆ ಬಂದು ತಲುಪುತ್ತದೋ ನೋಡಬೇಕಿದೆ.