ಮಾರ್ಚ್ 9: ಕಳೆದ ಐದು ವರ್ಷಗಳಿಂದ ನಿರಂತರವಾಗಿ ಫ್ರೀ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಫ್ರೆಂಡ್ಸ್ ಸಜೀಪ ಮತ್ತು “ಕ್ರಿಕೆಟ್ ಸಜೀಪ” ಎಂಬ ಯುವಕರ ವಾಟ್ಸಾಪ್ ಗುಂಪು, ಇಂದು ಸಜೀಪ ನಡು ಬಸ್ ಸ್ಟ್ಯಾಂಡ್ ಬಳಿ ಬೃಹತ್ ಇಫ್ತಾರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ಮಕ್ಕಳು ಮತ್ತು ಪ್ರಯಾಣಿಕರು ಸೇರಿ ಸುಮಾರು 1000 ಜನರು ಪಾಲ್ಗೊಂಡಿದ್ದರು.
ಸಜೀಪನಡು ಗ್ರಾಮದ ಉತ್ಸಾಹಿ ಯುವಕರು, ರಂಝಾನ್ ತಿಂಗಳ ಉಪವಾಸದ ಮಹತ್ವವನ್ನು ಅರಿತು, ಸಮಾಜದಲ್ಲಿ ಬದಲಾವಣೆಗಳನ್ನು ತರಲು, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮುದಾಯದ ಅಗತ್ಯಗಳನ್ನು ಪೂರೈಸಲು, ಸಕ್ರಿಯವಾಗಿ ಪಾಲ್ಗೊಳ್ಳಬಹುದು ಎಂಬ ಸಂದೇಶ ನೀಡಲಾಯಿತು.

“ಈ ಕಾರ್ಯಕ್ರಮಕ್ಕಾಗಿ ಗ್ರಾಮದ ಹಿರಿಯರಿಂದ ದೊರಕಿದ ಮಾರ್ಗದರ್ಶನ ನಮಗೆ ಮಾದರಿಯಾಯಿತು,” ಎಂದು ಯುವಕರ ತಂಡದ ಸದಸ್ಯರಾದ ತಾಹೀದ್ ಸಜೀಪ ಹೇಳಿದರು.
ಕೋರೋಣಾ ಸಮಯದಲ್ಲಿ ಪ್ರಾರಂಭವಾದ ಈ ತಂಡವು, ಗ್ರಾಮದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದರ ಜೊತೆಗೆ, ಬಡ ಕುಟುಂಬಗಳ ಮದುವೆ, ರೋಗಿಗಳ ಆರೈಕೆ ಹೀಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ.

“ಕ್ರಿಕೆಟ್ ಸಜೀಪ ವಾಟ್ಸಾಪ್ ಗ್ರೂಪಿನ ಸಹೋದರರ ಸಂಘಟಿತ ಪ್ರಯತ್ನದಿಂದಾಗಿ ಇಂತಹ ಯಶಸ್ವಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಯಿತು. ಸುಮಾರು 100ಕ್ಕೂ ಹೆಚ್ಚು ‘ಕ್ರಿಕೆಟ್ ಸಜೀಪ’ ವಾಟ್ಸಾಪ್ ಗುಂಪಿನ ಯುವಕರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದ ಕಾರಣ, ಇಂದು ಸಜೀಪನಡು ಗ್ರಾಮದಲ್ಲಿ ಶಾಂತಿ ಮತ್ತು ಏಕತೆ ಹರಡುವುದರೊಂದಿಗೆ ನಮ್ಮ ನಂಬಿಕೆ ಮತ್ತು ಮೌಲ್ಯಗಳನ್ನು ಪ್ರೇರೇಪಿಸುವಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಯಿತು,” ಎಂದರು

ಈ ಕಾರ್ಯಕ್ರಮವು ಯುವಕರ ಸಂಘಟನೆಯ ಮಹತ್ವವನ್ನು ಪ್ರೇರೇಪಿಸಿ, ಸಮುದಾಯದ ಒಕ್ಕೂಟವನ್ನು ಮತ್ತು ಸಮಾಜದಲ್ಲಿ ಬದಲಾವಣೆಯನ್ನು ತರುವುದಕ್ಕೆ ಪ್ರೇರಣೆಯಾಗಿದೆ.
