
ಹೈದರಾಬಾದ್: ಮಾದಕ ವಸ್ತುವಾದ ಕೊಕೇನ್ ಸೇವನೆಗಾಗಿ ಹೈದರಾಬಾದ್‌ನ ಒಮೆಗಾ ಆಸ್ಪತ್ರೆಯ ಮಾಜಿ ಮಹಿಳಾ ಸಿಇಒ ಬರೋಬ್ಬರಿ 1 ಕೋಟಿ ರೂಪಾಯಿ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೈದರಾಬಾದ್‌ನ ಪ್ರತಿಷ್ಠಿತ ಒಮೆಗಾ ಆಸ್ಪತ್ರೆಗಳ ಮಾಜಿ ಸಿಇಒ ಡಾ. ನಮ್ರತಾ ಚಿಗುರುಪತಿ (34) ಅವರನ್ನು ಸದ್ಯ ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರೋ (ಟಿಜಿಎಎನ್ಬಿ) ಬಂಧಿಸಿದ್ದಾರೆ. ಜೊತೆಗೆ ಕೊಕೇನ್ ಸರಬರಾಜುದಾರ ವಂಶ್ ಧಕ್ಕರ್ನನ್ನು ಅರೆಸ್ಟ್ ಮಾಡಲಾಗಿದೆ. ಕೊಕೇನ್ ಸರಬರಾಜುದಾರ ಮಾಡುವ ಕಿಂಗ್ ಪಿನ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಡಾ. ನಮ್ರತಾ ಚಿಗುರುಪತಿ ಅವರು ಸ್ಪೇನ್ನಲ್ಲಿ 2021, 2022ರಲ್ಲಿ ಎಂಬಿಎ ವ್ಯಾಸಂಗ ಮಾಡುವಾಗ ಮಾದಕ ವ್ಯಸನಕ್ಕೆ ಒಳಗಾಗಿದ್ದರು. ಅಂದಿನಿಂದ ಕೊಕೇನ್ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಳೆದ ವಾರ ತನ್ನ ಕಾರಿನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಖರೀದಿ ಮಾಡುವಾಗ ಪೊಲೀಸರು ಅರೆಸ್ಟ್ ಮಾಡಿದ್ದರು. ಇಲ್ಲೊಂದು ಸಂಗತಿ ಎಂದರೆ ಕೊಕೇನ್ ಅನ್ನು ವಾಟ್ಸ್ಅಪ್ ಮೂಲಕ ಆರ್ಡರ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮಾದಕ ವಸ್ತುವಿಗೆ ಒಳಗಾದ ಮೇಲೆ ಡಾ. ನಮ್ರತಾ ಅವರು ಸುಮಾರು 1 ಕೋಟಿ ಮೌಲ್ಯದ ತನ್ನ ಆಸ್ತಿಯನ್ನು ಮಾರಾಟ ಮಾಡಿದ್ದರು. ಇದೇ ಹಣದಿಂದ ಕೊಕೇನ್ ಅನ್ನು ವಾಟ್ಸ್ಅಪ್ ಮೂಲಕ ಆರ್ಡರ್ ಮಾಡುತ್ತಿದ್ದರು. ಒಂದು ದಿನದಲ್ಲಿ ಸುಮಾರು 10 ಬಾರಿ ಕೊಕೇನ್ ಸೇವನೆ ಮಾಡುತ್ತಿದ್ದರು. ಮಲಗಿದಾಗ 2-3 ಗಂಟೆಗೊಮ್ಮೆ ಎಚ್ಚರಗೊಳ್ಳುತ್ತಿದ್ದಳು. ನಿದ್ದೆ ಬಾರದಿದ್ದಾಗ ನಿದ್ದೆಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.