ಬರೋಬ್ಬರಿ 30 ಸಾವಿರದಷ್ಟು ಜನರಿಗೆ ಇಫ್ತಾರ್ ಸೇವೆ
8.50 ಲಕ್ಷ (ಎಂಟು ಲಕ್ಷ ಐವತ್ತು ಸಾವಿರ) ವೆಚ್ಚ
150 ವಿಖಾಯ ಕಾರ್ಯಕರ್ತರಿಂದ ಸೇವೆ
ಎಲ್ಲವೂ ಉಚಿತ
🖊️ಆರೀಫ್ ಕಮ್ಮಾಜೆ
ಕಾರ್ಯದರ್ಶಿ SKSSF ದ. ಕ ಜಿಲ್ಲೆ ವೆಸ್ಟ್
SKSSF ದ. ಕ ಜಿಲ್ಲಾ ಈಸ್ಟ್ ಸಮಿತಿ ಮತ್ತು ವೆಸ್ಟ್ ಜಿಲ್ಲಾ ಸಮಿತಿ ಹಾಗೂ ಹಾಸನ ಜಿಲ್ಲಾ ಸಮಿತಿ ವತಿಯಿಂದ ನಡೆದ ಹೈವೇ ಇಫ್ತಾರ್ ಟೆಂಟ್ ನ ಶ್ಲಾಘನೀಯ ಸೇವೆ.
ಮಂಗಳೂರಿನ ಪಡೀಲ್ ಜನಪ್ರಿಯ ಆಸ್ಪತ್ರೆ ಬಳಿ SKSSF ಮಂಗಳೂರು ವಲಯ,
ಬಿ. ಸಿ ರೋಡ್ ನಾರಾಯಣ ಗುರು ವೃತ್ತದ ಬಳಿ ಬಂಟ್ವಾಳ ವಲಯ,
ಕಬಕ ಜಂಕ್ಷನ್ ಬಳಿ ಪುತ್ತೂರು ವಲಯ, ಮಡಂತ್ಯಾರು ಜಂಕ್ಷನ್ ನಲ್ಲಿ ಮಡಂತ್ಯಾರು ಕ್ಲಸ್ಟರ್ ಸಮಿತಿ ,ಹಾಸನ ಜಿಲ್ಲಾ ಸಮಿತಿ ವತಿಯಿಂದ ಸಕಲೇಶಪುರದಲ್ಲಿ ಉಪವಾಸಿ ಯಾತ್ರಾರ್ಥಿಗಳ ಇಫ್ತಾರ್ ಗಾಗಿ ಇಫ್ತಾರ್ ಟೆಂಟ್ ಅಳವಡಿಸಲಾಗಿತ್ತು. ಉಪವಾಸದ ಒಂದು ತಿಂಗಳಿನಲ್ಲಿ ಪ್ರತಿ ದಿನವೂ ಎಲ್ಲಾ ಇಫ್ತಾರ್ ಟೆಂಟ್ ಗಳಲ್ಲಿ ಸರಿ ಸುಮಾರು 300 ರಿಂದ 350 ಮಂದಿ ಉಚಿತ ಸೇವೆ ಪಡೆದಿರುತ್ತಾರೆ.

ಪಡೀಲ್ ನ ಪಸ್ಟ್ ನ್ಯೂರೋ ಆಸ್ಪತ್ರೆ, ಜನಪ್ರಿಯ ಆಸ್ಪತ್ರೆ, ಬಂಟ್ವಾಳ ಸರಕಾರಿ ಆಸ್ಪತ್ರೆ , ಸೋಮಯಾಜಿ ಆಸ್ಪತ್ರೆ ,ಪರ್ಲಿಯ ನರ್ಸಿಂಗ್ ಹೋಂ, ಶೆಣೈ ಕ್ಲಿನಿಕ್ ಮುಂತಾದ ಆಸ್ಪತ್ರೆಯ ರೋಗಿಗಳ ಕುಟುಂಬಸ್ಥ ಉಪವಾಸಿಗರಿಗೆ ಇಫ್ತಾರ್ ಸೇವೆ ನೀಡಲಾಗಿದೆ. ಈ ಇಫ್ತಾರ್ ಸೇವೆ ಮಂಗಳೂರು ಪರಿಸರದ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಉಪಕಾರವಾಗಿದೆ. ಇದು ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ ಇರುವ ರೋಗೀಗಳ ಸಂಬಂಧಿಕರಿಗೆ ಇಫ್ತಾರ್ ಹಾಗೂ ಸಹರಿ ವ್ಯವಸ್ಥೆಯನ್ನು SKSSF ವಿಖಾಯ ಸದಸ್ಯರು ಮಾಡಿರುತ್ತಾರೆ.

ಅದೇ ರೀತಿ ಪ್ರತಿದಿನವೂ ಈ ಹೈವೇ ಇಫ್ತಾರ್ ಟೆಂಟ್ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು 150 ಕಿಂತಲೂ ಅಧಿಕ SKSSF ವಿಖಾಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಣೆ ಮಾಡಿರುವುದು ಇಫ್ತಾರ್ ಟೆಂಟ್ ಯಶಶ್ವಿ ಗೆ ಪ್ರಮುಖ ಕಾರಣ
ತಮ್ಮ ಮನೆಯಲ್ಲಿ ವಿಶೇಷ ರೀತಿಯ ಇಫ್ತಾರ್ ಇದ್ದರೂ ಕೂಡ ಹಲವು ಕಡೆ ಗೆಳೆಯರು ಸಂಬಂಧಿಕರ ಮನೆಯಲ್ಲಿ ಇಫ್ತಾರ್ ಕೂಟಗಳು ಇದ್ದರೂ ಉಪವಾಸದ ಎಲ್ಲಾ ದಿನವೂ ಇಫ್ತಾರ್ ಟೆಂಟ್ ನಲ್ಲೇ SKSSF ವಿಖಾಯದ ಆಕ್ಟೀವ್ ವಿಂಗ್ ಸದಸ್ಯರು.ಹಾಗೂ ವಿಜಿಲೆಂಟ್ ವಿಖಾಯ ಕಾರ್ಯಕರ್ತರು ಉಪವಾಸ ತೋರೆಯುತಿದ್ದು ಪ್ರಶಂಶನಿಯ.
ಈ ಸೇವೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು
ಹಾಟ್ಸ್ ಆಫ್ SKSSF ವಿಖಾಯ
