ಜೆರುಸಲೇಂ, ಮೇ 1: ಜೆರುಸಲೆಮ್ ಹೊರವಲಯದಲ್ಲಿ ಭಾರಿ ಕಾಡ್ಗಿಚ್ಚುಗಳು ಉಂಟಾಗಿದ್ದು, ಇಸ್ರೇಲ್ ಅಧಿಕಾರಿಗಳು ಕೇವಲ 24 ಗಂಟೆಗಳಲ್ಲಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಬೇಕಾಯಿತು. 13 ಕ್ಕೂ ಅಧಿಕ ಮಂದಿಗಂಭೀರಾಗಿ ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಬೆಟ್ಟಗಳ ತುದಿಯಲ್ಲಿ ದಟ್ಟವಾದ ಹೊಗೆ ಆವರಿಸಿದೆ.

ಅನೇಕ ಮಂದಿ ತಮ್ಮ ಕಾರುಗಳನ್ನು ಬಿಟ್ಟು ಜ್ವಾಲೆಯಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. 160 ಕ್ಕೂ ಹೆಚ್ಚು ರಕ್ಷಣಾ ಮತ್ತು ಅಗ್ನಿಶಾಮಕ ದಳಗಳು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿವೆ.
