ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಬೆಂಗಳೂರು ಮೂಲದ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ಜಲಾಶಯ ವೀಕ್ಷಣೆಗೆಂದು ಬೆಂಗಳೂರಿನಿಂದ ಒಟ್ಟು ಏಳು ಯುವತಿರು ತೆರಳಿದ್ದರು. ಈ ವೇಳೆ ಓರ್ವ ಯುವತಿ ನೀರಿಗೆ ಬಿದ್ದಿದ್ದಾಳೆ. ಒಬ್ಬಳ ರಕ್ಷಣೆಗೆಂದು ಇನ್ನುಳಿದ ಆರು ಯುವತಿಯರು ಸಹ ನೀರಿಗೆ ಇಳಿದಿದ್ದಾರೆ. ಆದ್ರೆ, ಮೂವರು ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಮೂವರನ್ನು ಯುವಕ ರಕ್ಷಣೆ ಮಾಡಿದ್ದಾನೆ
ರಾಮನಗರ, (ಮೇ 19): ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ರಾಮನಗರ (Ramanagara) ಜಿಲ್ಲೆ ಮಾಗಡಿ ತಾಲೂಕಿನ ವೈಜಿಗುಡ್ಡ ಡ್ಯಾಮ್ನಲ್ಲಿ (YG Gudda reservoir) ನಡೆದಿದೆ. ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಬೆಂಗಳೂರು ಮೂಲದ ರಾಘವಿ(18) ಮಧುಮಿತ(20), ಹಾಗೂ ರಮ್ಯಾ(22) ಎನ್ನುವರು ಮೃತಪಟ್ಟಿದ್ದಾರೆ.ಜಲಾಶಯ ವೀಕ್ಷಣೆಗೆಂದು ತೆರಳಿದ್ದ ಏಳು ಯುವತಿಯರು ಹೋಗಿದ್ದರು. ಈ ಪೈಕಿ ಓರ್ವ ಯುವತಿ ನೀರಿಗೆ ಬಿದ್ದಿದ್ದಾಳೆ. ಈ ವೇಳೆ ಉಳಿದವರು ರಕ್ಷಣೆಗೆ ಧಾವಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಎಲ್ಲರೂ ನೀರಿಗೆ ಬಿದ್ದಿದ್ದು, ಇದರಲ್ಲಿ ಮೂವರು ಯುವತಿಯರು ಮೃತಪಟ್ಟಿದ್ದಾರೆ. ಇನ್ನುಳಿದವರನ್ನು ಯುವಕನೋರ್ವ ರಕ್ಷಣೆ ಮಾಡಿದ್ದಾನೆ.
ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಯುವತಿಯರು, ವೈಜಿ ಗುಡ್ಡ ಜಲಾಶಯ ವೀಕ್ಷಣೆಗೆಂದು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಏಳು ಯುವತಿರು ನೀರಿಗೆ ಬಿದ್ದಾಗ ಸ್ಥಳದಲ್ಲಿದ್ದ ಯುವಕನೋರ್ವ ಕೆಲವರನ್ನು ರಕ್ಷಣೆ ಮಾಡಿದ್ದಾನೆ. ಆದ್ರೆ, ಏಳು ಜನರಲ್ಲಿ ಮೂವರು ಮೃತಪಟ್ಟಿದ್ದಾರೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.