ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2025-26ರ ಬಜೆಟ್ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದು ಕರೆಯಲಾಗುವ ಜಾತಿ ಸಮೀಕ್ಷೆ ಮೇಲೆ ಬಜೆಟ್ ಮಂಡನೆ ಮಾಡಬೇಕಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ಅದಾಗ್ಯೂ, ಬಜೆಟ್ ಅನ್ನು ಯಾವ ಅಂಕಿ ಅಂಶಗಳ ಮೇಲೆ ಹಂಚಿಕೆ ಮಾಡಿದೆ ಎಂದು ಹೇಳುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಬಿಎಂ ಹನೀಫ್ ಅವರು ಹೇಳಿದರು.

‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ಬುಧವಾರ ಭಾಗವಹಿಸಿ ‘ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಕಲ್ಯಾಣ’ ಎಂಬ ವಿಚಾರದಲ್ಲಿ ಮಾತನಾಡುತ್ತಿದ್ದರು. 185 ಕೋಟಿ ವೆಚ್ಚ ಮಾಡಿದ ಈ ಸಮೀಕ್ಷೆಯ ಪ್ರಯೋಜನವೇನು ಎಂದ ಅವರು ಸಿದ್ದರಾಮಯ್ಯಾ ಅವರ ಬಜೆಟ್‌ಗೆ ವೈಜ್ಷಾನಿಕ ತಳಹದಿಯೆ ಇಲ್ಲ ಎಂದರು

ಕಳೆದ ಬಾರಿ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡನೆಯಾಗಿದೆ. ಈ ಬಾರಿಯ ಬಜೆಟ್ 4 ಲಕ್ಷ ಕೋಟಿ ರೂ. ದಾಟಿದೆ. ಅದಾಗ್ಯೂ, ಧಾರ್ಮಿಕ ಅಲ್ಪಸಂಖ್ಯಾತರಿಗೆ 4,400 ಕೋಟಿ ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಇದ್ದಾರೆ. ಸುಮಾರು 18% ಅಲ್ಪಸಂಖ್ಯಾತರಿಗೆ ಮೀಸಲಿಟ್ಟ 4,400 ಕೋಟಿ ರೂ.ಗಳು ಬಜೆಟ್‌ನ 1% ಕೂಡಾ ಆಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು 16 ಬಾರಿ ಬಜೆಟ್ ಮಂಡಿಸಬೇಕಾಗಿಲ್ಲ, ಸಾಮಾನ್ಯ ಜ್ಞಾನವಿದ್ದರೆ ಸಾಕು” ಎಂದು ಅವರು ಹೇಳಿದರು.

ಧಾರ್ಮಿಕ ಅಲ್ಪಸಂಖ್ಯಾತರಿಗೆ 1% ಅಷ್ಟೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಇದನ್ನು ಅವರ ಸಾಧನೆ ಎಂದು ಹೇಳಬೇಕೆ? ಜಾತಿ ಸಮೀಕ್ಷೆ ಆಧಾರಲ್ಲಿ ಬಜೆಟ್ ಅನ್ನು ಹಂಚಿದ್ದರೆ, ಎಲ್ಲಾ ಸಮುದಾಯಕ್ಕೆ ಬೇಕಾದ ಪಾಲು ಸಿಗುತ್ತಿತ್ತು. ಆದರೆ ಈ ಜಾತಿ ಸಮೀಕ್ಷೆ ಪ್ರದರ್ಶನದ ವಸ್ತು ಮಾತ್ರವಾಗಿದೆ” ಎಂದು ಹೇಳಿದ್ದಾರೆ.

ಬಜೆಟ್‌ನಲ್ಲಿ ಕ್ರಿಶ್ಚಿಯನ್ನರಿಗೆ 250 ಕೋಟಿ ರೂ. ಎಂದು ಘೋಷಣೆ ಮಾಡಲಾಗಿದೆ. ಆದರೆ ಅವರಿಗೆ ಹಂಚಿಕೆಯಾಗುವುದು 80 ಕೋಟಿಯಷ್ಟೆ ಎಂಬುವುದನ್ನು ಹನೀಫ್ ಅವರು ಎತ್ತಿತೋರಿಸಿದರು. “2 ಕೋಟಿ ರೂ. ಗಳ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಬಜೆಟ್‌ನಲ್ಲಿ ಹೇಳಿದೆ. ಈ ಬಗ್ಗೆ ಬಲಪಂಥೀಯರು, ಬಿಜೆಪಿ ಭಾರಿ ಗದ್ದಲ ಮಾಡಿದೆ. ಆದರೆ ಈ ಹಿಂದೆಯೆ ರಾಜ್ಯದ ಎಲ್ಲಾ ಸಮುದಾಯಕ್ಕೆ ಈ ಮೀಸಲಾತಿ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ನೀಡಿದ ಮೀಸಲಾತಿಯನ್ನು ಮಾತ್ರ ಎತ್ತಿ ತೋರಿಸಿದೆ” ಎಂದು ಹೇಳಿದರು.

ಧಾರ್ಮಿಕ ಅಲ್ಪಸಂಖ್ಯಾತರಿಗೆ 1% ಅಷ್ಟೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಇದನ್ನು ಅವರ ಸಾಧನೆ ಎಂದು ಹೇಳಬೇಕೆ? ಜಾತಿ ಸಮೀಕ್ಷೆ ಆಧಾರಲ್ಲಿ ಬಜೆಟ್ ಅನ್ನು ಹಂಚಿದ್ದರೆ, ಎಲ್ಲಾ ಸಮುದಾಯಕ್ಕೆ ಬೇಕಾದ ಪಾಲು ಸಿಗುತ್ತಿತ್ತು. ಆದರೆ ಈ ಜಾತಿ ಸಮೀಕ್ಷೆ ಪ್ರದರ್ಶನದ ವಸ್ತು ಮಾತ್ರವಾಗಿದೆ” ಎಂದು ಹೇಳಿದ್ದಾರೆ.
Edited by :Ashraf Kammaje
ಕೃಪೆ :ನಾನು ಗೌರಿ