ಬಂಟ್ವಾಳ :ಅಡ್ಡೂರು ಸಮೀಪದ ಪುಂಚಮೆಯಲ್ಲಿ ನೂತನವಾಗಿ ನಿರ್ಮಾಣವಾದ ಅಲ್ಲಾಹನ ಪವಿತ್ರ ಭವನವಾದ ಮಸ್ಜಿದ್ ಅಲ್ ಮರಿಯಮ್ ಮಸೀದಿಯಲ್ಲಿ ಸಂಭ್ರಮ ದಿಂದ ಈದುಲ್ ಫಿತರ್ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಖುತುಬಾ ಪಾರಾಯಣ ನಡೆಸಿ ಸಂದೇಶ ನೀಡಿದ ಮೌಲವಿ ಬಿಲಾಲ್ ಕೊಚ್ಚಿ ಯವರು ದೇಶದ ಸರ್ವರಿಗೂ ಶಾಂತಿ, ಸಹಬಾಳ್ವೆಯ ನಿರ್ಭಯದ ಜೀವನ ಸಿಗಲಿ ಎಂದು ಪ್ರಾರ್ಥಿಸಿದರು. ರಂಜಾನ್ ತಿಂಗಳಲ್ಲಿ ಇದ್ದ ದೇವಭಯ ಜೀವನ ಪೂರ್ತಿ ಅನುಸರಿಸ ಬೇಕೆಂದು ಹಿತವಚನ ನೀಡಿದರು.


ಜಮಾತಿನ ಎಲ್ಲಾ ಭಾಂದವರು ಈ ಸಂದರ್ಭದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಸ್ಜಿದ್ ಅಲ್ ಮರಿಯಮ್ ವತಿಯಿಂದ ಸಮಾಜದ ಎಲ್ಲಾ ಬಂಧುಗಳಿಗೂ ಈದ್ ಶುಭಾಶಯ ನೀಡಿದರು.




