ಪ್ರಧಾನಿ ಮೋದಿಗೆ ಮೂರು ಪ್ರಶ್ನೆ ಕೇಳಿದ ರಾಹುಲ್ ಗಾಂಧಿ
ನವದೆಹಲಿ: ಇತ್ತೀಚೆಗಷ್ಟೇ ಆಪರೇಷನ್ ಸಿಂಧೂರ (Operation Sindoor) ವಿಚಾರದಲ್ಲಿ ಜೆಟ್ಗಳ ಮಾಹಿತಿ ಕೇಳಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಇದೀಗ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಜಸ್ಥಾನದ ಬಿಕಾನೇರ್ನಲ್ಲಿಂದು ನಡೆದ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ (Narendra Modi) ಅವರು, ಪಾಕಿಸ್ತಾನವು ಮೋದಿ ಭಾರತ ಮಾತೆಯ ಸೇವಕ ಅನ್ನೋದನ್ನ ಮರೆತಿತ್ತು ಅನ್ನಿಸುತ್ತೆ. ನಾನು ಶಾಂತವಾಗಿದ್ದರೂ ನನ್ನ ರಕ್ತ ನಾಳಗಳಲ್ಲಿ ʻಸಿಂಧೂರʼ ಹರಿಯುತ್ತಲೇ ಇರುತ್ತದೆ ಎಂದು ಹೇಳಿದ್ದರು. ಮೋದಿ ಭಾಷಣದ ತುಣುಕೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಗಾ ಮೂರು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
ಮೋದಿಜೀ, ಪೊಳ್ಳು ಭಾಷಣ ಮಾಡುವುದನ್ನು ನಿಲ್ಲಿಸಿ ಎನ್ನುತ್ತಾ…
ನನಗೆ ಹೇಳಿ:
1. ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ಹೇಳಿಕೆಯನ್ನು ನೀವು ಏಕೆ ನಂಬಿದ್ದೀರಿ?
2. ಟ್ರಂಪ್ಗೆ ತಲೆಬಾಗುವ ಮೂಲಕ ನೀವು ಭಾರತದ ಹಿತಾಸಕ್ತಿಗಳನ್ನು ಏಕೆ ತ್ಯಾಗ ಮಾಡಿದಿರಿ?
3. ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತದೆ? ಅಂತ ಪ್ರಶ್ನೆ ಮಾಡಿದ್ದಾರೆ.
ಕೊನೆಯಲ್ಲಿ… ನೀವು ಭಾರತದ ಗೌರವಕ್ಕೆ ಧಕ್ಕೆ ತಂದಿದ್ದೀರಿ! ಎಂದು ಬರೆದುಕೊಂಡಿದ್ದಾರೆ.