ಭಾರತ ಮಧ್ಯರಾತ್ರಿ ನಡೆಸಿದ ದಾಳಿಯಲ್ಲಿ ಎಂಟು ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ ಎಂದು ಐಎಸ್‌ಪಿಆರ್ ಹೇಳಿದೆ. ಪ್ರತೀಕಾರವಾಗಿ ಪಾಕಿಸ್ತಾನ ಸೇನೆ ಮೂರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ.
ನವದೆಹಲಿ (ಮೇ.7): ಭಾರತ ಮಧ್ಯರಾತ್ರಿ ನಡೆಸಿದ ದಾಳಿಯಲ್ಲಿ ಎಂಟು ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ.
ಬೆಳಿಗ್ಗೆ 4:08 ಕ್ಕೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಭಾರತವು ಆರು ಸ್ಥಳಗಳಲ್ಲಿ ವಿವಿಧ ಶಸ್ತ್ರಾಸ್ತ್ರಗಳೊಂದಿಗೆ ಒಟ್ಟು 24 ಇಂಪ್ಯಾಕ್ಟ್‌ಗಳನ್ನು ವರದಿ ಮಾಡಿದೆ. ನಮ್ಮ ಹಾನಿಯ ಅಂದಾಜಿನ ಆಧಾರದ ಮೇಲೆ ಈ ಆರು ಸ್ಥಳಗಳಲ್ಲಿ ಎಂಟು ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ, 35 ಮಂದಿ ಗಾಯಗೊಂಡಿದ್ದಾರೆ ಮತ್ತು ಇಬ್ಬರು ಕಾಣೆಯಾಗಿದ್ದಾರೆ” ಎಂದು ಹೇಳಿದರು.
“[ಬಹ್ವಾಲ್ಪುರದ] ಅಹ್ಮದ್ಪುರ ಪೂರ್ವದಲ್ಲಿ, ಸುಭಾನ್ ಮಸೀದಿಯನ್ನು ಭಾರತ ಟಾರ್ಗೆಟ್ ಮಾಡಿತ್ತು” ಎಂದು ಹೇಳಿದ್ದಾರೆ. “ಇಲ್ಲಿ, ನಾಲ್ಕು ದಾಳಿಗಳು ನಡೆದವು ಮತ್ತು ಮೂರು ವರ್ಷದ ಬಾಲಕಿ ಸೇರಿದಂತೆ ಐದು ಅಮಾಯಕ ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ. 25 ಪುರುಷರು ಮತ್ತು ಆರು ಮಹಿಳೆಯರು ಸೇರಿದಂತೆ ಮೂವತ್ತೊಂದು ನಾಗರಿಕರು ಗಾಯಗೊಂಡಿದ್ದಾರೆ.”
ಒಂದು ಮಸೀದಿ ಸಂಪೂರ್ಣವಾಗಿ ನಾಶವಾಗಿದೆ. ಅದರೊಂದಿಗೆ ಜನರು ವಾಸಿಸುತ್ತಿದ್ದ ನಾಲ್ಕು ಕ್ವಾರ್ಟರ್‌ಗಳು ಸಹ ನಾಶವಾದವು ಎಂದು ಅವರು ಹೇಳಿದರು. “ಮುಜಫರಾಬಾದ್‌ನಲ್ಲಿ ಬಿಲಾಲ್ ಮಸೀದಿಯನ್ನು ಗುರಿಯಾಗಿಸಲಾಗಿತ್ತು. ಏಳು ಇಂಪ್ಯಾಕ್ಟ್‌ಗಳು ಸಂಭವಿಸಿದ್ದು, ಇದರಲ್ಲಿ ಒಬ್ಬ ಹುಡುಗಿ ಗಾಯಗೊಂಡಿದ್ದಾಳೆ ಮತ್ತು ಒಂದು ಮಸೀದಿ ನಾಶವಾಗಿದೆ” ಎಂದು ತಿಳಿಸಿದ್ದಾರೆ
ಮುರಿಡ್ಕೆಯಲ್ಲಿ, ಉಮಲ್ಕುರ ಮಸೀದಿಯನ್ನು ಗುರಿಯಾಗಿಸಿಕೊಂಡು ನಾಲ್ಕು ದಾಳಿಗಳು ನಡೆದಿವೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ, ಮತ್ತೊಬ್ಬ ಗಾಯಗೊಂಡಿದ್ದಾನೆ. ಇಬ್ಬರು ಕಾಣೆಯಾಗಿದ್ದಾರೆ” ಎಂದು ಅವರು ಹೇಳಿದರು. “ಒಂದು ಮಸೀದಿ ನಾಶವಾಗಿದೆ ಮತ್ತು ಕುಂಬಾರರು ಆರ್ಥಿಕ ಹಾನಿಯನ್ನು ಅನುಭವಿಸಿದ್ದಾರೆ” ಎಂದು ಡಿಜಿ ಚೌಧರಿ ಮಾಹಿತಿ ನೀಡಿದ್ದಾರೆ.
