ಮಂಗಳೂರು:
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ನೌಶಾದ್ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು ನಿರಪರಾಧಿಯಾದ ಅವರು ತನ್ನ ಹೊಟ್ಟೆಪಾಡಿಗಾಗಿ ಕಲ್ಲಾಪು ಮಾರ್ಕೆಟ್ಗೆ ಹೋಗಿ ದುಡಿಯುತ್ತಿದ್ದು ಮೊನ್ನೆ ರಾತ್ರಿ ಮೂರು ಗಂಟೆಗೆ ಮಾರ್ಕೆಟಿಗೆ ಹೋಗಲು ವಾಹನ ಕಾಯುತ್ತಿದ್ದ ವೇಳೆ ಮೂರು ದುಷ್ಕರ್ಮಿಗಳು ಬಂದು ಅವರ ಹೊಟ್ಟೆಗೆ ಚಾಕು ಹಾಕಿದ್ದರು. ತೀವ್ರ ಗಾಯ ಗೊಂಡಿರುವ ನೌಶಾದ್ ರವರ ಕುಟುಂಬಸ್ಥರು ಹಲ್ಲೆಯ ಭಯಾನಕತೆ ಬಗ್ಗೆ ತಿಳಿಸಿದರು

ನಿಯೋಗದಲ್ಲಿ SKSSF ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಗಳ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ,
ಕಾರ್ಯದರ್ಶಿ ಆರೀಫ್ ಕಮ್ಮಾಜೆ ,
ಜಿಲ್ಲಾ ವಿಖಾಯ ಚೆರ್ಮೆನ್ ಇಬ್ರಾಹಿಂ ಕುಕ್ಕಟೆ ಉಪಸ್ಥಿತರಿದ್ದರು
