ಮಂಗಳೂರು, ಏಪ್ರಿಲ್ 29: ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಹಿಂದೂಗಳು ಕೇವಲ ತಲ್ವಾರ್ ತೋರಿಸಿದ್ದರೆ ಸಾಕಿತ್ತು, ಕಥೆಯೇ ಬೇರೆಯಾಗುತ್ತಿತ್ತು ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗ್ನಲ್ಲಿ ಚೂರಿ ಇಟ್ಟುಕೊಳ್ಳಿ ಎಂದು ಕರೆ ನೀಡಿದರು

ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗ್ನಲ್ಲಿ ಪೌಡರ್, ಬಾಚಣಿಗೆ ಜೊತೆಗೆ ಚಾಕು ಇಟ್ಟುಕೊಳ್ಳಿ. 6 ಇಂಚಿನ ಚೂರಿ ಇಟ್ಟುಕೊಳ್ಳಲು ಯಾವುದೇ ಲೈಸೆನ್ಸ್ ಬೇಡ. ಸಂಜೆ ಮೇಲೆ ಓಡಾಡಿದ್ರೆ ನಿಮ್ಮ ಮೇಲೆ ಖಂಡಿತಾ ಅಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡ್ರೆ ನಿಮ್ಮ ಕಥೆ ಮುಗಿಯಿತು. ಅದರ ಬದಲು ಚೂರಿ ತೋರಿಸಿ, ‘‘ಬಾ’’ ಎಂದು ಸವಾಲು ಹಾಕಿದರೆ ಸಾಕು ಹೆದರಿ ಓಡುತ್ತಾರೆ ಎಂದು ಅವರು ಹೇಳಿದರು.