“ಸಿಯಾಲ್‌ಕೋಟ್ ಜಿಲ್ಲೆಯ ಕೋಟ್ಕಿ ಲೋಹರಾ ಗ್ರಾಮದಲ್ಲಿ ಎರಡು ಬಾರಿ ದಾಳಿ ನಡೆಸಲಾಗಿದೆ” ಎಂದು ಅವರು ಹೇಳಿದರು. “ಒಂದು ಕ್ಷಿಪಣಿ ತಪ್ಪಾಗಿ ಉಡಾಯಿಸಲ್ಪಟ್ಟರೆ, ಇನ್ನೊಂದು ತೆರೆದ ಮೈದಾನದಲ್ಲಿ ಬಿದ್ದಿತು. ಯಾವುದೇ ಹಾನಿಯಾಗಿಲ್ಲ. ಶಕರ್‌ಗಢ ಬಳಿ ಎರಡು ಬಾರಿ ಗುಂಡಿನ ಹಾರಾಟ ನಡೆದಿದ್ದು, ಯಾವುದೇ ಹಾನಿಯಾಗಿಲ್ಲ. ಒಂದು ಔಷಧಾಲಯಕ್ಕೆ ಸಣ್ಣಪುಟ್ಟ ಹಾನಿಯಾಗಿದೆ” ಎಂದು ಅವರು ಹೇಳಿದರು.

“ಪ್ರಚೋದನಕಾರಿಯಲ್ಲದ, ಹೇಡಿತನದ ದಾಳಿಗೆ” ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ISPR ಡಿಜಿ ಹೇಳಿದರು. “ನಾವು ಅದನ್ನು ನೀಡುತ್ತಿದ್ದೇವೆ ಮತ್ತು ಅದನ್ನು ನೀಡುತ್ತಲೇ ಇರುತ್ತೇವೆ” ಎಂದು ಅವರು ಹೇಳಿದರು.
ಕೋಟ್ಲಿ, ಬಹವಾಲ್ಪುರ್, ಮುರಿಡ್ಕೆ, ಬಾಗ್ ಮತ್ತು ಮುಜಫರಾಬಾದ್ ತಾಣಗಳ ಮೇಲೆ ಮಧ್ಯರಾತ್ರಿಯ ದಾಳೀ ನಡೆದ ನೆರೆಯ ರಾಷ್ಟ್ರ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆ ಮೂರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದರೂ, ಇದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ.

ಎರಡು ಜೆಟ್‌ಗಳ ಪತನವನ್ನು ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು ಬೆಳಗಿನ ಜಾವ 2:45 ರ ಸುಮಾರಿಗೆ ದೃಢಪಡಿಸಿದರು, ಅವರು ಪ್ರತಿಕ್ರಿಯೆ ಮುಂದುವರೆದಿದೆ ಎಂದು ಹೇಳಿದರು, ಆದರೆ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿಲ್ಲ.
“ನಾವು ಎರಡು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಮತ್ತು ನಾವು ಮಾತನಾಡುತ್ತಿರುವಾಗ ಭಾರತದ ಆಕ್ರಮಣಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ” ಎಂದು ಅವರು ಬ್ರಿಟಿಷ್ ಟಿವಿ ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ. “ಭಾರತೀಯ ವಾಯುಪಡೆಯ ಎರಡು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ದೃಢೀಕರಿಸಬಲ್ಲೆ. ಇಲ್ಲಿಯವರೆಗೆ ನಾನು ಹೇಳಿರುವ ಸ್ಥಳಗಳು ಭಾರತದ [ಪಂಜಾಬ್] ಭಟಿಂಡಾ ಮತ್ತು [ಆಕ್ರಮಿತ ಕಾಶ್ಮೀರದಲ್ಲಿರುವ] ಅಖ್ನೂರ್ ಸುತ್ತಲೂ ಇವೆ” ಎಂದು ಚೌಧರಿ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಬೆಳಗಿನ ಜಾವ 3:42 ಕ್ಕೆ, ಪಿಟಿವಿ “ಪಾಕಿಸ್ತಾನ ವಾಯುಪಡೆಯು ಅವಂತಿಪೋರಾದ ನೈಋತ್ಯಕ್ಕೆ 17 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮತ್ತೊಂದು ಭಾರತೀಯ ರಫೇಲ್ ವಿಮಾನವನ್ನು ಹೊಡೆದುರುಳಿಸಿದೆ. ಇಲ್ಲಿಯವರೆಗೆ, ಪಾಕಿಸ್ತಾನ ವಾಯುಪಡೆಯು ಭಾರತೀಯ ವಾಯುಪಡೆಯ ಮೂರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ತಿಳಿಸಿದ.
“ಭಾರತೀಯ ಮಾಧ್ಯಮಗಳು, ಉನ್ಮಾದದಿಂದ ತುಂಬಿ ತುಳುಕುತ್ತಿದ್ದು, ಪಾಕಿಸ್ತಾನ ವಾಯುಪಡೆಯ ನಷ್ಟ ಮತ್ತು ಹಾನಿಗೊಳಗಾದ ವಿಮಾನಗಳ ಸುಳ್ಳು ಹೇಳಿಕೆಗಳ ಬಗ್ಗೆ ನಿರಂತರವಾಗಿ ಸುಳ್ಳು ಕಥೆಗಳನ್ನು ಪ್ರಕಟಿಸುತ್ತಿವೆ” ಎಂದು ಪ್ರಸಾರಕರು ತಿಳಿಸಿದೆ. “ಯಾವುದೇ ಪಾಕಿಸ್ತಾನ ವಾಯುಪಡೆಯ ವಿಮಾನವು ಯಾವುದೇ ಹಾನಿಯನ್ನು ಅನುಭವಿಸಿಲ್ಲ” ಎಂದಿದೆ