ಮಂಗಳೂರು : ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆಯ ನಂತರ ಜಿಲ್ಲೆಯಲ್ಲಿ ಮುಂಜಾಗ್ರತ ಕ್ರಮಕ್ಕಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದ್ರಷ್ಟಿಯನ್ನಿಟ್ಟು ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಿದ್ದು ಇದನ್ನು ಉಲ್ಲಂಘಿಸಿ ಶವ ಮೆರವಣಿಗೆಯ ಸಂದರ್ಭ ನೂರಾರು ಜನ ಬಿಸಿರೋಡ್ ಜಂಕ್ಷನ್ ನಲ್ಲಿ ಸೇರಿದ್ದು ಆ ಮಾರ್ಗವಾಗಿ ಸಂಚರಿಸುವ ರಿಕ್ಷಾಕ್ಕೆ ಹಾನಿಗೊಳಿಸಿ ಚಾಲಕನಿಗೆ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯಲ್ಲಿ ಆಗ್ರಹಿಸುತ್ತಾ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾ ನಿಯೋಗ ಸಂತ್ರಸ್ಥರನ್ನು ಭೇಟಿಯಾಗಿ ಸಾಂತ್ವನ ಮತ್ತು ಧೈರ್ಯ ತುಂಬಿತು
ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರಾಧ್ಯಕ್ಷರಾದ ಇಲ್ಯಾಸ್ ಬೆಂಗ್ರೆ ಎಸ್.ಡಿ.ಟಿ.ಯು ದಕ್ಷಿಣ ವಲಯ ಅಧ್ಯಕ್ಷರಾದ ಇಕ್ಬಾಲ್ ಬಿ.ಪಿ ಕೋಶಾಧಿಕಾರಿ ಶರೀಫ್ ಕುತ್ತಾರ್ ಹಾಗು ಹನೀಫ್ ಎಮ್ .ಎಚ್ ನಿಯೋಗದಲ್ಲಿದ್ದರು.