ಮಂಗಳೂರು:ಫೆ 27 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ 2024ರ ವಿರುದ್ಧ ನಾಳೆ ಶುಕ್ರವಾರ ಮಂಗಳೂರಿನಲ್ಲಿ ಬೃಹತ್ ವಕ್ಫ್ ಸಂರಕ್ಷಣಾ ರ್‍ಯಾಲಿ ಮತ್ತು ಪ್ರತಿಭಟನೆ ನಡೆಯಲಿದೆ ಎಂದು ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಒಕ್ಕೂಟ ಸರಕಾರವು ಜಾರಿಗೆ ತರಲು ಹೊರಟಿರುವ ಮಾರಕ ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿ ತೀರ್ಮಾನವಾಗಿದೆ. ಇಂತಹ ಜನ ವಿರೋದಿ, ಅಲ್ಪಸಂಖ್ಯಾತ, ಮುಸ್ಲಿಂ ವಿರೋದಿ , ನಿಲುವನ್ನು ನಾಡಿನ ಎಲ್ಲಾ ಪ್ರಜ್ಞಾವಂತ ದೇಶಪ್ರೇಮಿ ನಾಗರೀಕರು, ಪ್ರಗತಿಪರರು, ಮಹಿಳೆಯರು, ವಿದ್ಯಾರ್ಥಿಗಳು ಪಕ್ಷಭೇದ, ಸಂಘಟನಾ ಬೇಧ, ಜಾತಿಭೇದ ಮರೆತು ಬೆಂಬಲಿಸಲು ಮನವಿ ಮಾಡಿದ್ದಾರೆ.

ಶುಕ್ರವಾರ ಅಪರಾಹ್ನ 3:00 ಗಂಟೆಗೆ ಮಂಗಳೂರಿನ ಜ್ಯೋತಿ (ಅಂಬೇಡ್ಕರ್) ಸರ್ಕಲ್ ನಿಂದ ಆರಂಭವಾಗುವ ಸಂರಕ್ಷಣಾ ರ್‍ಯಾಲಿಯು ಕ್ಲಾಕ್ ಟವರ್ ಬಳಿ ಸಮಾಪ್ತಿಗೊಂಡು ಪ್ರತಿಭಟನಾ ಸಭೆ ನಡೆಯಲಿದೆ ಈ ರ್‍ಯಾಲಿಯೊಂದಿಗೆ ಹೆಜ್ಜೆ ಹಾಕುವ ಮೂಲಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕೆಂದು ಎಂದು ಜಮಾಲ್ ಜೋಕಟ್ಟೆ ನಾಗರಿಕರಲ್ಲಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
